ಮೌಲ್ವಿಗಳ ಒತ್ತಡದಿಂದಾಗಿ ಕೇರಳದಲ್ಲಿನ ಸಾಮ್ಯವಾದಿ ಸರಕಾರ ಮಣಿದಿದೆ !
(ಮೌಲ್ವಿ ಅಂದರೆ ಇಸ್ಲಾಮಿನ ಧಾರ್ಮಿಕ ನೇತಾರರು)
ತಿರುವನಂತಪುರಮ್ – ಕೇರಳ ಸರಕಾರದ ವತಿಯಿಂದ ಬಡತನದ ನಿರ್ಮೂಲನೆಗಾಗಿ ನಡೆಸಲಾಗುತ್ತಿರುವ ‘ಕುಡುಂಬಶ್ರೀ’ ಯೋಜನೆಯೊಂದಿಗೆ ಸಂಬಂಧಿತ ‘ಹುಡುಗ ಮತ್ತು ಹುಡುಗಿ ಸಮಾನರು’ ಎಂಬ ಶಪಥದಿಂದಾಗಿ ವಾದ ನಿರ್ಮಾಣವಾಗಿದೆ. ಸರಕಾರದಿಂದ ‘ಕುಡುಂಬಶ್ರೀ’ ಯೋಜನೆಯ ಅಡಿಯಲ್ಲಿ ಸ್ವಯಂಸೇವಿ ಸಹಾಯ ಗುಂಪುಗಳು ತಮ್ಮ ಸ್ವಯಂಸೇವಕರಿಗೆ ‘ಹುಡುಗ ಮತ್ತು ಹುಡುಗಿಯರಿಗೆ ಸಮಾನ ಅಧಿಕಾರ ನೀಡಿ. ಹುಡುಗ-ಹುಡುಗಿಯರಿಗೆ ಸಂಪತ್ತಿನಲ್ಲಿ ಸಮಾನ ಅಧಿಕಾರ ನೀಡಿ’ ಎಂದು ಶಪಥ ನೀಡುವ ಬಗ್ಗೆ ನಿರ್ದೇಶನ ಬಂದಿತ್ತು. ಮೌಲ್ವಿಗಳು ಈ ಶಪಥವನ್ನು ಶರಿಯತ ಕಾನೂನಿನ ವಿರುದ್ಧವಾಗಿದೆ ಎಂದು ಹೇಳಿ ವಿರೋಧಿಸಿದರು. ಮೌಲ್ವಿಗಳ ಒತ್ತಡದಿಂದಾಗಿ ರಾಜ್ಯದಲ್ಲಿನ ಸಾಮ್ಯವಾದಿ ಸರಕಾರವು ಈ ಶಪಥದ ಮೇಲೆ ನಿರ್ಬಂಧ ಹೇರಿದೆ.
Gender-neutral oath of Kudumbashree calling for equal property rights for females irks Islamic scholar in #Keralahttps://t.co/H30LqzkjEO
— The Indian Express (@IndianExpress) December 3, 2022
೧. ಕೇರಳದಲ್ಲಿನ ‘ಸಮಸ್ಥ ಕೇರಳ ಜಾಮ-ಇಯುತುಲ ಕುತ್ಬಾ ಕಮಿಟಿ’ಎಂಬ ಮುಸಲ್ಮಾನರ ಸಂಘಟನೆಯು ‘ಕುಡುಂಬಶ್ರೀ’ ಯೋಜನೆಯನ್ನು ವಿರೋಧಿಸಿದೆ.‘ಈ ಶಪಥದ ಮಾಧ್ಯಮದಿಂದ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಸಮಾನ ನಾಗರೀಕ ಕಾನೂನು ತರಲು ಸಹಾಯ ಮಾಡುತ್ತಿದೆ, ಎಂದು ಮೌಲ್ವಿಗಳು ಹೇಳಿದ್ದಾರೆ.
೨. ‘ಸಮಸ್ಥ ಕೇರಳ ಜಾಮ-ಇಯುತುಲ ಕುತ್ಬಾ ಕಮಿಟಿ’ಯ ನೇತಾರ ನಜರ ಫೈಜಿ ಕುಡಥಾಯಿಯವರು ಫೇಸಬುಕ್‌ನಲ್ಲಿ ಒಂದು ‘ಪೊಸ್ಟ್’ನ್ನು ಪ್ರಸಾರ ಮಾಡಿ ಈ ಶಪಥವು ಸಂವಿಧಾನಕ್ಕೆ ವಿರೋಧವಾಗಿದೆ ಎಂದು ಹೇಳಿದ್ದರು. ಕುರಾನಿನ ಅನುಸಾರ ಪುರುಷನಿಗೆ ಸಂಪತ್ತಿನಲ್ಲಿ ಇಬ್ಬರು ಸ್ತ್ರೀಯರಷ್ಟು ಭಾಗ ಸಿಗುತ್ತದೆ ಹಾಗೂ ತಂದೆಯ ಸಂಪತ್ತಿನಿಂದ ಪುರುಷನಿಗೆ ದೊರೆಯುವ ಸಂಪತ್ತಿನಲ್ಲಿ ಕೇವಲ ಅರ್ಧದಷ್ಟು ಭಾಗ ಸ್ತ್ರೀಗೆ ನೀಡಲಾಗುತ್ತದೆ. ‘ಲಿಂಗ ಸಮಾನತೆಯ ಹೆಸರಿನಲ್ಲಿ ಸರಕಾರವು ಇಸ್ಲಾಮಿನ ಮೂಲಭೂತ ತತ್ತ್ವಗಳಲ್ಲಿ ಹಸ್ತಕ್ಷೇಪ ಮಾಡುತ್ತಿದೆ’ ಎಂದು ಫೈಜಿಯವರು ಹೇಳಿದ್ದಾರೆ. ಫೈಜಿ ಕುದಥಾಯಿಯವರ ಹೇಳಿಕೆಯ ನಂತರ ಜಮಾತ-ಎ-ಇಸ್ಲಾಮಿನೊಂದಿಗೆ ಇತರ ಅನೇಕ ಮುಸಲ್ಮಾನ ಸಂಘಟನೆಗಳು ಅವರಿಗೆ ಬೆಂಬಲ ನೀಡಿವೆ.
