`ಝಾಕೀರ್ ನಾಯಿಕಗೆ ನಾವು ಆಹ್ವಾನಿಸಿಲ್ಲ !’(ಅಂತೆ)

ಭಾರತದ ಆಕ್ಷೇಪಣೆಯ ನಂತರ ಕತಾರದಿಂದ ಸ್ಪಷ್ಟೀಕರಣ !

ದೋಹ (ಕತಾರ್) – ಕತಾರದಲ್ಲಿ ನಡೆಯುತ್ತಿರುವ ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ಉಪಸ್ಥಿತರಿರಲು ಭಾರತದಿಂದ ಪರಾರಿಯಾಗಿರುವ ಝಾಕೀರ್ ನಾಯಿಕ್ ಇವನಿಗೆ ಕತಾರ ಆಹ್ವಾನಿಸಿತ್ತು. ಪ್ರಸ್ತುತ ಅವನು ಕತಾರನಲ್ಲಿ ಧಾರ್ಮಿಕ ವ್ಯಾಖ್ಯಾನಗಳು ನೀಡುತ್ತಿದ್ದಾನೆ. ಅವನಿಗೆ ಆಹ್ವಾನ ನೀಡಿರುವುದರ ಬಗ್ಗೆ ಭಾರತದಿಂದ ಕತಾರ ಬಳಿ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಈ ಬಗ್ಗೆ ಈಗ ಕತಾರನಿಂದ ಸ್ಪಷ್ಟೀಕರಣ ನೀಡಿದೆ. ನಾವು ಝಾಕಿರ್ ಗೆ ಯಾವುದೇ ಅಧಿಕೃತ ಆಹ್ವಾನ ನೀಡಿರಲಿಲ್ಲ. ಇತರ ದೇಶಗಳು ಉದ್ದೇಶ ಪೂರ್ವಕವಾಗಿ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ, ಅದರಿಂದ ಕತಾರ ಮತ್ತು ಭಾರತದ ಸಂಬಂಧ ಹಾಳಾಗಬೇಕು ಎಂದು ಕತಾರ್ ಹೇಳಿದೆ.

೧. ಭಾರತವು ಕತಾರ ಬಳಿ ಆಕ್ಷೇಪ ವ್ಯಕ್ತಪಡಿಸುತ್ತಾ, ಝಾಕೀರ್ ನಾಯಕ್ ಪ್ರತಿಷ್ಠಿತ ವ್ಯಕ್ತಿಗಳ ಸಾಲಿನಲ್ಲಿ ಕುಳಿತು ಫುಟ್ಬಾಲ್ ಪಂದ್ಯ ನೋಡುತ್ತಿರುವುದು ಕಂಡಿದೆ. ನಾವು ನಮ್ಮ ಉಪರಾಷ್ಟ್ರಪತಿ ಜಗದೀಪ ಧನಖಡ ಇವರ ಪ್ರವಾಸ ರದ್ದುಪಡಿಸಬೇಕಾಗಬಹುದು; ಆದರೆ ನಂತರ ಧನಖಡ ಇವರು ಸ್ಪರ್ಧೆಯ ಉದ್ಘಾಟನೆ ಸಮಾರಂಭಕ್ಕೆ ಉಪಸ್ಥಿತರಾಗಿದ್ದರು.

೨. ಅಮೇರಿಕಾದ ರಾಜಧಾನಿ ವಾಷಿಂಗ್ಟನ್ ಇಲ್ಲಿಯ `ಮಿಡಲ್ ಈಸ್ಟ್ ಮೀಡಿಯಾ ರಿಸರ್ಚ್ ಇನ್ಸ್ಟಿಟ್ಯೂಟ್’ ಈ ಸಂಸ್ಥೆಯಿಂದ ಮೊಟ್ಟಮೊದಲ ಬಾರಿಗೆ, ಝಾಕಿರಗೆ ಉದ್ಘಾಟನೆ ಸಮಾರಂಭಕ್ಕೆ ಕತಾರದಿಂದ ಆಹ್ವಾನಿಸಲಾಗಿತ್ತು ಎಂದು ಹೇಳಿದೆ.

ಸಂಪಾದಕೀಯ ನಿಲುವು

ಕತಾರದ ಈ ಹೇಳಿಕೆಯ ಬಗ್ಗೆ ಯಾರು ವಿಶ್ವಾಸ ಇಡುವರು ? ಝಾಕಿರ್ ನಾಯಿಕ್ ಇವನಿಗೆ ಕತಾರದಿಂದ ಆಹ್ವಾನಿಸಿಲ್ಲವಾದರೇ ಅವನು ಅನಿರೀಕ್ಷಿತವಾಗಿ ಮತ್ತು ಅದು ಫುಟ್ಬಾಲ್ ನಂತಹ ಆಟಕ್ಕಾಗಿ ಅಲ್ಲಿ ಏಕೆ ಮತ್ತು ಏಕೆ ತಲುಪಿದ ?