ಪೊಲೀಸ್ ವಾಹನದಿಂದ 250 ಲೀಟರ್ ಡೀಸೆಲ್ ಕದ್ದ ಇಬ್ಬರು ಪೊಲೀಸರ ಅಮಾನತು !

ನೌಕರಿಗೆ ಅನುಪಸ್ಥಿತರಿದ್ದ ಇತರ ೩ ಪೊಲೀಸರು ಕೂಡ ಅಮಾನತು

ಭಿಂಡ (ಮಧ್ಯಪ್ರದೇಶ) -ಇಲ್ಲಿಯ ಪೊಲೀಸರು  ತಮ್ಮದೆ ವಾಹನದಲ್ಲಿ ನ ೨೫೦ ಲೀಟರ್ ಡಿಸೈನ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಹಾಗೂ ಇತರ ಮೂರು ಮಂದಿ ಅನುಪಸ್ಥಿತ ಇರುವುದರಿಂದ ಅಮಾನತುಗೊಳಿಸಲಾಗಿದೆ. ರಾತ್ರಿಯ ಗಸ್ತಿಗಾಗಿ ಅಥವಾ ಇತರ ಕೆಲಸಗಳಿಗಾಗಿ ಪೊಲೀಸರ ವಾಹನದಲ್ಲಿ ಡೀಸೆಲ್ ತುಂಬಿಸಲಾಗುತ್ತದೆ. ನವೆಂಬರ್ ೨೯ ರಂದು ರಾತ್ರಿ ೬ ವಾಹನಗಳಲ್ಲಿ ಡೀಸೆಲ್ ತುಂಬಿಸಲಾಗಿತ್ತು. ರಾತ್ರಿಯ ಸಮಯದ ಚಾಲಕ ಪೊಲೀಸ್ ಸಂದೀಪ  ಜಾಟವ ಮತ್ತು ಅಭಿನೇಂದ್ರಸಿಂಹ ಸಿಕರವಾರ್ ಇವರು ಈ ವಾಹನದಿಂದ ಡೀಸೆಲ್ ಕಳುವು ಮಾಡಿದರು. ವಿಚಾರಣೆಯಲ್ಲಿ ಈ ಇಬ್ಬರ ಹೆಸರು ಬೆಳಕಿಗೆ ಬಂದ ನಂತರ ಅವರನ್ನು ಅಮಾನತುಗೊಳಿಸಲಾಯಿತು, ಹಾಗೂ ರಾತ್ರಿ ಈ ಇಬ್ಬರಿಂದ ಡೀಸೆಲ್ ಕಳವು ಮಾಡುವಾಗ ಇತರ ೩ ಪೊಲೀಸರು ಶಿವಾ ಶರ್ಮ, ಉಮೇಶ ಮತ್ತು ಸುಲ್ತಾನ್ ಸಿಂಹ ಇವರು ಮೋಜು ಮಾಡುತ್ತಿದ್ದರು. ಆದ್ದರಿಂದ ಅವರನ್ನು ಕೂಡ ಅಮಾನತುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ನೌಕರಿಯಿಮದ ವಜಾಗೊಳಿಸಿ ಕಾರಾಗೃಹಕ್ಕೆ ಅಟ್ಟ ಬೇಕು !