ಹಿಂದೂಗಳ ವಿರುದ್ಧ ನಿರ್ಣಯ ತೆಗೆದುಕೊಳ್ಳುವವರು ಈಗ ಎಲ್ಲಿದ್ದಾರೆ ? – ಭಾಜಪ
ಭಾಜಪದ ಪ್ರದೇಶಾಧ್ಯಕ್ಷರಾದ ಕೆ. ಸುರೇಂದ್ರನರವರು ಮಾತನಾಡುತ್ತ, ಕಟ್ಟರವಾದಿಗಳ ಶಕ್ತಿಯ ಎದುರು ಸರಕಾರವು ಆತ್ಮಸಮರ್ಪಣೆ ಮಾಡಿದೆ. ಶಬರಿಮಲೆಯ ದೇವಸ್ಥಾನದಲ್ಲಿ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ದೊರಕಿಸಿಕೊಡುವ ನಿರ್ಣಯಕ್ಕೆ ಸಾವಿರಾರು ತೀರ್ಥಯಾತ್ರಿಕರು ವಿರೋಧಿಸಿದಾಗ ಅವರ ಮೇಲೆ ಆಕ್ರಮಣ ಮಾಡಲಾಯಿತು. ಇನ್ನೊಂದು ಕಡೆಯಲ್ಲಿ ಪೊಲೀಸರು ೨ ಮಹಿಳೆಯರಿಗೆ ಸಂರಕ್ಷಣೆಯನ್ನು ನೀಡುತ್ತ ದೇವಸ್ಥಾನದಲ್ಲಿ ಪ್ರವೇಶ ಮಾಡಲು ಅವಕಾಶ ನೀಡಿದರು, ಎಂದು ಹೇಳಿದರು.
ಸಂಪಾದಕೀಯ ನಿಲುವುಇದು ಕೇರಳದಲ್ಲಿನ ಸಾಮ್ಯವಾದಿ ಸರಕಾರದ ನಿಜಸ್ವರೂಪವಾಗಿದೆ ! ಇದು ಸುಮ್ಮನೆ ಸ್ತ್ರೀ-ಪುರುಷ ಸಮಾನತೆಯ ಬಗ್ಗೆ ಮಾತನಾಡುವ ಸಾಮ್ಯವಾದಿಗಳು ಮುಸಲ್ಮಾನರ ಓಲೈಕೆಯಿಂದಾಗಿ ತಮ್ಮ ತತ್ತ್ವಗಳಿಗೆ ಹೇಗೆ ತೀಲಾಂಜಲಿ ನೀಡುತ್ತಾರೆ, ಎಂಬುದರ ಉದಾಹರಣೆಯಾಗಿದೆ ! ಶಬರೀಮಲಾ ದೇವಸ್ಥಾನದಲ್ಲಿ ಹಿಂದೂಗಳ ಪರಂಪರೆಯನ್ನು ವಿರೋಧಿಸಿ ಎಲ್ಲ ವಯೋಮಾನದ ಮಹಿಳೆಯರಿಗೆ ದೇವಸ್ಥಾನದಲ್ಲಿ ಪ್ರವೇಶ ಸಿಗುವ ಬಗ್ಗೆ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾಪತ್ರವನ್ನು ಸಾದರಪಡಿಸಿತ್ತು. ಇದೇ ಸರಕಾರಕ್ಕೆ ಮುಸಲ್ಮಾನ ಸ್ತ್ರೀಯರಿಗೆ ಮಾತ್ರ ಸಮಾನ ಅಧಿಕಾರ ಒದಗಿಸುವಲ್ಲಿ ಉತ್ಸಾಹವೇ ಇಲ್ಲ. ಇದರಿಂದ ಸಾಮ್ಯವಾದಿ ಸರಕಾರದ ಹಿಂದೂದ್ವೇಷ ಮತ್ತು ಮುಸಲ್ಮಾನ ಪ್ರೇಮ ಕಂಡುಬರುತ್ತಿದೆ ! |