ವೃದ್ಧಾಪ್ಯಕಾಲದ ಪೂರ್ವಸಿದ್ಧತೆ ಎಂದು ಈಗಿನಿಂದಲೇ ಮನೋಲಯದ ಅಭ್ಯಾಸವನ್ನು ಮಾಡಿಕೊಳ್ಳಿರಿ ಮತ್ತು ಪರಾತ್ಪರ ಗುರು ಡಾ. ಆಠವಲೆಯವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ಆಧ್ಯಾತ್ಮಿಕ ಸಂಸ್ಥೆಗಳಿಂದ ನಿರ್ಮಿಸಲಿರುವ `ಸಾಧಕ-ವೃದ್ಧಾಶ್ರಮ’ಗಳ ಮಹತ್ವವನ್ನು ತಿಳಿದುಕೊಳ್ಳಿರಿ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
(ಪೂ.) ಸಂದೀಪ ಆಳಶಿ

೧. ವೃದ್ಧಾಪ್ಯದ ಕಾಲದಲ್ಲಾಗುವಮನಸ್ಸಿನ ಸಂಘರ್ಷವನ್ನು ಎದುರಿಸಲು ಈಗಿನಿಂದಲೇ ಮನೋಲಯದ ಅಭ್ಯಾಸವನ್ನು ಮಾಡಿಕೊಳ್ಳಿರಿ

೧ ಅ. ವೃದ್ಧಾಪ್ಯ ಕಾಲದ ಕೆಲವು ಸಮಸ್ಯೆಗಳು ಮತ್ತು ದುಃಖ : `ವೃದ್ಧಾಪ್ಯಕಾಲದಲ್ಲಿ ಕೆಲಸವನ್ನು ಮಾಡುವ ಶಾರೀರಿಕ ಕ್ಷಮತೆ ಕಡಿಮೆಯಾಗುವುದ ರಿಂದ ಚಿಕ್ಕಪುಟ್ಟ ವಿಷಯಗಳಿಗೂ ಕುಟುಂಬ ದವರನ್ನು ಅವಲಂಬಿಸಿರಬೇಕಾಗುತ್ತದೆ. ಕೆಲವೊಂದು ಸಲ ವಸ್ತುಗಳನ್ನು ಖರೀದಿಸಲು ಬೇಕಾಗುವ ಹಣವನ್ನು ಕೂಡ ಕುಟುಂಬದವರ ಬಳಿ ಬೇಡ ಬೇಕಾಗುತ್ತದೆ. ಕುಟುಂಬದವರು ತಿನ್ನಲು-ಕುಡಿಯಲು ಏನು ಕೊಡುತ್ತಾರೆಯೋ, ಅದರಲ್ಲಿಯೇಸಮಾಧಾನದಿಂದ  ಇರಬೇಕಾಗುತ್ತದೆ. ಕುಟುಂಬ ದವರು ನಮ್ಮನ್ನು ಯಾವ ಪರಿಸ್ಥಿತಿಯಲ್ಲಿ ಇಡುತ್ತಾರೆಯೋ, ಆ ಪರಿಸ್ಥಿತಿಯನ್ನು ನಾವುಸ್ವೀಕರಿಸಬೇಕಾಗುತ್ತದೆ. ವೃದ್ಧಾಪ್ಯದಲ್ಲಿ ಶಾರೀರಿಕ ತೊಂದರೆಗಳೂ ಹೆಚ್ಚಾಗುತ್ತವೆ ಮತ್ತು ವಯೋಮಾನಕ್ಕನುಸಾರ ಅವುಗಳ ಉಪಚಾರಕ್ಕೂ ಒಂದು ಮಿತಿ ಬರುತ್ತದೆ.  ಇಂತಹ ಸಮಯದಲ್ಲಿ ಆ ನೋವುಗಳನ್ನು ಸಹಿಸಿಕೊಳ್ಳುವುದು ಬಿಟ್ಟರೆ ಬೇರೇ ಉಪಾಯ ಇರುವುದಿಲ್ಲ.

