ಸಮಾಜ ಮತ್ತು ಸಭ್ಯತೆಯ ವಿಕಾಸದಲ್ಲಿ ಮಂದಿರಗಳ ಬಹುದೊಡ್ಡ ಪಾತ್ರ- ಮದ್ರಾಸ ಉಚ್ಚ ನ್ಯಾಯಾಲಯ

ಚೆನ್ನೈ– ಸಮಾಜ ಮತ್ತು ಸಭ್ಯತೆಯ ವಿಕಾಸದಲ್ಲಿ ಮಂದಿರಗಳು ಬಹುದೊಡ್ಡ ಪಾತ್ರವನ್ನು ವಹಿಸಿವೆ. ಸಂಸ್ಕೃತಿಯ ಪೋಷಣೆಗೆ ಮಂದಿರಗಳು ನಿಯಮಿತವಾಗಿ ಮತ್ತು ಪಾರಂಪರಿಕವಾಗಿ ಮಾಡಿರುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆಯೆಂದು ಮದ್ರಾಸ ಉಚ್ಚ ನ್ಯಾಯಾಲಯವು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಮಂದಿರಗಳ ಅಸ್ತಿತ್ವ ಅಲ್ಲಿ ಮಾಡಲಾಗುವ ವೇದಪಠಣ, ಭಜನೆ, ನೃತ್ಯ, ನಾಟಕ, ಕೀರ್ತನೆ ಮುಂತಾದ ಉಪಕ್ರಮಗಳು ಕೂಡ ಅಸ್ತಿತ್ವದೊಂದಿಗೆ ಸಂಬಂಧಿಸಿದೆ. ಒಂದು ಉಪಕ್ರಮ ಕಡಿಮೆಯಾದರೆ ಇತರೆ ಉಪಕ್ರಮಗಳೂ ಕಡಿಮೆಯಾಗುತ್ತವೆ ಮತ್ತು ಕೊನೆಗೆ ಮಂದಿರ ನಷ್ಟಗೊಳ್ಳುತ್ತದೆಯೆಂದು ಉಚ್ಚ ನ್ಯಾಯಾಲಯವು ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತೀರ್ಪಿನ ಸಮಯದಲ್ಲಿ ತಮ್ಮ ಷರಾದಲ್ಲಿ ಬರೆದಿದೆ.

೧. ಕಾಲದ ಹೊಡೆತವನ್ನು ಸಹಿಸಿಕೊಳ್ಳುತ್ತ ಬಹುಕಾಲದ ವರೆಗೆ ಸ್ಥಿರವಾಗಿರುವ ಮಂದಿರಗಳು ಪುರಾತತ್ವದ ದೃಷ್ಟಿಯಿಂದ ಮಹತ್ವದ ಸ್ಥಾನವಾಗಿದೆಯೆಂದು ಪರಿಶೀಲನಾ ನ್ಯಾಯಮೂರ್ತಿ ಆರ್. ಮಹಾದೇವನ ಮತ್ತು ನ್ಯಾಯಮೂರ್ತಿ ಜೆ. ಸತ್ಯನಾರಾಯಣ ಪ್ರಸಾದ ಇವರ ದ್ವಿಸದಸ್ಯ ಪೀಠವು ಟಿಪ್ಪಣಿ ಮಾಡಿದೆ.

೨. ತಮಿಳುನಾಡಿನ ಟೂಟಿಕೋರನ್ ಜಿಲ್ಲೆಯ ತಿರುಚೆಂಡೂರನ ಅರುಲಮಿಘೂ ಸುಬ್ರಹ್ಮಣ್ಯಂ ಸ್ವಾಮಿ ಮಂದಿರದ ಕಾರ್ಯಕಾರಿ ಅಧಿಕಾರಿ ಕಾಂಡಾ ಷಷ್ಟಿ ಉತ್ಸವದ ಸಮಯದಲ್ಲಿ ಭಕ್ತರಿಗೆ ಮಂದಿರದ ಹೊರಗಿನ ಪ್ರಾಂಗಣದಲ್ಲಿ ವಾಸ್ತವ್ಯ ಮಾಡಬಾರದೆಂದು ಆದೇಶಿಸಿದ್ದರು. ಅದನ್ನು ನ್ಯಾಯಾಲಯವು ಭಕ್ತರ ಸುರಕ್ಷೆಯ ದೃಷ್ಟಿಯಿಂದ ಬದಲಾವಣೆ ಮಾಡಲಿಲ್ಲ.

