ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಮಹಾವಿದ್ಯಾಲಯದ ಸ್ಥಾಪಿಸುವ ಯಾವುದೇ ಪ್ರಸ್ತಾವ ಇಲ್ಲ ! ಕರ್ನಾಟಕ ಸರಕಾರ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು – ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಮಹಾವಿದ್ಯಾಲಯನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವ ಸರಕಾರದ ಬಳಿ ಇಲ್ಲ  ಎಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇವರು ಸ್ಪಷ್ಟಪಡಿಸಿದರು. ಕರ್ನಾಟಕದಲ್ಲಿ ಭಾಜಪ  ಸರಕಾರ ಮುಸಲ್ಮಾನ ಹುಡುಗಿಯರಿಗಾಗಿ ೧೦ ಹೊಸ ಮಹಾವಿದ್ಯಾಲಯ ಸ್ಥಾಪನೆ ಮಾಡುವುದಾಗಿ ಹೇಳಿರುವ ಸಮಾಚಾರವನ್ನು ಪ್ರಸಾರ ಮಾಧ್ಯಮಗಳು ಪ್ರಸಾರಗೊಳಿಸಿದ್ದವು. ಅದರ ನಂತರ ಕರ್ನಾಟಕದಲ್ಲಿ ದೊಡ್ಡ ವಿವಾದ ನಿರ್ಮಾಣವಾಗಿತ್ತು. ಅದರ ಬಗ್ಗೆ ಮುಖ್ಯಮಂತ್ರಿಗಳು ಮೇಲಿನ ಸ್ಪಷ್ಟನೆ ನೀಡಿದ್ದಾರೆ.

ಈ ಹಿಂದೆ ಮೌಲಾನಾ (ಇಸ್ಲಾಮಿ ಅಭ್ಯಾಸಕ) ಶಫೀ ಸಾದಿ ಇವರು, ನಾನು ಹೆಣ್ಣು ಮಕ್ಕಳಿಗಾಗಿ ಮಹಾವಿದ್ಯಾಲಯ ನಡೆಸುವ ಬಗ್ಗೆ ಮಾತನಾಡಿದ್ದೆ. ನಮ್ಮ ವಕ್ಫ್ ಬೋರ್ಡ್ ಬಳಿಯಲ್ಲಿ ೨೫ ಕೋಟಿ ರೂಪಾಯಿಗಳ ನಿಧಿ ಇದೆ. ಪ್ರತಿಯೊಂದು ಮಹಾವಿದ್ಯಾಲಯಕ್ಕೆ ಎರಡುವರೆ ಕೋಟಿ ರೂಪಾಯಿ ನೀಡಲಿದ್ದು ೧೦ ಜಿಲ್ಲೆಗಳಲ್ಲಿ ಮಹಾವಿದ್ಯಾಲಯಗಳನ್ನು ಸ್ಥಾಪಿಸಲಾಗುವುದು. ಈ ವಿಷಯದ ಬಗ್ಗೆ ಮಂತ್ರಿಗಳೊಂದಿಗೆ ಮಾತುಕತೆಯಾಗಿದೆ ಎಂದು ಹೇಳಿದ್ದರು. ಈ ವಿಷಯದ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಇವರಲ್ಲಿ ಕೇಳಿದಾಗ, ಇದು ಕರ್ನಾಟಕ ರಾಜ್ಯ ವಕ್ಫ್ ಮಂಡಳದ ಅಧ್ಯಕ್ಷರಾಗಿರುವ ಮೌಲಾನ ಶಫೀ ಸಾದಿ  ಇವರ ವೈಯಕ್ತಿಕ ವಿಚಾರ ಇರಬಹುದು. ವಕ್ಫ್ ಮಂಡಳಿಯ ಅಧ್ಯಕ್ಷರು ಈ ವಿಷಯವಾಗಿ ಸರಕಾರದ ಜೊತೆಗೆ ಚರ್ಚಿಸಬೇಕು ಎಂದು ಹೇಳಿದರು.

ಆಂದೋಲನದ  ಸಿದ್ಧತೆಯಲ್ಲಿ ಹಿಂದೂ ಸಂಘಟನೆಗಳು  

ಮೌಲಾನಾ ಇವು ಹೇಳಿಕೆಯ ನಂತರ ಹಿಂದೂ ಸಂಘಟನೆಗಳು  ರಾಜ್ಯಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿವೆ. ಸರಕಾರಕ್ಕೆ ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಸ್ವತಂತ್ರ ಮಹಾವಿದ್ಯಾಲಯಗಳನ್ನು ಸ್ಥಾಪಿಸಲು ಬಿಡುವುದಿಲ್ಲ ಎಂದು ಹಿಂದೂ ಸಂಘಟನೆಗಳ ಪ್ರತಿನಿಧಿಗಳು ಹೇಳಿದ್ದರು.

ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸಬೇಕು !- ಹಿಂದೂ ಜನಜಾಗೃತಿ ಸಮಿತಿ

ಈ ವಿಷಯವಾಗಿ ಪ್ರತಿಕ್ರಿಯೆ ನೀಡುವಾಗ ಹಿಂದೂ ಜನಜಾಗೃತಿ ಸಮಿತಿಯ ಮೋಹನ ಗೌಡ ಇವರು ಮುಸಲ್ಮಾನ ಹೆಣ್ಣು ಮಕ್ಕಳಿಗಾಗಿ ಸ್ವತಂತ್ರ ಮಹಾವಿದ್ಯಾಲಯಗಳು ಸ್ಥಾಪಿಸುವುದಾದರೆ, ಆಗ ಹಿಂದೂಗಳಿಗಾಗಿ ಕೂಡ ಸ್ವತಂತ್ರ ಮಹಾವಿದ್ಯಾಲಯಗಳು ಮತ್ತು ವಿದ್ಯಾಪೀಠಗಳನ್ನು ಸ್ಥಾಪಿಸ ಬೇಕೆಂದು ಹೇಳಿದರು.

ಜಯತು ಜಯತು ಹಿಂದೂ ರಾಷ್ಟ್ರಮ