ಭಾಗ್ಯನಗರ (ತೇಲಂಗಾಣ) ದಲ್ಲಿ `ಅಯ್ಯಪ್ಪ ಮಾಲೆ’ ಧರಿಸುವ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ನಿರಾಕರಣೆ !

ಅಯ್ಯಪ್ಪ ಭಕ್ತರಿಂದ ಶಾಲೆಯ ಎದುರು ಪ್ರತಿಭಟನೆ

ಭಾಗ್ಯನಗರ (ತೇಲಂಗಾಣ) – ಇಲ್ಲಿಯ `ಅಯ್ಯಪ್ಪ ಸ್ವಾಮಿ ಮೊಹನಸ’ ಶಾಲೆಯಲ್ಲಿ ನವೆಂಬರ 30, 2022 ರಂದು 6 ನೇ ತರಗತಿಯ ವಿದ್ಯಾರ್ಥಿಗಳಿಗೆ `ಅಯ್ಯಪ್ಪ ಮಾಲೆ’ ಧರಿಸಿದ್ದರಿಂದ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು. ವಿದ್ಯಾರ್ಥಿಗಳ ತರಗತಿಯ ಶಿಕ್ಷಕರು ಅವರಿಗೆ ಬೈಗುಳಗಳನ್ನು ಹಾಕಿದರು ಮತ್ತು ಅವರು ವಿದ್ಯಾರ್ಥಿಗಳು ಕೊರಳಿನಲ್ಲಿ ಹಾಕಿದ್ದ `ಅಯ್ಯಪ್ಪ ಮಾಲೆ’ಯನ್ನು ತೆಗೆಯುವಂತೆ ಮಾಡಿದರು. ಕೇರಳದಲ್ಲಿರುವ ಶಬರಿಮಲಾ ಯಾತ್ರೆಯ ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆಯಲು 41 ದಿನಗಳ ಉಪವಾಸವನ್ನು ಮಾಡಬೇಕಾಗುತ್ತದೆ. ಈ ವ್ರತ ಮಾಡುವವರು ಕಪ್ಪು ವಸ್ತ್ರವನ್ನು ಧರಿಸಿ ತಿಲಕವನ್ನು ಹಚ್ಚುತ್ತಾರೆ. ಈ ವ್ರತವನ್ನು ವರ್ಗದಲ್ಲಿರುವ ಕೆಲವು ವಿದ್ಯಾರ್ಥಿಗಳು ಮಾಡುತ್ತಿದ್ದರು. ಈ ವಿದ್ಯಾರ್ಥಿಗಳಿಗೂ ಅವರು ಧರಿಸಿರುವ ಕಪ್ಪು ವಸ್ತ್ರವನ್ನು ತೆಗೆಯಲು ಮತ್ತು ಹಣೆಯ ಮೇಲೆ ಹಚ್ಚಿದ್ದ ತಿಲಕವನ್ನು ಅಳಿಸುವಂತೆ ಮಾಡಿದರು. ಈ ಘಟನೆಯನ್ನು ನಿಷೇಧಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಶಾಲೆಯ ಎದುರು ಪ್ರತಿಭಟನೆ ನಡೆಸಿದರು ಮತ್ತು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಪ್ರವೇಶ ನೀಡುವಂತೆ ಒತ್ತಾಯಿಸಿದರು.

ಇದೇ ರೀತಿಯ ಘಟನೆ ನವೆಂಬರ 23, 2022 ರಂದು ಮಂದಾಮರಿಯ ಸಿಂಗರೇನಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳ ಸಂದರ್ಭದಲ್ಲಿ ಜರುಗಿತ್ತು. ಅವರು ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಾಲೆಯಲ್ಲಿ ಪ್ರವೇಶಿಸಲು ನಿರಾಕರಿಸಲಾಗಿತ್ತು. ಒಂದು ಸ್ಥಳಿಯ ವೃತ್ತವಾಹಿನಿ ನೀಡಿರುವ ಮಾಹಿತಿಯನುಸಾರ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಿದ್ದರಿಂದ ಶಾಲೆಯಲ್ಲಿ ಪ್ರವೇಶವನ್ನು ನಿರಾಕರಿಸಲಾಯಿತು ಎಂದು ಆರೋಪಿಸಿದ್ದಾರೆ.

(`ಅಯ್ಯಪ್ಪ ಮಾಲೆ’ ಇದು ರುದ್ರಾಕ್ಷ, ರಕ್ತಚಂದನ, ತುಳಸಿಯಿಂದ ತಯಾರಿಸಲಾಗುತ್ತದೆ)

ಸಂಪಾದಕೀಯ ನಿಲುವು

  • ಅಯ್ಯಪ್ಪ ಸ್ವಾಮಿಯ ಹೆಸರಿನಿಂದ ನಡೆಯುತ್ತಿರುವ ಶಾಲೆಯಲ್ಲಿ ಮಕ್ಕಳಿಗೆ ಅಯ್ಯಪ್ಪ ಮಾಲೆ ಧರಿಸಲು ನಿರ್ಭಂದಿಸಲು ಧೈರ್ಯ ಮಾಡುತ್ತಿದ್ದರೇ, ಅದು ಖೇದಕರ ಸಂಗತಿಯಾಗಿದೆ !
  • ಹಿಂದೂ ಬಹುಸಂಖ್ಯಾತವಿರುವ ಭಾರತದಲ್ಲಿ ಹಿಂದೂ ಮಕ್ಕಳಿಗೆ ಧಾರ್ಮಿಕ, ನೈತಿಕ ಮತ್ತು ಬೌದ್ಧಿಕ ದೃಷ್ಟಿಯಿಂದ ಸಂಪನ್ನಗೊಳಿಸುವ ಶಾಲೆಯಲ್ಲಿಯೇ ಹಿಂದೂ ಪೋಷಕರು ತಮ್ಮ ಮಕ್ಕಳನ್ನು ಸೇರಿಸಬೇಕು. ಹಾಗೆಯೇ ಇಂತಹ ಶಾಲೆಗಳ ನಿರ್ಮಾಣವನ್ನು ಮಾಡುವ ಜವಾಬ್ದಾರಿಯನ್ನು ದೇಶದ ಹಿಂದೂ ಸಮಾಜದ ಮುಖಂಡರು ವಹಿಸಿಕೊಳ್ಳುವುದು ಆವಶ್ಯಕವಾಗಿದೆ !