ಕರ್ನಾಟಕ ಸರಕಾರ ಹಲಾಲ ಮಾಂಸವನ್ನು ನಿರ್ಬಂಧಿಸಲು ವಿಧೇಯಕವನ್ನು ಮಂಡಿಸುವುದು.

ಜಗತ್ತಿನ ಅನೇಕ ದೇಶಗಳು ಹಲಾಲ ಮಾಂಸವನ್ನು ನಿರ್ಬಂಧಿಸಿವೆ.

ಬೆಂಗಳೂರು– ಕರ್ನಾಟಕ ಸರಕಾರ ಈಗ ಪ್ರಾರಂಭವಾಗಿರುವ ವಿಧಾನಮಂಡಳದ ಚಳಿಗಾಲದ ಅಧಿವೇಶನದಲ್ಲಿ ಹಲಾಲ ಮಾಂಸವನ್ನು ನಿರ್ಬಂಧಿಸುವ ವಿಧೇಯಕವನ್ನು ಮಂಡಿಸಲಿದೆ. ಈ ವಿಧೇಯಕವನ್ನು ವಿರೋಧಿ ಪಕ್ಷದವರು ಈಗಿನಿಂದಲೇ ವಿರೋಧಿಸುತ್ತಿದ್ದಾರೆ. ಈ ವಿಧೇಯಕದ ಮೂಲಕ `ಫುಡ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ ಆಕ್ಟ 2006’ ದಲ್ಲಿಯೂ ಬದಲಾವಣೆ ಮಾಡಲಾಗುತ್ತಿದೆ. ಈ ಮೂಲಕ ಯಾವುದೇ ಖಾಸಗಿ ಸಂಸ್ಥೆಗೆ ಆಹಾರ ಪ್ರಮಾಣಪತ್ರ ನೀಡುವುದರ ಮೇಲೆ ನಿರ್ಬಂಧ ವಿಧಿಸಲಾಗುವುದು. ಇದರಿಂದ ಹಲಾಲ ಪ್ರಮಾಣ ಪತ್ರದ ಮೇಲೆಯೂ ನಿರ್ಬಂಧ ಬರಲಿದೆ. ಒಂದು ವೇಳೆ ಈ ಕಾಯಿದೆ ವಿಧಾನ ಸಭೆಯಲ್ಲಿ ಸಮ್ಮತಿಗೊಂಡರೆ, ಕರ್ನಾಟಕ ರಾಜ್ಯವು ಹಲಾಲ ಮಾಂಸದ ಮೇಲೆ ನಿರ್ಬಂಧ ವಿಧಿಸಿರುವ ಮೊದಲ ರಾಜ್ಯವಾಗಲಿದೆ. ಕರ್ನಾಟಕದಲ್ಲಿ ಎಪ್ರಿಲ್ ಮಾಹೆಯಲ್ಲಿ ಹಲಾಲ ಮಾಂಸದ ಮೇಲೆ ವಿವಾದಗಳು ಆಗಿದ್ದವು. ಹಿಂದೂ ಸಂಘಟನೆಗಳು ಹಿಂದೂಗಳಿಗೆ ರಾಜ್ಯದ ಯುಗಾದಿ(ಹೊಸವರ್ಷ) ಉತ್ಸವದ ಸಮಯದಲ್ಲಿ ಹಲಾಲ ಮಾಂಸವನ್ನು ಖರೀದಿಸದೇ ಇರುವಂತೆ ಕರೆ ನೀಡಿದ್ದರು.

ಜಗತ್ತಿನಲ್ಲಿ ಬೆಲ್ಜಿಯಂ, ನೆದರಲ್ಯಾಂಡ, ಜರ್ಮನಿ, ಸ್ಪೇನ, ಸೈಪ್ರಸ್, ಆಸ್ಟ್ರಿಯಾ ಮತ್ತು ಗ್ರೀಸ ಈ ದೇಶಗಳಲ್ಲಿ ಹಲಾಲ ಮಾಂಸದ ಮೇಲೆ ನಿರ್ಬಂಧ ವಿಧಿಸುವ ಕಾಯಿದೆಯಿದೆ. ಜಗತ್ತಿನಲ್ಲಿ ಹಲಾಲ ಮಾಂಸದ ನಿರ್ಯಾತ ಮಾಡುವ ದೇಶಗಳಲ್ಲಿ ಕೆಲವು ಮುಸಲ್ಮಾನೇತರ ದೇಶಗಳೂ ಇವೆ. ಅದರಲ್ಲಿ ಬ್ರೆಜಿಲ್, ಆಸ್ಟ್ರೇಲಿಯಾ, ಫ್ರಾನ್ಸ ಚೀನಾ ಮತ್ತು ಭಾರತ ಈ ದೇಶಗಳಾಗಿವೆ.