೩. ಕಾಂಡಾ ಷಷ್ಟಿ ಉತ್ಸವದಲ್ಲಿ ಭಕ್ತರಿಗೆ ಮಂದಿರದಲ್ಲಿ ವಾಸ್ತವ್ಯವಿರಲು ಅನುಮತಿ ನೀಡುವಂತೆ ಕೋರಿ ಒಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯು ಮಧುರೈಯ ಮದ್ರಾಸ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಲಾಗಿತ್ತು.

೪. ಈ ಮಂದಿರದಲ್ಲಿ ತಮಿಳು ಮಾಹೆಯ `ಆಯಪ್ಪಾಸಿ’ ಮಾಹೆಯಲ್ಲಿ 6 ದಿನಗಳ ವರೆಗೆ ನಡೆಯುವ ವಾರ್ಷಿಕ ಕಾಂಡಾ ಷಷ್ಟಿ ಉತ್ಸವದ ಸಮಯದಲ್ಲಿ ಭಕ್ತರು ಉಪವಾಸ ಮಾಡುತ್ತಾರೆ. ಈ ಸಮಯದಲ್ಲಿ ಭಕ್ತರು ಮನೆಗೆ ಹೋಗದೆ ಮಂದಿರದಲ್ಲಿಯೇ ವಾಸ್ತವ್ಯವಿದ್ದು, ಕಾಂಡಾ ಷಷ್ಟಿ ಕವಚಮ್ ಹಾಡುತ್ತಾರೆ ಮತ್ತು ಧಾರ್ಮಿಕ ಕಾರ್ಯಗಳನ್ನು ಮಾಡುತ್ತಾರೆ. ಇಂತಹ ಸಮಯದಲ್ಲಿ ಭಕ್ತರು ಮಂದಿರದ ಪ್ರಾಂಗಣದಲ್ಲಿ ವಾಸ್ತವ್ಯವಿರಲು ಅನುಮತಿಯಿರುತ್ತದೆ; ಆದರೆ ಮಂದಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಭಕ್ತರಿಗೆ ಅನಾನುಕೂಲಗಳಾಗಬಾರದೆಂದು ಈ ಸಲದ ಉತ್ಸವದಲ್ಲಿ ಯಾರಿಗೂ ಮಂದಿರದಲ್ಲಿ ವಾಸ್ತವ್ಯವಿರಲು ಅನುಮತಿ ನೀಡಲಾಗಿರಲಿಲ್ಲ. ಅದರ ಬದಲಾಗಿ ಮಂದಿರ್ದ ಹೊರಗೆ ಮೂಲಭೂತ ಸೌಕರ್ಯಗಳೊಂದಿಗೆ ತಾತ್ಪೂರ್ತಿಕವಾಗಿ ಸೌಲಭ್ಯಗಳನ್ನು ಒದಗಿಸಲಾಗಿದೆಯೆಂದು ಕಾರ್ಯಕಾರಿ ಅಧಿಕಾರಿಯು ನ್ಯಾಯಾಲಯದಲ್ಲಿ ತಿಳಿಸಿದ್ದರು.

೫.`ಮಂದಿರದ ಪಾವಿತ್ರ್ಯವನ್ನು ರಕ್ಷಿಸುವುದರೊಂದಿಗೆ ಭಕ್ತರ ಸುರಕ್ಷತೆಯೂ ಅಷ್ಟೇ ಮಹತ್ವದ್ದಾಗಿದೆ’, ಎಂದು ಮದ್ರಾಸ ಉಚ್ಚ ನ್ಯಾಯಾಲಯವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇಲೆ ತೀರ್ಪು ನೀಡುವಾಗ ಹೇಳಿದೆ.