ಚೀನಾದಲ್ಲಿ ಶೂನ್ಯ ಕೋವಿಡ ನೀತಿಯಲ್ಲಿ ವಿನಾಯತಿ ನೀಡಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಕೊರೋನಾದ ಸೋಂಕು ತಗಲಿದೆ !

ಮುಂದಿನ ೯೦ ದಿನಗಳಲ್ಲಿ ಲಕ್ಷಾಂತರ ಜನರ ಸಾವಿನ ಸಾಧ್ಯತೆ !

ಬೀಜಿಂಗ (ಚೀನಾ) – ಚೀನಾದಲ್ಲಿ ಶೂನ್ಯ ಕೊವಿಡ ನೀತಿಯಲ್ಲಿ ವಿನಾಯತಿ ನೀಡಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾದ ಸೋಂಕು ತಗಲಿದೆ. ಇಲ್ಲಿ ಆಸ್ಪತ್ರೆಯಲ್ಲಿ ಎಲ್ಲಾ ಹಾಸಿಗೆಗಳು ತುಂಬಿದ್ದು, ಅನೇಕ ಸ್ಥಳಗಳಲ್ಲಿ ಔಷಧಿ ಕೂಡ ಸಿಗುತ್ತಿಲ್ಲ ಮತ್ತು ಎಲ್ಲಿ ಸಿಗುತ್ತಿದೆ ಅಲ್ಲಿ ಸಾಲು ಸಾಲಾಗಿ ಜನರು ಕಾಯುತ್ತಿರುವುದು ದೃಶ್ಯ ಕಾಣುತ್ತಿದೆ. ಬೀಜಿಂಗ್ ನಲ್ಲಿನ ಸ್ಮಶಾನ ಭೂಮಿಯಲ್ಲಿ ೨೪ ಗಂಟೆಗಳ ಕಾಲ ಅಂತ್ಯಸಂಸ್ಕಾರ ಮಾಡಲಾಗುತ್ತಿದೆ ಹಾಗೂ ೨ ಸಾವಿರ ಶವಗಳ ಸಂಸ್ಕಾರ ಬಾಕಿ ಉಳಿದಿದೆ. ತಜ್ಞರ ಅಭಿಪ್ರಾಯ ಚೀನಾದಲ್ಲಿ ಕೊರೊನಾದ ಪ್ರಕರಣಗಳು ದಿನದಲ್ಲಿ ಅಲ್ಲ, ಗಂಟೆಗಳಲ್ಲಿ ದುಪ್ಪಟ್ಟು ಆಗುತ್ತಿದೆ. ವಿಶೇಷವೆಂದರೆ ಚೀನಾದಲ್ಲಿ ಶೇಕಡ ೮೦ ರಷ್ಟು ಜನರು ಕೊರೋನಾ ತಡೆಗಟ್ಟುವಿಕೆ ಲಸಿಕೆಯ ಎಲ್ಲಾ ಡೋಸ ತೆಗೆದುಕೊಂಡಿದ್ದಾರೆ.

ಅಮೇರಿಕಾದ ವಿಜ್ಞಾನಿ ಮತ್ತು ಮಹಾಮಾರಿಯ ತಜ್ಞ ಏರಿಕ್ ಫೆಂಗಲ್-ಡಿಂಗ್ ಇವರು, ಮುಂದಿನ ೯೦ ದಿನದಲ್ಲಿ ಚೀನಾದ ಶೇಕಡ ೬೦ ರಷ್ಟು ಜನಸಂಖ್ಯೆ ಮತ್ತು ಜಗತ್ತಿನ ಶೇಕಡ ೧೦ ರಷ್ಟು ಜನಸಂಖ್ಯೆಗೆ ಕೊರೊನಾದ ಸಂಕ್ರಮಣ ಆಗುವುದು. ಇದರಲ್ಲಿ ಸುಮಾರು ೧೦ ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ ಎಂದು ಎಚ್ಚಿರಿಕೆಯನ್ನು ನೀಡಿದ್ದಾರೆ.