ಮಹಾಕಾಲೇಶ್ವರ ದೇವಸ್ಥಾನದಲ್ಲಿ ಚಲನಚಿತ್ರದ ಹಾಡಿನ ಮೇಲೆ ನೃತ್ಯ ಮಾಡಿದ 2 ಹಿಂದೂ ಮಹಿಳಾ ಭದ್ರತಾ ಸಿಬ್ಬಂದಿಗಳ ಅಮಾನತು !

ಉಜ್ಜೈನ (ಮಧ್ಯಪ್ರದೇಶ) – 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಶ್ರೀ ಮಹಾಕಾಲೇಶ್ವರ ದೇವಸ್ಥಾನದಲ್ಲಿ ಚಲನಚಿತ್ರದ ಹಾಡಿಗೆ ನೃತ್ಯ ಮಾಡಿದ 2 ವಿಡಿಯೋ ಬಯಲಾಗಿದೆ. ವರ್ಷಾ ನವರಂಗ ಮತ್ತು ಪೂನಮ ಸೇನ ಹೆಸರಿನ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿಯವರು ದೇವಸ್ಥಾನದ ವಿಶ್ರಾಂತಿನಿಲಯದ ಪರಿಸರದಲ್ಲಿ ನೃತ್ಯವನ್ನು ಮಾಡಿದ್ದರಿಂದ ಇಬ್ಬರನ್ನೂ ಅಮಾನತ್ತುಗೊಳಿಸಲಾಗಿದೆ. ಹಾಗೂ ದೇವಸ್ಥಾನದಲ್ಲಿ ನಿಯೋಜಿಸಲ್ಪಟ್ಟಿರುವ ಸಿಬ್ಬಂದಿಗಳಿಗೆ `ಸ್ಮಾರ್ಟ ಫೋನ’ ಇಟ್ಟುಕೊಳ್ಳುವುದನ್ನು ನಿರ್ಬಂಧಿಸಲಾಗಿದೆ. ದೇವಸ್ಥಾನದ ಭದ್ರತೆಯನ್ನು `ಕೆ.ಎಸ್.ಎಸ್.’ ಈ ಕಂಪನಿಯು ನೋಡಿಕೊಳ್ಳುತ್ತಿದ್ದೂ ಈ ಸಂದರ್ಭದ ವಿಡಿಯೋ ಇನಸ್ಟಾಗ್ರಾಂ ಮೇಲೆ ಪ್ರಸಾರವಾಗಿರುವ ಮಾಹಿತಿಯನ್ನು ದೇವಸ್ಥಾನದ ಆಡಳಿತ ಮಂಡಳಿಯು ಕಂಪನಿಗೆ ಒಪ್ಪಿಸಿದ ಬಳಿಕ ಈ ಕ್ರಮವನ್ನು ಜರುಗಿಸಲಾಯಿತು. (ದೇವಸ್ಥಾನದ ಪಾವಿತ್ರ್ಯವನ್ನು ಭಂಗಗೊಳಿಸುವ ಇಂತಹ ಸಿಬ್ಬಂದಿಗಳನ್ನು ವಜಾ ಮಾಡಬೇಕು – ಸಂಪಾದಕರು)

ಈ ಹಿಂದೆಯೂ ಅನೇಕ ಬಾರಿ ದೇವಸ್ಥಾನದ ಪರಿಸರದಲ್ಲಿ ಚಲನಚಿತ್ರದ ಹಾಡಿನ ಮೇಲೆ ವಿಡಿಯೋ ಸಿದ್ಧಗೊಳಿಸಿರುವ 5 ಘಟನೆ ಬಹಿರಂಗವಾಗಿತ್ತು; ಆದರೆ ಭದ್ರತಾ ಸಿಬ್ಬಂದಿಯೇ ಇಂತಹ ಕೃತ್ಯವನ್ನು ಮಾಡಿರುವುದು ಇದು ಪ್ರಥಮಬಾರಿಯಾಗಿದೆ.

ಸಂಪಾದಕೀಯ ನಿಲುವು

ಇಂತಹ ಖೇದಕರ ಘಟನೆ ಎಂದಾದರೂ ಇತರೆ ಧರ್ಮದವರ ಪ್ರಾರ್ಥನಾ ಸ್ಥಳಗಳ ಸಂದರ್ಭದಲ್ಲಿ ನಡೆದಿರುವುದು ಕೇಳಿದೆಯೇ ? ಹಿಂದೂಗಳಿಗೆ ಧರ್ಮಶಿಕ್ಷಣದ ಆವಶ್ಯಕತೆ ಎಷ್ಟಿದೆಯೆನ್ನುವುದು ಇಂತಹ ಘಟನೆ ತೋರಿಸುತ್ತದೆ !