ವೃದ್ಧಾಪ್ಯದಲ್ಲಿ ನಮಗೆ ಹೆಚ್ಚಾಗಿ ಓಡಾಡಲು ಸಾಧ್ಯವಾಗದ ಕಾರಣ ಒಂದೇ ಸ್ಥಳದಲ್ಲಿ ಕುಳಿತುಕೊಂಡಿರಬೇಕಾಗುತ್ತದೆ. ಇದರಿಂದ ಏಕಾಂಗಿ ಭಾವನೆ ಹೆಚ್ಚಾಗುತ್ತದೆ. ಬಹಳಷ್ಟುಮನೆಗಳಲ್ಲಿ `ಕುಟುಂಬದವರು ತಮ್ಮ ವೃದ್ಧ ತಂದೆ-ತಾಯಂದಿರನ್ನು ನೋಡಿಕೊಳ್ಳುವ ಕೃತಿಯನ್ನು `ಈಗ ನಮಗೆ ಈ ಕಾರ್ಯವನ್ನು ನಿರ್ವಾಹವಿಲ್ಲದೇ ಮಾಡಲೇ ಬೇಕಾಗುತ್ತದೆ’, ಎನ್ನುವ ಭಾವನೆಯಿಂದ ಮಾಡುತ್ತಿರುತ್ತಾರೆ ಆದ್ದರಿಂದ ಅದರಲ್ಲಿ ಪ್ರೀತಿ ಇರುವುದಿಲ್ಲ. ಕೆಲವೊಮ್ಮೆ ಕುಟುಂಬದವರು ತಮ್ಮವೃದ್ಧ ತಂದೆ ತಾಯಂದಿರನ್ನು ನೋಡಿಕೊಳ್ಳುವ ಕಿರಿಕಿರಿ ಬೇಡವೆಂದು ಅವರನ್ನು ವೃದ್ಧಾಶ್ರಮಗಳಿಗೆ ಸೇರಿಸುವ ದುಷ್ಕೃತ್ಯವನ್ನು ಕೂಡ ಮಾಡುತ್ತಾರೆ. ಇಂತಹ ಎಲ್ಲ ವಿಷಯಗಳಿಂದ ವೃದ್ಧಾಪ್ಯದಲ್ಲಿ ಮನಸ್ಸಿನಲ್ಲಿ ಬಹಳಷ್ಟು ಸಂಘರ್ಷವಾಗುತ್ತದೆ ಅಥವಾ ಕೆಲವೊಮ್ಮೆ ತೀವ್ರ ನಿರಾಶೆ ಬರುತ್ತದೆ.

೧ ಆ. ಯುವಕರೇ, `ನಾಳೆ ನೀವೂ ಕೂಡ ವೃದ್ಧರಾಗುವವರೇ ಇದ್ದೀರಿ’ ಇದನ್ನು ಗಮನದಲ್ಲಿ ತೆಗೆದುಕೊಂಡು ಇಂದೇ ಜಾಗೃತರಾಗಿರಿ !

೧. ನಮ್ಮ ಹಿಂದೂ ಸಂಸ್ಕೃತಿಯು `ತಂದೆ-ತಾಯಿ ದೇವರಿಗೆ ಸಮಾನ’, ಎಂದು ಕಲಿಸುತ್ತದೆ. ಆದುದರಿಂದ ಇಂದಿನ ಯುವಕರು `ತಮ್ಮ ಅಯೋಗ್ಯ ನಡೆ-ನುಡಿಗಳಿಂದ ತಂದೆ-ತಾಯಿಗೆದುಃಖವಾಗುತ್ತಿಲ್ಲವಲ್ಲ’, ಎಂಬುದನ್ನು ಗಂಭೀರ ವಾಗಿ ವಿಚಾರ ಮಾಡಬೇಕು; ಏಕೆಂದರೆ ಹೀಗೆ ಮಾಡುವುದು ಪಾಪವಾಗಿದೆ ಮತ್ತು ಇದರ ಫಲವನ್ನು ಇಂದಲ್ಲ-ನಾಳೆ ಭೋಗಿಸಲೇ ಬೇಕಾಗುತ್ತದೆ.

೨. ಇಂದಿನ ಯುವಕರೊಂದಿಗೆ ಭವಿಷ್ಯದಲ್ಲಿ ಅವರ ಮಕ್ಕಳು ಅಯೋಗ್ಯವಾಗಿ ವರ್ತಿಸಬಾರದೆಂದು ಅವರು ಈಗಿನಿಂದಲೇ ತಮ್ಮ ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರಗಳನ್ನು  ಮೂಡಿಸಬೇಕು.

೩. ಇಂದು ಯುವಕರಾಗಿರುವವರು `ತಮ್ಮವೃದ್ಧಾಪ್ಯದಲ್ಲಿ ಅನುಭವಿಸಬೇಕಾದ ಸಮಸ್ಯೆಗಳನ್ನು ಸಹಜತೆಯಿಂದ ಎದುರಿಸಲು ಸಾಧ್ಯವಾಗಬೇಕು’, ಎನ್ನುವ ದೃಷ್ಟಿಯಿಂದ ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಅವರು ತಮ್ಮ ಆಹಾರ-ವಿಹಾರಗಳನ್ನು, ಇಷ್ಟಾನಿಷ್ಟಗಳನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು. `ನಾನು ಹೇಳಿದಂತೆಯೇ ಆಗಬೇಕು’, ಎನ್ನುವ ವೃತ್ತಿಯನ್ನು ತ್ಯಜಿಸಬೇಕು ಮತ್ತು `ಪರಿಸ್ಥಿತಿಯನ್ನು ಸ್ವೀಕರಿಸದಿರುವುದು’, `ಇತರರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದಿರುವುದು’, `ಇತರರಿಂದ ಅಪೇಕ್ಷೆಯನ್ನು ಇಟ್ಟುಕೊಳ್ಳುವುದು’ ಮುಂತಾದಸ್ವಭಾವದೋಷಗಳ ಮೇಲೆ ನಿಯಂತ್ರಣವನ್ನು ಇಟ್ಟುಕೊಳ್ಳಬೇಕು. ಸ್ವಲ್ಪದರಲ್ಲಿ ಹೇಳುವುದಾದರೆ, ಮನೋಲಯದ ಅಭ್ಯಾಸವನ್ನು ಮಾಡಿಕೊಂಡು ಯಾವುದೇ ಪರಿಸ್ಥಿತಿಯಲ್ಲಿ ಆನಂದದಿಂದಿರಲು ಕಲಿಯಬೇಕು. ಇದಕ್ಕಾಗಿ ಸಾಧನೆಯನ್ನೇ ಮಾಡಬೇಕಾಗುತ್ತದೆ. `ಸನಾತನ ಸಂಸ್ಥೆ’ಯು ಸಾಧನೆ ಬಗ್ಗೆ ಯೋಗ್ಯ ಮಾರ್ಗದರ್ಶನ ನೀಡುತ್ತದೆ.

೨. ಪರಾತ್ಪರ ಗುರು ಡಾ. ಆಠವಲೆಯವರಿಗೆ `ಸಾಧಕ-ವೃದ್ಧಾಶ್ರಮ’ಗಳನ್ನು ನಿರ್ಮಿಸ ಬೇಕು, ಎಂದೆಸುವುದರ ಹಿಂದಿನ ಕಾರಣ

ಅ. ಇಂದು ಸನಾತನದ ಆಶ್ರಮದಲ್ಲಿ ಪೂರ್ಣವೇಳೆ ಸೇವೆಯನ್ನು ಮಾಡುವ ಕೆಲವು ಸಾಧಕರು ರೋಗಪೀಡಿತ ಅಥವಾ ವೃದ್ಧರಾಗಿದ್ದಾರೆ.

