ಜಾಮೀನು ಅರ್ಜಿಗಳ ಆಲಿಕೆಯನ್ನು ೧೦ ನಿಮಿಷಗಳಲ್ಲಿ ಮುಕ್ತಾಯಗೊಳಿಸಬೇಕು.

ಸರ್ವೋಚ್ಚ ನ್ಯಾಯಾಲಯದ ಮಹತ್ವಪೂರ್ಣ ಅಭಿಪ್ರಾಯ

ಜಾಮೀನು ಅರ್ಜಿಗಳ ಆಲಿಕೆಯನ್ನು ೧೦ ನಿಮಿಷಗಳಲ್ಲಿ ಮುಕ್ತಾಯಗೊಳಿಸಬೇಕು.

(ಸೌಜನ್ಯ : Bar and Bench)

ನವದೆಹಲಿ– ಜಾಮೀನು ಅರ್ಜಿಗಳ ಆಲಿಕೆಯು ಅನೇಕ ದಿನಗಳವರೆಗೆ `ದಿನಾಂಕ ದಿಂದ ದಿನಾಂಕಕ್ಕೆ’ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಈ ಸುದೀರ್ಘ ಆಲಿಕೆಯೆಂದರೆ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸುವ ಪ್ರಕಾರವಾಗಿದೆ. ಜಾಮೀನು ಅರ್ಜಿಯ ಆಲಿಕೆಗೆ ೧೦ ನಿಮಿಷಗಳಿಗಿಂತ ಹೆಚ್ಚಿನ ಸಮಯ ತಗಲಬಾರದು ಎಂದು ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದ ಆಲಿಕೆಯ ಸಮಯದಲ್ಲಿ ಹೇಳಿದೆ. ಜಾಮೀನು ಅರ್ಜಿಗಳ ಬಗ್ಗೆ ನಿಗದಿತ ಸಮಯದಲ್ಲಿ ನಿರ್ಣಯಗಳು ಆಗದೇ ಇರುವುದರಿಂದ ಸರ್ವೋಚ್ಚ ನ್ಯಾಯಾಲಯವು ಒಂದು ಪ್ರಕರಣದ ಆಲಿಕೆಯ ಸಮಯದಲ್ಲಿ ಹೇಳಿರುವುದೇನೆಂದರೆ, ಜಾಮೀನು ಅರ್ಜಿಯ ಬಗ್ಗೆ ನಿಗದಿತ ಸಮಯದಲ್ಲಿ ನಿರ್ಣಯಗಳು ಆಗದೇ ಇರುವುದರಿಂದ ದೇಶಾದ್ಯಂತವಿರುವ ಕಾರಾಗೃಹದಲ್ಲಿ ಬಂಧನದಲ್ಲಿರುವ ಕಚ್ಚಾ ಕೈದಿಗಳ (ಯಾರ ಪ್ರಕರಣಗಳು ಇನ್ನೂ ಪ್ರಾರಂಭವಾಗಿರುವುದಿಲ್ಲ ಮತ್ತು ಯಾರಿಗೆ ಜಾಮೀನು ಸಿಕ್ಕಿರುವುದಿಲ್ಲವೋ ಅಂತಹ ಕೈದಿಗಳು) ಸಂಖ್ಯೆ ಅಧಿಕವಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

* ಸರ್ವೋಚ್ಚ ನ್ಯಾಯಾಲಯವು ಹೀಗಾಗುವಂತೆ ಪ್ರಯತ್ನಿಸಬೇಕು ಎಂದು ಜನತೆಗೆ ಅನಿಸುತ್ತದೆ!- ಸಂಪಾದಕರು