ಕರ್ಣಾವತಿ (ಗುಜರಾತ)ಯ ಜಾಮಾ ಮಶೀದಿ ಇಮಾಮರ ಹೇಳಿಕೆ !
(ಇಮಾಮ ಎಂದರೆ ಮಶೀದಿಯಲ್ಲಿ ಪ್ರಾರ್ಥನೆ ಮಾಡಿಸಿಕೊಳ್ಳುವವರು)
ಕರ್ಣಾವತಿ (ಗುಜರಾತ) – ಇಲ್ಲಿಯ ಜಾಮಾ ಮಸೀದಿಯ ಇಮಾಮ ಶಬ್ಬೀರ ಅಹಮ್ಮದ ಸಿದ್ಧಿಕಿಯವರು ಜಮಾಲಪುರ ಚುನಾವಣಾ ಕ್ಷೇತ್ರದಲ್ಲಿ ಮುಸಲ್ಮಾನರ ಪ್ರತಿನಿಧಿತ್ವ ಮಾಡುವಂತಹ ಅಭ್ಯರ್ಥಿಗೆ ಮತ ಹಾಕುವಂತೆ ಕರೆ ನೀಡಿದ್ದರು. ಈಗ ಅವರು ಮತ್ತೊಂದು ಹೇಳಿಕೆಯನ್ನು ನೀಡಿದ್ದಾರೆ. ಅವರು, ಚುನಾವಣೆಯಲ್ಲಿ ಮಹಿಳೆಯರಿಗೆ ಅಭ್ಯರ್ಥಿಯನ್ನಾಗಿ ಮಾಡುವುದು ಇಸ್ಲಾಂ ವಿರುದ್ಧವಾಗಿದೆ ಮತ್ತು ಅದು ಇಸ್ಲಾಂ ಅನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
गुजरात विधानसभा चुनाव के दूसरे और अंतिम चरण के मतदान से एक रोज़ पहले पत्रकारों से बात करते हुए शाही इमाम शब्बीर अहमद सिद्दीकी ने ये विवादित बयान दिया जो देखते ही देखते वायरल हो गया #GujaratElections #GujaratAssemblyPolls #Gujarat pic.twitter.com/fop6PHUgfd
— DNA Hindi (@DnaHindi) December 5, 2022
ಇಮಾಮ ಸಿದ್ಧಿಕಿಯವರು ಮಾತು ಮುಂದುವರಿಸುತ್ತಾ, ನೀವು ಮಸೀದಿಯಲ್ಲಿ ನೋಡಿದ್ದೀರಿ, ಒಬ್ಬರೇ ಒಬ್ಬ ಮಹಿಳೆಯು ನಮಾಜಕ್ಕೆ ಬರುವುದಿಲ್ಲ. ಒಂದು ವೇಳೆ ಇಸ್ಲಾಂನಲ್ಲಿ ಮಹಿಳೆಯರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಬರುವ ಅನುಮತಿಯಿದ್ದರೆ, ಮಸೀದಿಯಲ್ಲಿಯೂ ಅವರಿಗೆ ಬರಲು ಅನುಮತಿ ನೀಡಲಾಗುತ್ತಿತ್ತು. ಮಸೀದಿಯಲ್ಲಿ ಬರಲು ಅವರನ್ನು ನಿರ್ಬಂಧಿಸಲಾಗಿದೆ; ಏಕೆಂದರೆ ಮಹಿಳೆಯರಿಗೆ ಇಸ್ಲಾಂನಲ್ಲಿ ಸ್ಥಾನವಿದೆ. ಇದರಿಂದ ಚುನಾವಣೆಯಲ್ಲಿ ಯಾವ ಮಹಿಳೆಯರಿಗೆ ಅಭ್ಯರ್ಥಿ ಮಾಡುತ್ತಾರೆಯೋ, ಅವರು ಇಸ್ಲಾಂ ವಿರುದ್ಧ ಬಂಡಾಯ ಮಾಡುತ್ತಿದ್ದಾರೆ. `ನಿಮಗೆ ಯಾವ ಪುರುಷನೂ ಸಿಗಲಿಲ್ಲವೆಂದು ನೀವು ಮಹಿಳೆಯರಿಗೆ ಕರೆತರುತ್ತಿರುವಿರೇ?’, ಎಂದು ಅವರು ಪ್ರಶ್ನಿಸಿದ್ದಾರೆ.
ಸಂಪಾದಕೀಯ ನಿಲುವುಮಹಿಳೆಯರಿಗೆ ತ್ರಿವಳಿ ತಲಾಕ ನೀಡುವುದು, `ನಿಕಾಹ ಹಲಾಲಾ’ ಮಾಡುವುದು, ಬುರ್ಖಾದಲ್ಲಿ ಇಡುವುದು, ಅನೇಕ ಹೆಂಡಂದಿರನ್ನು ಮಾಡಿಕೊಳ್ಳುವುದು, ಲವ್ ಜಿಹಾದ ಮಾಡಿ ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ ಮಾಡುವುದು, ಜಿಹಾದಿ ಭಯೋತ್ಪಾದಕತೆ ಮುಂತಾದ ಕಾರಣಗಳಿಂದ ಇಸ್ಲಾಂ ಮೇಲೆ ಯಾವ ಟೀಕೆಗಳಾಗುತ್ತಿವೆಯೋ, ಇದರಿಂದ ಇಸ್ಲಾಂ ಸದೃಢಗೊಳ್ಳುತ್ತಿದೆಯೆಂದು ಇಮಾಮರಿಗೆ ಅನಿಸುತ್ತಿದೆಯೇ ? ಇದಕ್ಕೆ ಅವರು ಉತ್ತರಿಸಬೇಕು ! (ನಿಕಾಹ ಹಲಾಲಾ ಎಂದರೆ ತಲಾಕ ನೀಡಿರುವ ಪತಿಯೊಂದಿಗೆ ಪುನಃ ವಿವಾಹವಾಗಲು ಇತರ ಪುರುಷನೊಂದಿಗೆ ಶಾರೀರಿಕ ಸಂಬಂಧ ಇಡುವುದು) |