ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರೀಕ ಕಾನೂನು ಜಾರಿ ಮಾಡುವುದು ಅವಶ್ಯಕ !

ಕೇರಳ ಉಚ್ಚ ನ್ಯಾಯಾಲಯ ದಿಂದ ಕೇಂದ್ರ ಸರಕಾರಕ್ಕೆ ಸಲಹೆ !

ತಿರುವನಂತಪುರಂ (ಕೇರಳ)– ಕೇಂದ್ರ ಸರಕಾರವು ಎಲ್ಲಾ ಧರ್ಮದವರಿಗಾಗಿ ಸಮಾನ ನಾಗರಿಕ ಕಾನೂನು (ಯೂನಿಫಾರಂ ಸಿವಿಲ್ ಕೋಡ್) ಜಾರಿ ಮಾಡುವ ಸಂದರ್ಭದಲ್ಲಿ ಗಂಭೀರವಾಗಿ ಯೋಚಿಸಬೇಕು. ಎಂದು ಕೇರಳ ಉಚ್ಚ ನ್ಯಾಯಾಲಯವು ಒಂದು ಮನವಿಯ ಬಗ್ಗೆ ವಿಚಾರಣೆ ನಡೆಸುವಾಗ ಹೇಳಿತು. ಭಾರತ ಇದು ಒಂದು ಜಾತ್ಯಾತೀತ ದೇಶವಾಗಿದೆ.

ದೇಶದಲ್ಲಿ ಸಮಾನ ನಾಗರಿಕ ಕಾನೂನು ಇಲ್ಲದೆ ಇರುವುದರಿಂದ ವಿವಾಹಗಳ ಸಂದರ್ಭದಲ್ಲಿ ಧರ್ಮದ ಪ್ರಕಾರ ಎಲ್ಲರಿಗೂ ಬೇರೆ ಬೇರೆ ಕಾನೂನುಗಳಿವೆ, ಎಂದು ಕೂಡ ನ್ಯಾಯಾಲಯ ಹೇಳಿತು. ನಮ್ಮ ನಾಗರಿಕರ ಕಲ್ಯಾಣ ಮತ್ತು ಹಿತ ಕಾಪಾಡುವುದು ಇದು ರಾಜ್ಯದ ಮುಖ್ಯ ಕರ್ತವ್ಯವಾಗಿದೆ ಮತ್ತು ಅದರಲ್ಲಿ ಧರ್ಮಕ್ಕೆ ಸ್ಥಾನವಿಲ್ಲ, ಎಂದು ನ್ಯಾಯಾಲಯವು ಹೇಳಿದೆ. ಒಬ್ಬ ಕ್ರೈಸ್ತ ದಂಪತಿಗಳು ದಾಖಲಿಸಿರುವ ಮನವಿಯ ಬಗ್ಗೆ ವಿಚಾರಣೆ ಸಮಯದಲ್ಲಿ ನ್ಯಾಯಾಲಯವು ಈ ಟಿಪ್ಪಣಿ ಮಾಡಿದೆ.