ಭಾರತವು ಕಾಂಬೋಡಿಯಾದ ಅಂಕೋರವಾಟ್ ಮಂದಿರದ ಜೀರ್ಣೋದ್ಧಾರ ಮಾಡುತ್ತಿದೆ !- ವಿದೇಶಾಂಗ ಸಚಿವ ಎಸ್. ಜಯಶಂಕರ

ಕಾಂಬೋಡಿಯಾದ ಅಂಕೋರವಾಟ್ ಮಂದಿರ

ವಾರಣಸಿ (ಉತ್ತರಪ್ರದೇಶ) – ಮಂದಿರಗಳು ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ರಕ್ಷಕವಾಗಿವೆ. ಮೋದಿ ಸರಕಾರದ ಗಮನ ಸಂಪೂರ್ಣ ಜಗತ್ತಿನಲ್ಲಿರುವ ಭಾರತದ ಸಮೃದ್ಧ ಪರಂಪರೆಯ ಪುನರ್ನಿರ್ಮಾಣದ ಕಡೆಗಿದೆ. ಭಾರತದ ಸಂಸ್ಕೃತಿ ಅನೇಕ ದೇಶಗಳಲ್ಲಿ ಹರಡಿದೆ. ಈ ಹಿನ್ನೆಲೆಯಲ್ಲಿ ಭಾರತ ಕಾಂಬೋಡಿಯಾದ ಅಂಕೋರವಾಟ್ ಮಂದಿರ ದ ಜೀರ್ಣೋದ್ಧಾರ ಮಾಡುತ್ತಿದೆ, ಎನ್ನುವ ಮಾಹಿತಿಯನ್ನು ವಿದೇಶಾಂಗ ಸಚಿವರಾದ ಎಸ್ ಜಯಶಂಕರ್ ಇವರು ಇಲ್ಲಿ ಆಯೋಜಿಸಲಾದ ‘ಕಾಶಿ ತಮಿಳು ಸಂಗಮ’ ನಲ್ಲಿ ‘ಸಮಾಜ ಮತ್ತು ರಾಷ್ಟ್ರ ನಿರ್ಮಾಣ ದಲ್ಲಿ ಮಂದಿರಗಳ ಯೋಗದಾನ’ ಇದರ ಬಗ್ಗೆ ಮಾತನಾಡುವಾಗ ನೀಡಿದರು.

ವಿದೇಶಾಂಗ ಸಚಿವರಾದ ಎಸ್ ಜಯಶಂಕರ್

ಎಸ್‌ ಜಯಶಂಕರ್ ತಮ್ಮ ಮಾತನ್ನು ಮುಂದುವರಿಸಿ ,

೧. ನಮ್ಮ ಮಂದಿರಗಳನ್ನು ನಿರ್ಲಕ್ಷ್ಯ ಮಾಡುವ ಕಾಲ ಹೋಗಿದೆ. ಈಗ ಇತಿಹಾಸದ ಚಕ್ರ ತಿರುಗಿದ್ದು ಮತ್ತೆ ಭಾರತದ ಉದಯವಾಗುತ್ತಿದೆ. ನಮ್ಮ ಸರಕಾರ ಸಂಪೂರ್ಣ ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಇವುಗಳಿಗೆ ಯೋಗ್ಯ ಸ್ಥಾನ ಮಾನ ದೊರಕಿಸಿ ಕೊಡಲು ಕಟ್ಟಿಬದ್ಧವಾಗಿದೆ.

೨. ನಾನು ಕೆಲವು ವರ್ಷ ಚೀನಾದಲ್ಲಿ ರಾಯಭಾರಿಯಾಗಿಕಾರ್ಯ ನಿರ್ವಹಿಸಿದ್ದೇನೆ. ಅಲ್ಲಿಯ ಪೂರ್ವದ ಭಾಗದಲ್ಲಿ ನಾನು ಹಿಂದೂಗಳ ದೇವಸ್ಥಾನದ ಅವಶೇಷಗಳನ್ನು ನೋಡಿದ್ದೇನೆ. ಕೊರಿಯಾ ಮತ್ತು ಅಯೋಧ್ಯೆಯೊಂದಿಗೆ ವಿಶೇಷ ಸಂಬಂಧ ಇದೆ ಮತ್ತು ಅಲ್ಲಿಯ ಜನರು ಅದನ್ನು ಉಳಿಸಲು ಇಚ್ಛಿಸುತ್ತಿದ್ದಾರೆ.

೩. ಜಾಗತಿಕ ಮಟ್ಟದಲ್ಲಿ ದೇವಸ್ಥಾನದ ಸಂರಕ್ಷಣೆ ಮಾಡುವುದು ಅವಶ್ಯಕವಾಗಿದೆ. ಸರಕಾರ ಇದಕ್ಕಾಗಿ ಪ್ರಯತ್ನ ಮಾಡುತ್ತಿದೆ. ಅಮೇರಿಕಾದಲ್ಲಿ ೧ ಸಾವಿರಕ್ಕಿಂತಲೂ ಅಧಿಕ ಮಂದಿರಗಳಿವೆ. ವಿದೇಶದಲ್ಲಿ ಮೂರುವರೆ ಕೋಟಿ ಹಿಂದೂಗಳಿದ್ದಾರೆ. ಅವರು ಅಲ್ಲಿ ನಮ್ಮ ಸಂಸ್ಕೃತಿಯನ್ನು ಕೊಂಡೊಯ್ದಿದ್ದಾರೆ ಮತ್ತು ಪ್ರತಿದಿನ ಅವರು ನಮ್ಮ ಸಂಸ್ಕೃತಿಯಂತೆ ನಡೆದುಕೊಳ್ಳುತ್ತಿದ್ದಾರೆ.

೪. ನೇಪಾಳದಲ್ಲಿ ‘ರಾಮಾಯಣ ಸರ್ಕೀಟ್’ ತಯಾರಿಸುವುದಕ್ಕಾಗಿ ನಮ್ಮ ಸರಕಾರವು ೨೦೦ ಕೋಟಿ ರೂಪಾಯಿಗಳನ್ನು ನೀಡಲು ಒಪ್ಪಿದೆ. ಶ್ರೀಲಂಕಾದಲ್ಲಿನ ಮನ್ನಾರದಲ್ಲಿ ಕೂಡ ಥಿರುಕೆತೀಶ್ವರ ಮಂದಿರದ ಜೀರ್ಣೋದ್ಧಾರವನ್ನು ಭಾರತವು ಮಾಡಿದೆ. ಈ ಮಂದಿರವು ಕಳೆದ ೧೨ ವರ್ಷದಿಂದ ಮುಚ್ಚಿತ್ತು.

೫. ಮಂದಿರಗಳು ಕೇವಲ ಶ್ರದ್ಧೆ ಮತ್ತು ಪೂಜೆಯ ಸ್ಥಾನವಲ್ಲ. ಅದು ಸಾಮಾಜಿಕ ಕೇಂದ್ರ, ಸಭೆ, ಜ್ಞಾನ ಮತ್ತು ಸಂಸ್ಕೃತಿಗಳ ಕೇಂದ್ರವಾಗಿದೆ. ಎಲ್ಲಕ್ಕಿಂತ ಮಹತ್ವದ್ದು ಎಂದರೆ ಮಂದಿರಗಳು ನಮ್ಮ ಪರಂಪರೆ ಮತ್ತು ಇತಿಹಾಸ ಹೇಳುವ ಕೇಂದ್ರಗಳಾಗಿವೆ. ಮಂದಿರಗಳು ನಮ್ಮ ಜೀವನ ಪದ್ಧತಿಯಾಗಿದೆ.