ಬಿಹಾರದಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿ ಹತ್ಯೆ

  • ಮೃತದೇಹ ವನ್ನು ಕಂದಕ ದಲ್ಲಿ ಹುಗಿದರು.

  • ಬಾಲಕಿ ನಾಪತ್ತೆ ಆಗಿರುವ ದೂರು ದಾಖಲಿಸಿದ ಬಳಿಕವೂ ಪೊಲೀಸರು ನಿಷ್ಕ್ರಿಯರಾಗಿರುವ ಬಗ್ಗೆ ಗ್ರಾಮಸ್ಥರ ಆರೋಪ

ಪಾಟಲಿಪುತ್ರ(ಬಿಹಾರ)- ಬಿಹಾರದ ಬಗಹಾ ದಲ್ಲಿ ಒಬ್ಬ 13ವರ್ಷದ ಬಾಲಕಿಯ ಮೇಲೆ ಸಾಮೂಹಿಕವಾಗಿ ಬಲಾತ್ಕಾರ ಮಾಡಿ ಅವಳನ್ನು ಅಮಾನುಷವಾಗಿ ಹತ್ಯೆ ಮಾಡಿದ ಬಳಿಕ ಅವಳ ಮೃತದೇಹವನ್ನು ನದಿ ದಂಡೆಯಲ್ಲಿ ಹುಗಿದಿರುವ ಘಟನೆ ಬಹಿರಂಗ ವಾಗಿದೆ. ಈ ಬಾಲಕಿ ಡಿಸೆಂಬರ್ 15ರಿಂದ ನಾಪತ್ತೆ ಆಗಿದ್ದಳು.

೧. ಡಿಸೆಂಬರ್ 18 ರಂದು ಅವಳ ಕುಟುಂಬದ ವರು ಮತ್ತು ಗ್ರಾ.ಮಸ್ಥರು ಅವಳನ್ನು ಹುಡುಕುತ್ತಾ ನದಿಯ ದಡದಲ್ಲಿ ಇತ್ತೀಚೆಗೆ ಅಷ್ಟೇ ಅಗೆದಿರುವುದು ಕಂಡು ಬಂದಿತು. ಅದರ ಮೇಲೆ ಮುಳ್ಳಿನ ಗಿಡವನ್ನು ಎಸೆಯಲಾಗಿತ್ತು.

೨. ಗ್ರಾಮಸ್ಥರಿಗೆ ಸಂಶಯಬಂದು ಅವರು ಆ ಜಾಗೆಯನ್ನು ಅಗೆದಾಗ ಅಲ್ಲಿ ಬಾಲಕಿಯ ಮೃತ ದೇಹ ಕಂಡು ಬಂದಿತು.ಗುಂಡಿಯ ಹತ್ತಿರ ಬಾಲಕಿಯ ಸಮವಸ್ತ್ರ ಬಿದ್ದಿತ್ತು. ಕಬ್ಬಿನ ಗದ್ದೆಯಲ್ಲಿ ಅವಳ ಪಾದರಕ್ಷೆ ಕಂಡು ಬಂದಿತು. ಈ ಘಟನೆಯ ಮಾಹಿತಿ ಸಿಗುತ್ತಲೇ ಪೊಲೀಸ್ ರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಪ್ರಾರಂಭಿಸಿದರು.

೩. ಬಾಲಕಿಯ ಮೃತ ದೇಹ ಕಂಡು ಬಂದ ಬಳಿಕ ಗ್ರಾಮಸ್ತರು ಕ್ರೋಧಿತರಾದರು. ಅವರು ರಸ್ತೆ ಗಿಳಿದು ಪ್ರತಿಭಟನೆ ನಡೆಸಿದ ರು.ಬಾಲಕಿ ಕಾಣೆಯಾದ ಬಳಿಕ ನೊಂದ ಕುಟುಂಬದ ವರು ಗ್ರಾಮ ದ ಒಬ್ಬ ಯುವತಿಯ ಮೇಲೆ ಸಂಶಯ ವ್ಯಕ್ತ ಪಡಿಸಿದ್ದರು. ಆದರೆ ಪೊಲೀಸರು ತಕ್ಷಣ ವೇ ಹುಡುಕಾಟ ನಡೆಸಲಿಲ್ಲ. ಇದರಿಂದಾಗಿ ಬಾಲಕಿಯ ಮೃತ ದೇಹ ವನ್ನು ನೋಡಬೇಕಾಯಿತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

೪. ಪೊಲೀಸರ ಮಾಹಿತಿ ಯನುಸಾರ ಕಬ್ಬಿನ ಗದ್ದೆಯಲ್ಲಿ ಮೊದಲು ಅವಳ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಲಾಗಿದೆ. ಬಳಿಕ ನದಿಯ ದಂಡೆಯಲ್ಲಿ ಗುಂಡಿ ತೋಡಿ ಅವಳ ಮೃತ ದೇಹವನ್ನು ಹುಗಿಯಲಾಗಿದೆ.

ಸಂಪಾದಕೀಯ ನಿಲುವು

ಬಿಹಾರದ ಲ್ಲಿ ಮತ್ತೊಮ್ಮೆ ಜಂಗಲರಾಜ ನಿರ್ಮಾಣ ವಾಗಿದೆ. ಅದರದೇ ಇದೊಂದು ಉದಾಹರಣೆ. ವಿಷಕಾರಿ ಸಾರಾಯಿ ಪ್ರಕರಣದಲ್ಲೂ ಪೊಲೀಸರು ನಿಷ್ಕ್ರಿಯ ರಾಗಿದ್ದರಿಂದಲೇ ನಡೆದಿದೆ. ಇದನ್ನು ನೋಡಿದರೆ ಬಿಹಾರದ ಲ್ಲಿ ಈಗ ರಾಷ್ಟ್ರ ಪತಿ ಆಡಳಿತ ಜಾರಿಗೊಳಿಸುವುದು ಆವಶ್ಯಕ ವಾಗಿದೆ.