ಆ. ಇಲ್ಲಿಯವರೆಗೆ ಮನೆಯಲ್ಲಿದ್ದು ಸಾಧನೆಯನ್ನು ಮಾಡಿದ ಸಾಧಕರು ಸರ್ವಸ್ವದ ತ್ಯಾಗವನ್ನು ಮಾಡಿ ಸಾಧನೆಯನ್ನು ಮಾಡಿದ್ದಾರೆ, ವೃದ್ಧಾಪ್ಯಕಾಲದಲ್ಲಿ ಮಕ್ಕಳ ಮನೆಯಲ್ಲಿದ್ದು ಮೊಮ್ಮಕ್ಕಳೊಂದಿಗೆ ಆಟವಾಡುವುದು, ಮನೆಯಲ್ಲಿನ  ದೂರದರ್ಶನವಾಹಿನಿಗಳ ಕಾರ್ಯಕ್ರಮಗಳನ್ನು ನೋಡುವುದು, ಮಾಯೆಯ ಬಗ್ಗೆ ಹರಟೆ ಹೊಡೆಯುವುದು ಇತ್ಯಾದಿಗಳ ಅವರ ಮನಸ್ಸು ರಮಿಸುವುದಿಲ್ಲ. ಅವರಿಗೆ ಸಾಧನೆಯನ್ನು ಬಿಟ್ಟು ಇನ್ಯಾವುದೂ ಬೇಡವೆನಿಸುತ್ತದೆ. `ಇಂತಹ ಸಾಧಕರ ಕೊನೆಯ ಶ್ವಾಸದವರೆಗೆ ಒಳ್ಳೆಯ ಸಾಧನೆಯಾಗಬೇಕು’, ಎಂದು ಅವರನ್ನು ಆಶ್ರಮದಲ್ಲಿ ವಾಸಿಸಲು ಕರೆಯಲಾಗುತ್ತದೆ. ಸದ್ಯ ಇಂತಹವರೂ ನಮ್ಮ ಆಶ್ರಮಗಳಲ್ಲಿ ವಾಸಿಸುತ್ತಿದ್ದಾರೆ. ಪರಾತ್ಪರ ಗುರು ಡಾಕ್ಟರರು ಸನಾತನದಸಾಧಕರಿಗೆ, ಸಹಸಾಧಕರನ್ನು ಮತ್ತು ಅವರ ಕುಟುಂಬದವರನ್ನೂ ತಮ್ಮ ಕುಟುಂಬದವರೇ ಎಂಬ ಭಾವದಿಂದ ನೋಡಲು ಕಲಿಸಿದ್ದಾರೆ. ಆದ್ದರಿಂದ ಸನಾತನದ  ಆಶ್ರಮಗಳಲ್ಲಿ ಎಲ್ಲರೂಒಂದು ಕುಟುಂಬ ಎಂಬ ಭಾವದಿಂದ ವಾಸಿಸುತ್ತಾರೆ. ಪರಾತ್ಪರ ಗುರು ಡಾಕ್ಟರರ ಕಲಿಕೆಯಿಂದ ಆಶ್ರಮದ ಸಾಧಕರು ಅನಾರೋಗ್ಯದಲ್ಲಿರುವ ಅಥವಾ ವೃದ್ಧ ಸಾಧಕರ ಊಟೋಪಚಾರ, ಔಷಧೋಪಚಾರ ಇತ್ಯಾದಿಎಲ್ಲವನ್ನೂ  ಪ್ರೀತಿಯಿಂದ ಮತ್ತು ಸೇವಾಭಾವದಿಂದ ಮಾಡುತ್ತಾರೆ. ಇದರಿಂದ ಅನಾರೋಗ್ಯದಲ್ಲಿರುವ ಅಥವಾ ವೃದ್ಧ ಸಾಧಕರ ಮನಸ್ಸಿನ ಮೇಲೆ ಯಾವುದೇ ಒತ್ತಡ ಬರುವುದಿಲ್ಲ ಅಥವಾ ಅವರಿಗೆ ಆಶ್ರಮದಲ್ಲಿ ವಾಸಿಸಲು ಸಂಕೋಚವೆನಿಸುವುದಿಲ್ಲ, ಅವರು ಆನಂದದಿಂದ ಇರುತ್ತಾರೆ.  ಸನಾತನದ ಸಾಧಕರು ಅನಾರೋಗ್ಯದಲ್ಲಿರುವ ಅಥವಾ ವೃದ್ಧ ಸಾಧಕರ ಎಲ್ಲವನ್ನು ಮಾಡುವುದುಸೇವೆಯೇ ಆಗಿದೆ’, ಎನ್ನುವ ಭಾವದಿಂದ ಮಾಡುತ್ತಿರುವುದರಿಂದ ಅದರಿಂದ ಸಾಧಕರ ಸಾಧನೆಯೂ ಆಗುತ್ತದೆ.

