ನಟಿ ರಿಚಾ ಚಡ್ಡಾ ಇವರು ಗಲವಾನ್ ದಲ್ಲಿ ವೀರಗತಿ ಹೊಂದಿದ್ದ ಸೈನಿಕರನ್ನು ಅವಮಾನಿಸಿದರು !

ಟೀಕೆಗಳ ಹೆಚ್ಚಾದ ನಂತರ ರಿಚಾ ಇವರಿಂದ ಕ್ಷಮಾಯಾಚನೆ !

ಬಲಬದಿಗೆ ನಟಿ ರಿಚಾ ಚಡ್ಡಾ

ನವದೆಹಲಿ – ನಟಿ ರಿಚಾ ಚಡ್ಢಾ ಇವರು ಭಾರತೀಯ ಸೈನ್ಯವನ್ನು ಅವಮಾನಿಸುವ ಟ್ವೀಟ್ ಮಾಡಿರುವುದರಿಂದ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟಿಕಿಸಲಾಗುತ್ತಿದೆ. ಅದರ ನಂತರ ರೀಚಾ ಇವರು ಕ್ಷಮಾಯಾಚನೆ ಮಾಡಿದರು. `ನನಗೆ ಯಾರನ್ನು ನೋಯಿಸುವ ಉದ್ದೇಶ ಇರಲಿಲ್ಲಾ. ನನ್ನ ಪದಗಳಿಂದ ಯಾರ ಭಾವನೆಗಳಿಗೆ ನೋವುಂಟಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಎಂದು ರಿಚಾ ಚಡ್ಢಾ ಇವರು ಹೇಳಿದರು.

೧. ಎರಡು ದಿನಗಳ ಹಿಂದೆ ಭಾರತೀಯ ಸೈನ್ಯದ ಉತ್ತರ ಕಮಾಂಡದ ಪ್ರಮುಖ ಉಪೇಂದ್ರ ದ್ವಿವೇದಿ ಇವರು, `ಸರಕಾರ ಏನಾದರೂ ನಮಗೆ ಆದೇಶ ನೀಡಿದರೆ, ನಾವು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಹಿಂಪಡೆಯಲು ಸಿದ್ದರಿದ್ದೇವೆ’, ಎಂದು ಹೇಳಿದ್ದರು. ಈ ಹೇಳಿಕೆಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಅದರ ಬಗ್ಗೆ ಪ್ರತಿಕ್ರಿಯೆ ನೀಡುವಾಗ ರಿಚಾ ಚಡ್ಡಾ ಇವರು (ಗಲವಾನ್ ನಿಟ್ಟಿಸಿರು ಬಿಡುತ್ತಿದೆ) `ಗಲವಾನ್ ಸೆಜ್ ಹಾಯ್ !’ ಎಂದು ಬರೆದಿದ್ದರು.

೨. ಎರಡು ವರ್ಷದ ಹಿಂದೆ ಲಡಾಕ್ ನ ಗಲವಾನ ಕಣಿವೆಯಲ್ಲಿ ಭಾರತೀಯ ಸೈನ್ಯ ಮತ್ತು ಚೀನಾ ಸೈನ್ಯದ ನಡುವೆ ನಡೆದಿರುವ ಘರ್ಷಣೆಯಲ್ಲಿ ೨೦ ಭಾರತೀಯ ಸೈನಿಕರು ವೀರಗತಿಹೊಂದಿದ್ದರು. ಅದರ ಉಲ್ಲೇಖ ಮಾಡುತ್ತ ಈ ರೀತಿ ಭಾರತೀಯ ಸೈನ್ಯ ಸಕ್ಷಮವಾಗಿಲ್ಲ ಎಂದು ರಿಚಾ ಇವರು ಹೇಳುವ ಪ್ರಯತ್ನ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಇಂಥವರ ಮೇಲೆ ದೇಶದ್ರೋಹದ ಆರೋಪ ದಾಖಲಿಸಿ ಅವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !