ನರೇಂದ್ರ ಮೋದಿ ಅವರ ಹತ್ಯೆಯ ಹೇಳಿಕೆ ನೀಡಿರುವ ಕಾಂಗ್ರೆಸ್ಸಿನ ನಾಯಕ ರಾಜಾ ಪಟೇರಿಯಾ ಇವರ ಬಂಧನ

ದಾಮೋಹ (ಮಧ್ಯಪ್ರದೇಶ) – `ಸಂವಿಧಾನ ಉಳಿಸುವುದಿದ್ದರೆ ಪ್ರಧಾನಿ ಮೋದಿ ಅವರ ಹತ್ಯೆಗಾಗಿ ಸಿದ್ದರಾಗಿರಿ’, ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಪ್ರಕರಣದಲ್ಲಿ ಕಾಂಗ್ರೆಸ್ಸಿನ ನಾಯಕ ಮತ್ತು ಮಧ್ಯಪ್ರದೇಶದ ಮಾಜಿ ಸಚಿವ ರಾಜಾ ಪಟೇರಿಯಾ ಇವರನ್ನು ಬಂಧಿಸಲಾಗಿದೆ.

ಪಟೇರಿಯಾ ಇವರ ವಿರುದ್ಧ ದೂರು ದಾಖಲಿಸಲಾದ ನಂತರ ಸ್ಪಷ್ಟೀಕರಣ ನೀಡುವಾಗ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನಗೆ ಹತ್ಯೆ ಅಥವಾ ಹಿಂಸೆಯ ಬಗ್ಗೆ ವಿಶ್ವಾಸವಿಲ್ಲ. ನಾನು ನನ್ನ ಹೇಳಿಕೆಯಿಂದ ಮೋದಿಯವರನ್ನು ಪರಾಭವಗಳಿಸಬೇಕಾಗಿದೆ, ಎಂದು ಹೇಳಲಿಕ್ಕಿತ್ತು ಎಂದಿದ್ದಾರೆ.