ಬಂಟ್ವಾಳ ಇಲ್ಲಿಯ ಸರಕಾರಿ ಜಾಗದಲ್ಲಿ ರಾತೋ ರಾತ್ರಿ ಸ್ಥಾಪಿಸಲಾದ ಏಸುಕ್ರಿಸ್ತನ ಪ್ರತಿಮೆ !

ಹಿಂದೂ ಜಾಗರಣ ವೇದಿಕೆಯ ಎಚ್ಚರಿಕೆಯ ನಂತರ ಸರಕಾರದಿಂದ ಮೂರ್ತಿ ತೆರವು !

ಬಂಟ್ಪಾಳ (ದ.ಕ) – ಅಲ್ಲಿಪಾದೆ ಇಲ್ಲಿ `ಸಂತ ಜಾನ್ ಚರ್ಚ್’ನ ಪಕ್ಕದಲ್ಲಿರುವ ಸರಕಾರಿ ಭೂಮಿಯಲ್ಲಿ ರಾತ್ರಿಯ ಸಮಯದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಿಸಿ ಅದರ ಸುತ್ತ ಗೋಡೆಯ ಬೇಲಿ ಕಟ್ಟಿ ಸರಕಾರಿ ಭೂಮಿ ಕಬಳಿಸುವ ಪ್ರಯತ್ನ ಮಾಡಲಾಯಿತು. ಇದಕ್ಕೆ `ಹಿಂದೂ ಜಾಗರಣ ವೇದಿಕೆ’ಯಿಂದ ಎಚ್ಚರಿಕೆ ನೀಡಲಾಗಿತ್ತು. ಈ ಸಂಘಟನೆಯಿಂದ ನಾವುರು, ಅಲ್ಲಿಪಾದೆ ಪಂಚಾಯತ ತಾಲುಕು ದಂಡಾಧಿಕಾರಿಗಳಿಗೆ ಕಾಮಗಾರಿ ತೆರವುಗೊಳಿಸಲು ಒಂದು ವಾರದ ಕಾಲಾವಕಾಶ ನೀಡಲಾಗಿತ್ತು. ನಂತರ ತಾಲೂಕ ಆಡಳಿತದವರು ಪ್ರತಿಮೆಯನ್ನು ತೆರೆವುಗೊಳಿಸಿ ಅದರ ಸುತ್ತ ಇರುವ ಗೋಡೆ ಕೂಡ ನೆಲಸಮ ಮಾಡಿದ್ದಾರೆ.

ಸಂಪಾದಕೀಯ ನಿಲುವು

  • ಮೂಲತಃ ಕರ್ನಾಟಕದಲ್ಲಿ ಭಾಜಪದ ಸರಕಾರ ಇರುವಾಗ ಮತಾಂಧ ಕ್ರೈಸ್ತರಿಂದ ಹೀಗೆ ಮಾಡುವ ಧೈರ್ಯ ಹೇಗೆ ಬರುತ್ತದೆ ?, ಎಂಬ ಪ್ರಶ್ನೆ ಹಿಂದೂಗಳ ಮನಸ್ಸಿನಲ್ಲಿ ಉದ್ಭವಿಸುತ್ತದೆ !
  • ಯಾವುದು ಹಿಂದೂ ಸಂಘಟನೆಗಳಿಗೆ ಕಾಣುತ್ತದೆ ಅದು ಭೂಮಾಲೀಕರಾಗಿರುವ ಸರಕಾರಿ ವ್ಯವಸ್ಥೆಗೆ ಹೇಗೆ ಕಾಣುವುದಿಲ್ಲ ?