ಮದ್ರಾಸ್ ಉಚ್ಚ ನ್ಯಾಯಾಲಯದ ಶ್ಲಾಘನೀಯ ಆದೇಶ !

ಚೆನ್ನೈ (ತಮಿಳುನಾಡು) – ಮದ್ರಾಸ್ ಉಚ್ಚ ನ್ಯಾಯಾಲಯದ ಮಧುರೈ ನ್ಯಾಯಪೀಠವು ಸಂಪೂರ್ಣ ತಮಿಳುನಾಡು ರಾಜ್ಯದ ದೇವಸ್ಥಾನಗಳಲ್ಲಿ ಸಂಚಾರವಾಣಿ ಉಪಯೋಗವನ್ನು ನಿಷೇಧಿಸಲು ಆದೇಶಿಸಿದೆ ಹಾಗೂ ಭಕ್ತರಿಗೆ ತೊಂದರೆಯಾಗದಿರಲು ದೇವಸ್ಥಾನದ ಹೊರಗೆ ಸಂಚಾರವಾಣಿ ಇರಿಸಲು ‘ಲಾಕರ್ಸ್’ನ ವ್ಯವಸ್ಥೆ ಮಾಡಬೇಕೆಂದು ಕೂಡ ನ್ಯಾಯಾಲಯ ಆದೇಶ ನೀಡಿದೆ. ದೇವಸ್ಥಾನದಲ್ಲಿ ಶುಚಿತ್ವ ಮತ್ತು ಪಾವಿತ್ರ?ಯ ಕಾಪಾಡಲು ಈ ಆದೇಶ ನೀಡಲಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ತಿರುಚೆಂದೂರ್‌ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ಇದಕ್ಕೆ ಸಂಬಂಧಪಟ್ಟ ಅರ್ಜಿ ದಾಖಲಿಸಲಾಗಿತ್ತು. ಇದರ ಬಗ್ಗೆ ನಡೆದ ಆಲಿಕೆಯ ನಂತರ ನ್ಯಾಯಾಲಯ ರಾಜ್ಯ ಸರಕಾರಕ್ಕೆ ಈ ಆದೇಶ ನೀಡಿದೆ. ವಿಶೇಷವೆಂದರೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪಕರಿಂದ ದೇವಸ್ಥಾನದಲ್ಲಿ ಸಂಚಾರವಾಣಿಯನ್ನು ನಿಷೇಧಿಸಲು ಒತ್ತಾಯಿಸಲಾಗಿತ್ತು.
ಕಳೆದ ತಿಂಗಳು ದೇವಸ್ಥಾನ ವ್ಯವಸ್ಥಾಪಕರಿಂದ ಈ ಅರ್ಜಿ ದಾಖಲಿಸ ಲಾಗಿತ್ತು. ಅದರಲ್ಲಿ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಇದು ಒಂದು ಪ್ರಾಚೀನ ದೇವಸ್ಥಾನವಾಗಿದ್ದು ಇಲ್ಲಿನ ವ್ಯವಸ್ಥೆಯಲ್ಲಿ ‘ಆಗಮ’ (ಶಾಸ್ತ್ರ ಜ್ಞಾನ, ಅದರಿಂದ ವೇದಗಳ ಯೋಗ್ಯ ಅರ್ಥ ತಿಳಿಯಲು ಸಾಧ್ಯವಾಗುತ್ತದೆ) ನಿಯಮಾವಳಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಇದರ ಪ್ರಕಾರ ಸಂಚಾರವಾಣಿ, ಕ್ಯಾಮೆರಾ ಅಥವಾ ಛಾಯಾಚಿತ್ರ ಸೆರೆ ಹಿಡಿಯುವುದು ಇದನ್ನು ನಿಷೇಧಿಸಲಾಗಿತ್ತು. ಪ್ರಸ್ತುತ ಸಂಚಾರವಾಣಿಯಿಂದ ಛಾಯಾಚಿತ್ರ ಮತ್ತು ಚಿತ್ರೀಕರಣ ಮಾಡಲಾಗುತ್ತಿತ್ತು. ಮೂರ್ತಿ ಮತ್ತು ಪೂಜಾವಿಧಿ ಇದರ ಛಾಯಾಚಿತ್ರ ಸೆರೆಹಿಡಿಯಲಾಗುತ್ತಿತ್ತು. ಆದ್ದರಿಂದ ಇತರ ಭಕ್ತರಿಗೂ ಇದರಿಂದ ತೊಂದರೆ ಆಗುತ್ತಿತ್ತು. ಸಂಚಾರವಾಣಿ ಮತ್ತು ಕ್ಯಾಮರಾ ಉಪಯೋಗಿಸಬಾರದೆಂದು ಸೂಚನಾಫಲಕದಲ್ಲಿ ಸೂಚನೆ ಬರೆಯಲಾಗಿದ್ದು ದೇವಸ್ಥಾನಕ್ಕೆ ಭಕ್ತರು ಯೋಗ್ಯ ಉಡುಪನ್ನು ಧರಿಸಿ ಬರುವುದು ಅವಶ್ಯಕವಾಗಿದೆ ಎಂದು ಹೇಳಿದೆ.
ಸಂಪಾದಕೀಯ ನಿಲುವುಈ ನಿಯಮವನ್ನು ದೇಶದಲ್ಲಿರುವ ಎಲ್ಲ ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳಲ್ಲಿ ಅನ್ವಯಿಸುವುದ ಅವಶ್ಯಕವಾಗಿದೆ ! ಇಷ್ಟು ಮಾತ್ರವಲ್ಲ, ಹಿಂದೂಗಳ ಮಂದಿರಗಳ ಪಾವಿತ್ರ?ಯ ಮತ್ತು ಶುದ್ಧತೆಯ ಜೋಪಾಸನೆಗಾಗಿ ದೇವಸ್ಥಾನಗಳ ಸರಕಾರಿಕರಣ ರದ್ದುಗೊಳಿಸಿ ಭಕ್ತರ ಕೈಗೆ ಒಪ್ಪಿಸುವ ನಿರ್ಣಯ ತೆಗೆದುಕೊಳ್ಳುವ ಅವಶ್ಯಕತೆಯಿದೆ. |
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