ಪರಾತ್ಪರ ಗುರು ಡಾಕ್ಟರರ ಮನಸ್ಸು ಆಕಾಶದಷ್ಟು ವ್ಯಾಪಕ, ಪ್ರೇಮಭಾವ ಸಾಗರದಷ್ಟು ಆಳಮತ್ತು`ಎಲ್ಲರೂ ಯಾವುದೇ ತೊಂದರೆಯಿಲ್ಲದೇ ಸಾಧನೆಯನ್ನು ಮಾಡಿ ಈಶ್ವರ ಪ್ರಾಪ್ತಿಮಾಡಿಕೊಳ್ಳಬೇಕು’, ಎನ್ನುವ ತಳಮಳ ಹಿಮಾಲಯದಷ್ಟು ಅಗಾಧವಾಗಿದೆ. ಇದರಿಂದಲೇಪರಾತ್ಪರ ಗುರು ಡಾಕ್ಟರರಿಗೆ ಸಾಧಕ-ವೃದ್ಧರ ಅನುಕೂಲಕ್ಕಾಗಿ ಪ್ರಾರಂಭದಲ್ಲಿ ಭಾರತದ ಪ್ರತಿಯೊಂದು ರಾಜ್ಯದಲ್ಲಿ ಮತ್ತು ಮುಂದೆ ಪ್ರತಿಯೊಂದು ಜಿಲ್ಲೆಯಲ್ಲಿ  `ಸಾಧಕ-ವೃದ್ಧಾಶ್ರಮ’ ಗಳು ನಿರ್ಮಾಣವಾಗಬೇಕು, ಎಂದೆನಿಸುತ್ತದೆ. ಪರಾತ್ಪರ ಗುರು ಡಾಕ್ಟರರು ಸ್ಥಾಪನೆ ಮಾಡಿರುವ ಅಥವಾ ಅವರ ಪ್ರೇರಣೆಯಿಂದ ಸ್ಥಾಪನೆಯಾಗಿರುವ ಆಧ್ಯಾತ್ಮಿಕ ಸಂಸ್ಥೆಗಳು ಆದಷ್ಟು ಬೇಗನೇ ಈ ದಿಶೆಯಲ್ಲಿ ಪ್ರಯತ್ನವನ್ನು ಕೂಡ ಮಾಡಲಿವೆ. ಇಂತಹ ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಸಾಧಕರು ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ, ಅವು ಕಡಿಮೆಯೇ’.

– (ಪೂ.) ಶ್ರೀ. ಸಂದೀಪ ಆಳಶಿ (೨೦.೮.೨೦೧೯)