|
ದ್ವಾರಕ (ಗುಜರಾತ) – ಕಚ್ಛ ಇಲ್ಲಿಯ ಗೋಶಾಲೆಯಲ್ಲಿನ ೨೫ ಹಸುಗಳಿಗೆ ೨ ತಿಂಗಳ ಹಿಂದೆ ಲಂಪಿ ರೋಗಾಣು ತಗಲಿತ್ತು. ಆ ಸಮಯದಲ್ಲಿ ಸೌರಾಷ್ಟ್ರದಲ್ಲಿ ಲಂಪಿ ಸೋಂಕಿಗೆ ನೂರಾರು ಹಸುಗಳು ಬಲಿಯಾಗಿದ್ದವು. ಆದ್ದರಿಂದ ಈ ಗೋಶಾಲೆಯ ಮಾಲೀಕ ಮಹಾದೇವ ದೇಸಾಯಿ ಇವರು `ಹಸುಗಳು ಗುಣಮುಖವಾದರೆ ಅವುಗಳ ಸಹಿತ ದರ್ಶನಕ್ಕೆ ಬರುವೆನೆಂದು’ ಭಗವಂತ ದ್ವಾರಕಾಧೀಶನ ಬಳಿ (ಭಗವಂತ ಶ್ರೀ ಕೃಷ್ಣನ ಬಳಿ )ಹರಿಕೆ ಇಟ್ಟುಕೊಂಡರು. ೨೦ ದಿನಗಳ ಕಾಲ ಎಲ್ಲವೂ ಭಗವಂತನಿಗೆ ಒಪ್ಪಿಸಿ ಅವರು ಹಸುಗಳಿಗೆ ಚಿಕಿತ್ಸೆ ಕೊಡಿಸಿದರು. ಅದರ ನಂತರ ಹಸುಗಳು ಗುಣಮುಖವಾದವು ಹಾಗೂ ಅವುಗಳಿಗೆ ತಗಲಿರುವ ಸೋಂಕು ಗೋಶಾಲೆಯಲ್ಲಿನ ಇತರ ಹಸುಗಳಿಗೆ ಹರಡದೆ ಇದ್ದರಿಂದ ದೇಸಾಯಿಯವರು ಈ ಹಸುಗಳನ್ನು ಕರೆದುಕೊಂಡು ಕಚ್ಛನಿಂದ ದ್ವಾರಕಾದವರೆಗೆ ೪೫೦ ಕಿಲೋಮೀಟರ್ ನಡೆದುಕೊಂಡು ನವಂಬರ್ ೨೩ ರಂದು ಸಂಜೆ ದ್ವಾರಕನಗರಕ್ಕೆ ತಲುಪಿದರು. ಈ ೨೫ ಹಸುಗಳಿಗಾಗಿ ದ್ವಾರಕಾಧಿಶನ ದೇವಸ್ಥಾನ ನಡುರಾತ್ರಿಯಲ್ಲಿ ಬಾಗಿಲು ತೆರೆಯಲಾಗಿತ್ತು.
25 गाय के लिए आधी रात को खुला द्वारका मंदिर, मन्नत पूरी हुई तो गायों के साथ 450 KM पैदल दर्शन करने आया मालिक#Dwarka | #Dwarkadhish | #DwarkadhishTemplehttps://t.co/Zwjtqw5dno
— Asianetnews Hindi (@AsianetNewsHN) November 24, 2022
ದೇವಸ್ಥಾನ ಆಡಳಿತದ ಎದುರು ಎಲ್ಲಕ್ಕಿಂತ ದೊಡ್ಡ ಅಡಚಣೆ ಹಸುಗಳಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡುವುದಾಗಿತ್ತು; ಕಾರಣ ಇಲ್ಲಿ ಪ್ರತಿದಿನ ಸಾವಿರಾರು ಭಕ್ತರು ಜನದಂಗುಳಿ ಇರುತ್ತದೆ. ಹಗಲಿನಲ್ಲಿ ಹಸುಗಳಿಗೆ ದೇವಸ್ಥಾನದಲ್ಲಿ ಪ್ರವೇಶ ನೀಡಿದರೆ ದೇವಸ್ಥಾನದ ವ್ಯವಸ್ಥೆ ಅಸ್ತವ್ಯಸ್ತ ಆಗುತ್ತಿತ್ತು. ಆದ್ದರಿಂದ ದೇವಸ್ಥಾನ ನಡುರಾತ್ರಿಯಲ್ಲಿ ತೆರೆಯುವ ನಿರ್ಣಯ ತೆಗೆದುಕೊಳ್ಳಲಾಯಿತು. ಭಗವಾನ ಶ್ರೀ ಕೃಷ್ಣ ಹಸುವಿನ ಭಕ್ತನಿರುವನು. ಆದ್ದರಿಂದ ಅವರು ರಾತ್ರಿ ಕೂಡ ಅವರಿಗೆ ದರ್ಶನ ನೀಡುವರು ಎಂದು ವಿಚಾರ ಮಾಡಲಾಯಿತು. ಅದರ ಪ್ರಕಾರ ನಡುರಾತ್ರಿ ೧೨ ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಯಿತು.