ಪಾಕಿಸ್ತಾನದಲ್ಲಿ 15 ವರ್ಷದ ಹಿಂದೂ ಹುಡುಗಿಯ ಅಪಹರಣ

ಪಾಕಿಸ್ತಾನದಲ್ಲಿ ಅಸುರಕ್ಷಿತ ಹಿಂದೂಗಳು !

ಹೈದರಾಬಾದ (ಪಾಕಿಸ್ತಾನ) – ಇಲ್ಲಿ 15 ವರ್ಷದ ಅಪ್ರಾಪ್ತ ವಯಸ್ಸಿನ ಹಿಂದೂ ಹುಡುಗಿ ಮಾಯಾ ಕೊಲ್ಹಿ ತನ್ನ ತಾಯಿಯೊಂದಿಗೆ ಕೆಲಸಕ್ಕೆ ಹೋಗುತ್ತಿದ್ದಳು. ಆ ಸಮಯದಲ್ಲಿ ಬಿಳಿ ಬಣ್ಣದ ಚತುಶ್ಚಕ್ರದ ವಾಹನದಲ್ಲಿ ಬಂದ 3 ಜನರು ಗಂಘರಾ ಮೋರಿ ಪ್ರದೇಶದಿಂದ ಹುಡುಗಿಯನ್ನು ಅಪಹರಿಸಿದ್ದಾರೆ ಎಂದು `ಹಿಂದೂ ಆರ್ಗನೈಸೇಶನ್ ಆಫ್ ಸಿಂಧ್’ ಸಂಘಟನೆಯ ಸಂಸ್ಥಾಪಕ ಮತ್ತು ಸಂಯೋಜಕ ನಾರಾಯಣ ಭಿಲ ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.