ಮಧ್ಯಪ್ರದೇಶದಲ್ಲಿನ ಮದರಸಾಗಳಲ್ಲಿನ ವಾಚನ ಸಾಹಿತ್ಯದ ಪರಿಶೀಲನೆ ನಡೆಸುವಂತೆ ಗೃಹ ಸಚಿವರ ಆದೇಶ

ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ

ಭೋಪಾಲ್ (ಮಧ್ಯಪ್ರದೇಶ) – ರಾಜ್ಯದಲ್ಲಿನ ಕೆಲವು ಮದರಸಾಗಳಲ್ಲಿ ಅಕ್ಷೇಪಾರ್ಹ  ಸಂಗತಿಗಳನ್ನು/ವಿಷಯಗಳನ್ನುಕಲಿಸಲಾಗುತ್ತಿರುವುದಕ್ಕೆ ಸಂಬಂಧಪಟ್ಟ ಮಾಹಿತಿಯುನಮಗೆ ಸಿಕ್ಕಿದೆ. ಅಯೋಗ್ಯ ಪರಿಸ್ಥಿತಿಯನ್ನು ತಪ್ಪಿಸುವುದಕ್ಕಾಗಿ ಶಿಕ್ಷಣ ಇಲಾಖೆಯಿಂದ ಮದರಸಾಗಳಲ್ಲಿನ ವಾಚನ ಸಾಹಿತ್ಯದ ಪರಿಶೀಲನೆಗೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಇದರಿಂದ ಮದರಸಾಗಳಲ್ಲಿ ಕಲಿಸಲಾಗುವ ಪಠ್ಯಕ್ರಮದಲ್ಲಿ ಇನ್ನೂ ಎಷ್ಟು ಸುಧಾರಣೆಯ ಅವಶ್ಯಕತೆಯಿದೆ ಎಂಬುದೂ  ತಿಳಿಯಬಹುದು, ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ ಮಿಶ್ರಾ ಇವರು ಪತ್ರಕರ್ತರ ಜೊತೆಗೆ ಮಾತನಾಡುವಾಗ ಹೇಳಿದರು.