ಹಿಂದೂ ಸಂಘಟನೆಗಳ ವಿರೋಧದಿಂದಾಗಿ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ವು ‘ಭಾನುವಾರ’ದ ಬದಲು ‘ಶುಕ್ರವಾರ’ದಂದು ಘೋಷಿಸಿದ ರಜೆ ರದ್ದು !

ಮುಂಬಯಿ: ದಾದರ್, ಗೋವಂಡಿಯಲ್ಲಿರುವ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಶಾಖೆಗಳು ೧ ಡಿಸೆಂಬರ್ ೨೦೨೨ ರಿಂದ ಭಾನುವಾರದ ಬದಲು ಪ್ರತಿ ಶುಕ್ರವಾರ ಮುಚ್ಚಲಾಗುವುದು ಎಂದು ನಿರ್ಧರಿಸಿತ್ತು. ಈ ನಿರ್ಧಾರವನ್ನು ಹಿಂದೂ ಜನಜಾಗೃತಿ ಸಮಿತಿ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ಮತ್ತು ಜಾಗೃತ ನಾಗರಿಕರು ವಿರೋಧಿಸಿದ್ದರು. ಈ ಬಗ್ಗೆ ಹಿಂದೂ ಜನಜಾಗೃತಿ ಸಮಿತಿಯ ನಿಯೋಗವು ಗೋವಂಡಿ ಶಾಖೆ, ದಾದರ್ ಶಾಖೆ ಮತ್ತು ನರಿಮನ್ ಪಾಯಿಂಟ್‌ನಲ್ಲಿರುವ ಮುಖ್ಯ ಶಾಖೆಯಲ್ಲಿ ಮನವಿ ನೀಡಿ ಈ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದರು. ಇಂದು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಬ್ಯಾಂಕ್ ಈ ನಿರ್ಧಾರವನ್ನು ಹಿಂಪಡೆದಿದೆ ಎಂದು ಪ್ರಕಟಿಸಿದೆ. ಜಾತ್ಯತೀತ ಪ್ರಜಾಪ್ರಭುತ್ವದಲ್ಲಿ ಒಂದು ಸಮಾಜದ ಓಲೈಕೆ ಮಾಡುವ ಇಂತಹ ಪ್ರಯತ್ನ ಖಂಡನೀಯವಾಗಿದೆ. ಬ್ಯಾಂಕ್ ನಿರ್ಧಾರವನ್ನು ಹಿಂಪಡೆದಿರುವುದನ್ನು ಹಿಂದೂ ಜನಜಾಗೃತಿ ಸಮಿತಿಯು ಸ್ವಾಗತಿಸುತ್ತದೆ. ಈ ರೀತಿಯಲ್ಲಿ ಇನ್ನು ಎಲ್ಲಿಯಾದರೂ ಗಮನಕ್ಕೆ ಬಂದರೆ ವಿರೋಧಿಸುತ್ತೇವೆ ಎಂದೂ ಸಹ ಸಮಿತಿ ಹೇಳಿದೆ.

‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಈ ನಿರ್ಧಾರದಿಂದಾಗಿ ಜನಸಾಮಾನ್ಯರಲ್ಲಿ ಬ್ಯಾಂಕ್ ಮುಸಲ್ಮಾನಪರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂಬ ಭಾವನೆ ಮೂಡಿತ್ತು. ಸರಕಾರಿ ನಿಯಂತ್ರಿತ ಬ್ಯಾಂಕ್‌ಗಳಲ್ಲಿ ಒಂದು ನಿರ್ದಿಷ್ಟ ಧರ್ಮದ ಪರವಾಗಿ ನಿರ್ಧರಿಸುವುದು ಇತರ ಧರ್ಮೀಯರಿಗೆ ಅನ್ಯಾಯ ಮಾಡಿದಂತಾಗಿದೆ. ಸಮಿತಿ ನೀಡಿರುವ ಮನವಿಯಲ್ಲಿ, ಶುಕ್ರವಾರ ರಜೆ ಘೋಷಿಸಲಾಗುತ್ತಿದ್ದು, ಇದರಿಂದ ನಮಗೆ ನಾವು ಪಾಕಿಸ್ತಾನದಲ್ಲಿ ವಾಸಿಸುತ್ತೇವೋ ಅಥವಾ ಭಾರತದಲ್ಲಿ ವಾಸಿಸುತ್ತೇವೋ ?’ ಎಂಬ ಪ್ರಶ್ನೆ ಮೂಡುತ್ತದೆ. ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ದ ಕೆಲವು ಶಾಖೆಗಳ ರಜೆಯನ್ನು ಬದಲಾಯಿಸಲು ನಿಖರ ಕಾರಣವೇನು ? ಎಂಬ ಪ್ರಶ್ನೆಗಳನ್ನು ಸಮಿತಿಯು ಬ್ಯಾಂಕಿಗೆ ಕೇಳಿದೆ. ಈ ನಿರ್ಧಾರ ಹಿಂಪಡೆಯದಿದ್ದರೆ ಹೋರಾಟ ಮಾಡುವುದಾಗಿ ಸಮಿತಿ ಎಚ್ಚರಿಕೆ ನೀಡಿತ್ತು. ಇದೀಗ ಬ್ಯಾಂಕ್ ತನ್ನ ನಿರ್ಧಾರವನ್ನು ಹಿಂಪಡೆದಿದ್ದರೂ, ಕೇಂದ್ರ ಸರಕಾರ ಈ ಬಗ್ಗೆ ಕೂಲಂಕುಷ ತನಿಖೆ ನಡೆಸಿ ಇಂತಹ ನಿರ್ಧಾರ ಕೈಗೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಸಮಿತಿ ಆಗ್ರಹಿಸಿದೆ.