ಅಕ್ಕಲಕೋಟದಲ್ಲಿನ ೨೮ ಗ್ರಾಮಗಳು ಕರ್ನಾಟಕದಲ್ಲಿ ವಿಲೀನಗೊಳ್ಳಲು ಇಚ್ಚಿಸಿವೆ ?

ಅಕ್ಕಲಕೊಟ – ಸೋಲಾಪುರದಲ್ಲಿನ ಅಕ್ಕಲಕೋಟ ತಾಲೂಕಿನಲ್ಲಿನ ೨೮ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ನೀರು ಇಂತಹ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಅಸಮಧಾನಗೊಂಡಿರುವ ಈ ಗ್ರಾಮಸ್ಥರು ಕರ್ನಾಟಕದಲ್ಲಿ ವಿಲೀನವಾಗಲು ಇಚ್ಚಿಸುತ್ತಿರುವುದರ ಬಗ್ಗೆ ಹೇಳಲಾಗುತ್ತಿದೆ. ಗ್ರಾಮಸ್ಥರು `ನಮಗೆ ಸಾರಿಗೆ ವ್ಯವಸ್ಥೆ, ಆರೋಗ್ಯ ಇಂತಹ ಸೌಲಭ್ಯಗಳು ಕೂಡ ಸಿಗುವುದಿಲ್ಲ. ಹಾಗಾದರೆ ನಾವು ಕರ್ನಾಟಕಕ್ಕೆ ಏಕೆ ಹೋಗಬಾರದು ? ಎಂಬ ಪ್ರಶ್ನೆ ಕೇಳಿದರು. ಕರ್ನಾಟಕ ಮತ್ತು ಮಹಾರಾಷ್ಟ್ರ ಇವರಲ್ಲಿ ನಡೆಯುತ್ತಿರುವ ಗಡಿ ಸಮಸ್ಯೆಯ ಸಂದರ್ಭದಲ್ಲಿ ಗ್ರಾಮಸ್ಥರು ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಇವರ ಜಯಘೋಷ ಮಾಡಿದರು. ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿಯವರು ಕೆಲವು ದಿನಗಳ ಹಿಂದೆ ಸೋಲಾಪುರ ಮತ್ತು ಅಕ್ಕಲಕೋಟದ ಕೆಲವು ಗ್ರಾಮಗಳ ಬಗ್ಗೆ ದಾವೆ ಮಾಡಿದ್ದರು.