ಮುಂಬರಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಈಜಿಪ್ತ ರಾಷ್ಟ್ರಪತಿ

ಈಜಿಪ್ತ ರಾಷ್ಟ್ರಪತಿ ಅಬ್ದೇಲ ಫತಹ ಅಲ್ ಸಿಸಿ

ನವದೆಹಲಿ – ಮುಂಬರುವ ಜನೇವರಿ 26, 2023ರ ಗಣರಾಜ್ಯೋತ್ಸವ ದಿನದ ಕಾರ್ಯಕ್ರಮಕ್ಕೆ ಈಜಿಪ್ತ ರಾಷ್ಟ್ರಪತಿ ಅಬ್ದೇಲ ಫತಹ ಅಲ್ ಸಿಸಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. ಕಳೆದ ತಿಂಗಳಿನಲ್ಲಿ ಭಾರತದ ವಿದೇಶಸಚಿವ ಎಸ್. ಜಯಶಂಕರ ಮತ್ತು ರಕ್ಷಣಾ ಸಚಿವ ರಾಜನಾಥ ಸಿಂಹ ಇವರು ಈಜಿಪ್ತ ಪ್ರವಾಸದ ಸಂದರ್ಭದಲ್ಲಿ ಅಬ್ದೇಲ ಸಿಸಿ ಇವರನ್ನು ಭೇಟಿಯಾಗಿದ್ದರು.

2021 ರಲ್ಲಿ ಬ್ರಿಟನ್ನಿನ ಆಗಿನ ಪ್ರಧಾನಮಂತ್ರಿ ಬೊರಿಸ ಜಾನ್ಸನ್ ಇವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು; ಆದರೆ ಬ್ರಿಟನ್ನಿನಲ್ಲಿ ಕೊರೊನಾ ಪ್ರತಾಪ ಹೆಚ್ಚುತ್ತಿರುವ ಕಾರಣದಿಂದ ಅವರು ಹಾಜರಿರಲು ಅಸಮರ್ಥರೆಂದು ತಮ್ಮ ಅಸಹಾಯಕತೆಯನ್ನು ತಿಳಿಸಿದ್ದರು. 2022 ರಲ್ಲಿಯೂ ಕೊರೊನಾ ಮಹಾಮಾರಿಯ ಕಾರಣದಿಂದ ಮುಖ್ಯ ಅತಿಥಿಗಳೆಂದು ಈ ಕಾರ್ಯಕ್ರಮಕ್ಕೆ ಯಾರೂ ಉಪಸ್ಥಿತರಿರಲಿಲ್ಲ.