|
ಭಾಗ್ಯನಗರ (ತೆಲಂಗಾಣ) – ಇಲ್ಲಿಯ ಸಾಯಬರಾಬಾದ ಪೊಲೀಸರು ಒಂದು ವೇಶ್ಯಾವಾಟಿಕೆಯ ದೊಡ್ಡ ಜಾಲ ಭೇದಿಸಿದ್ದಾರೆ. ಇಲ್ಲಿಯವರೆಗೆ ಈ ಪ್ರಕರಣದಲ್ಲಿ ೧೮ ಜನರನ್ನು ಬಂಧಿಸಲಾಗಿದೆ. ಬಂಧಿಸಲಾಗಿರುವ ವರಲ್ಲಿ ರೇಡಿಸನ ಉಪಹಾರ ಗೃಹದ ವ್ಯವಸ್ಥಾಪಕನೂ ಸೇರಿದ್ದಾನೆ. ಕಾಲ್ ಸೆಂಟರ್ ಮತ್ತು ವಾಟ್ಸಾಪ್ ಮೂಲಕ ಇದರ ಆನ್ಲೈನ್ ಸಂಚಾಲನೆ ಮಾಡಲಾಗುತ್ತಿತ್ತು. ಅನೇಕ ರಾಜ್ಯಗಳಲ್ಲಿ ಈ ಜಾಲ ಪಸರಿಸಿದೆ . ಇದರಲ್ಲಿ ಅಮಲು ಪದಾರ್ಥಗಳ ಸಮಾವೇಶ ಕೂಡ ಇದೆ.
#Cyberabad‘s Anti-Human trafficking unit has busted a online #SexRacket,which trafficked 14,190 victims from various states of India since three years.
It is our collective duty to respect women and extend a helping hand by being vigilant & alerting authorities. #CyberabadPolice pic.twitter.com/7WzpUhJ4Un
— Cyberabad Police (@cyberabadpolice) December 6, 2022
೧. ದೆಹಲಿ, ಭಾಗ್ಯನಗರ ಮತ್ತು ಬೆಂಗಳೂರಿನಲ್ಲಿ ಕಾಲ್ ಸೆಂಟರ್ ಇತ್ತು. ಇಲ್ಲಿಂದ ವಾಟ್ಸಾಪ್ ಮೂಲಕ ಗ್ರಾಹಕರ ಜೊತೆ ಸಂಪರ್ಕ ಮಾಡಲಾಗುತ್ತಿತ್ತು. ೧೪ ಸಾವಿರ ೧೯೦ ಮಹಿಳೆಯರನ್ನು ಈ ವೇಶ್ಯಾ ವಾಟಿಕೆಯಲ್ಲಿ ಸಿಲುಕಿಸಲಾಗಿದೆ . ಇದರಲ್ಲಿ ಕೆಲವು ಮಹಿಳೆಯರು ರಷ್ಯಾ, ಉಜಬೇಕಿಸ್ಥಾನ ಮತ್ತು ಥೈಲ್ಯಾಂಡ್ ಈ ದೇಶದವರಾಗಿದ್ದಾರೆ.
೨. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆರೋಪಿ ದೇಶದಲ್ಲಿನ ವಿವಿಧ ಪ್ರದೇಶದಿಂದ ಮಹಿಳೆಯರನ್ನು ಖರೀದಿಸುತ್ತಿದ್ದನು. ಇದಕ್ಕಾಗಿ ಈ ಸಂಕೇತ ಸ್ಥಳ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಜಾಹೀರಾತು ನೀಡುತ್ತಿದ್ದರು ನಂತರ ಗ್ರಾಹಕರಿಗೆ ವಾಟ್ಸಪ್ ಮೂಲಕ ಮಹಿಳೆಯರ ಛಾಯಾಚಿತ್ರ ಕಳುಹಿಸಲಾಗುತ್ತಿತ್ತು. ಗ್ರಾಹಕರಿಗೆ ಹಿಡಿಸುವ ಮಹಿಳೆಯರನ್ನು ಅವರವರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿತ್ತು. ಸಾಯಬರಾಬಾದ ಒಂದರಲ್ಲಿಯೇ ಮತ್ತು ಭಾಗ್ಯನಗರದಲ್ಲಿ ಶೇಕಡ ೭೦ ರಷ್ಟು ವೇಶ್ಯಾವಾಟಿಕೆಗೆ ಈ ಜಾಲ ಕಾರಣವಾಗಿದೆ.
೩. ಮುಖ್ಯ ಆರೋಪಿಗಳಲ್ಲಿ ಮಹಮ್ಮದ್ ಅಬ್ದುಲ್, ಸಲ್ಮಾನ್ ಅಲಿಯಾಸ್ ಋಷಿ ಇವನು ಇಲ್ಲಿಯವರೆಗೆ ೯೦೦ ಮಹಿಳೆಯನ್ನು ಬಳಸಿದ್ದಾನೆ. ಅವನು ಕಳೆದ ೬ ವರ್ಷಗಳಿಂದ ಇದರಲ್ಲಿ ತೊಡಗಿದ್ದಾನೆ. ಅನ್ಯ ಆರೋಪಿಗಳಲ್ಲಿ ಮಹಮ್ಮದ್ ಸಮೀರ, ಮಹಮ್ಮದ್ ಅಬ್ದುಲ್ ರಫೀಕ್ ಖಾನ್, ಮಹಮ್ಮದ್ ಅಫಸರ್, ಹರಬಿಂದರ್ ಕೌರ ಮುಂತಾದವರೂ ಒಳಗೊಂಡಿದ್ದಾರೆ.
ಸಂಪಾದಕೀಯ ನಿಲುವುದೇಶಾದ್ಯಂತ ಈ ಜಾಲ ಪಸರಿಸಿದೆ ಅಂದರೆ, ಇತರ ರಾಜ್ಯಗಳ ಪೊಲೀಸರಿಗೆ ಮತ್ತು ಗುಪ್ತಚರ ಇಲಾಖೆಗೆ ಇದರ ಮಾಹಿತಿ ಏಕೆ ದೊರೆಯಲಿಲ್ಲ ? |