ಟಿಪ್ಪು ಹೆಸರಿನಲ್ಲಿ ನಡೆಯುತ್ತಿದ್ದ ಸಲಾಂ ಆರತಿಯ ಹೆಸರು ಬದಲಾವಣೆ ಸ್ವಾಗತಾರ್ಹ ! – ಹಿಂದೂ ಜನಜಾಗೃತಿ ಸಮಿತಿ

ಟಿಪ್ಪುವಿನ ಕಾಲದಿಂದಿದ್ದ ಕಂದಾಯ ಇಲಾಖೆಯ ಪರ್ಶಿಯನ್ ಶಬ್ದ ಮತ್ತು ನಗರಗಳ ಇಸ್ಲಾಮೀ ಹೆಸರು ಬದಲಾಯಿಸಿ

ಶ್ರೀ. ಮೋಹನ ಗೌಡ

ಬೆಂಗಳೂರು – ಸಾವಿರಾರು ದೇವಸ್ಥಾನಗಳನ್ನು ಧ್ವಂಸ ಮಾಡಿದ, ನೂರಾರು ಹಿಂದೂ ಯುವತಿಯರನ್ನು ಶೋಷಣೆ ಮಾಡಿ ಮತಾಂತರಕ್ಕೆ ಯತ್ನಿಸಿದ ಕ್ರೂರಿ ಟಿಪ್ಪು ಸುಲ್ತಾನನು ಆತನ ಕಾಲದಲ್ಲಿ ದೇವಸ್ಥಾನಗಳಲ್ಲಿ ‘ಸಲಾಂ ಆರತಿ’ ಯನ್ನು ಪ್ರಾರಂಭಿಸಿದ್ದನು. ಇಂದಿನವರೆಗೂ ಅವನ ಹೆಸರಿನಲ್ಲಿ ಈ ಆರತಿ ನಡೆಯುತ್ತಿದ್ದು ಇದು ಅತ್ಯಂತ ಖೇದಕರ ಸಂಗತಿಯಾಗಿತ್ತು. ಇಂದು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯು ಮರುನಾಮಕರಣ ಮಾಡಿ ಅದನ್ನು ‘ನಮಸ್ಕಾರ ಆರತಿ’ ಎಂದು ಬದಲಾಯಿಸಿದೆ. ಈ ನಿರ್ಣಯವು ಅತ್ಯಂತ ಸ್ವಾಗತಾರ್ಹವಾಗಿದ್ದು ಹಿಂದೂ ಜನಜಾಗೃತಿ ಸಮಿತಿಯು ರಾಜ್ಯ ಸರ್ಕಾರವನ್ನು ಅಭಿನಂದಿಸುತ್ತದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ ಗೌಡ ಇವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.