ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನ
‘ಇಂದಿನ ದಿನಗಳಲ್ಲಿ ಹೊಲದಲ್ಲಿ ಬಳಸುವ ರಾಸಾಯನಿಕಗಳು ಮತ್ತು ಕೀಟನಾಶಕಗಳು ಶರೀರಕ್ಕೆ ಎಷ್ಟು ಅಪಾಯಕಾರಿಯಾಗಿರುತ್ತವೆ ಎಂದರೆ, ಅದನ್ನು ಸಿಂಪಡಿಸುವಾಗ ರೈತನಿಗೆ ಅವನ ಮೂಗು-ಬಾಯಿಯನ್ನು ಮುಚ್ಚಿಕೊಳ್ಳಬೇಕಾಗುತ್ತದೆ. ‘ಹೊಲದಲ್ಲಿನ ಈ ವಿಷಕಾರಿ ರಾಸಾಯನಿಕಗಳು ಆಹಾರದ ಮಾಧ್ಯಮದಿಂದ ಮನುಷ್ಯನ ಹೊಟ್ಟೆಯಲ್ಲಿ ಹೋಗುತ್ತಿರುವುದರಿಂದ ಇಂದು ಮಧುಮೇಹ, ರಕ್ತದೊತ್ತಡ, ಅರ್ಬುದರೋಗ ಇಂತಹ ಗಂಭೀರವಾದ ಕಾಯಿಲೆಗಳು ಹೆಚ್ಚುತ್ತಿವೆ’, ಎಂದು ಅನೇಕ ತಜ್ಞರ ಅಭಿಪ್ರಾಯವಿದೆ. ನಮ್ಮ ಮನೆಯಲ್ಲಿಯೇ ನೈಸರ್ಗಿಕ ಪದ್ಧತಿಯಿಂದ ತರಕಾರಿಗಳ ತೊಟಗಾರಿಕೆಯನ್ನು ಮಾಡಿ ಕಡಿಮೆಪಕ್ಷ ನಮ್ಮ ಕುಟುಂಬಕ್ಕಾಗಿಯಾದರೂ ವಿಷಮುಕ್ತ ಆಹಾರವನ್ನು ಬೆಳೆಸುವುದು ಸಹಜವಾಗಿ ಸಾಧ್ಯವಿದೆ. ನಡೆಯಿರಿ ! ಸನಾತನದ ಮನೆಮನೆಯಲ್ಲಿ ಕೈದೋಟ ಅಭಿಯಾನದಲ್ಲಿ ಭಾಗವಹಿಸಿ ವಿಷಮುಕ್ತ ಆಹಾರದ ಸಂಕಲ್ಪವನ್ನು ಮಾಡೋಣ !’
– ಸೌ. ರಾಘವೀ ಮಯೂರೇಶ ಕೊನೆಕರ, ಢವಳಿ, ಫೋಂಡಾ, ಗೋವಾ. (೧.೮.೨೦೨೨)