ರಾಜಸ್ಥಾನದಲ್ಲಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮತಾಂತರ : ನವ ವಧು-ವರರಿಂದ ಮಾಡಿಸಲಾಯಿತು ಹಿಂದೂವಿರೋಧಿ ಶಪಥ

ಜಯಪುರ – ರಾಜಸ್ಥಾನದಲ್ಲಿನ ಭರತಪೂರದಲ್ಲಿ ನಡೆದ ಒಂದು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ವಧು-ವರರಿಂದ ಹಿಂದೂವಿರೋಧಿ ಶಪಥ ಮಾಡಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಈ ಮಹೋತ್ಸವದ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಿತವಾಗಿದೆ. ಈ ವಿಡಿಯೋದಲ್ಲಿ ೧೧ ನವವಧು-ವರರ ಜೋಡಿಗೆ ಶಪಥ ಮಾಡಿಸಿಕೊಳ್ಳುತ್ತಿರುವುದನ್ನು ತೋರಿಸಲಾಗಿದೆ. ಇದರಲ್ಲಿ ಅವರು ‘ನಾನು ಬ್ರಹ್ಮ, ವಿಷ್ಣು, ಮಹೇಶ ಹಾಗೂ ಗಣಪತಿಯನ್ನು ನಂಬುವುದಿಲ್ಲ ಹಾಗೂ ಅವರ ಪೂಜೆಯನ್ನು ಮಾಡುವುದಿಲ್ಲ’ ಎಂದು ಶಪಥ ತೆಗೆದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಈ ಶಪಥದ ಬಗ್ಗೆ ಆಕ್ಷೇಪವೆತ್ತಿ ವಿಶ್ವ ಹಿಂದೂ ಪರಿಷತ್ತು ಆಂದೋಲನ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿಯೂ ಇದೇ ರೀತಿಯಲ್ಲಿ ನವವಿವಾಹಿತ ಜೋಡಿಗಳಿಂದ ಹಿಂದೂ ವಿರೋಧಿ ಶಪಥ ಮಾಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆಮ ಆದಮೀ ಪಕ್ಷದ ನೇತಾರರಾದ ರಾಜೇಂದ್ರ ಪಾಲ ಗೌತಮರವರೂ ಸಹಭಾಗಿಯಾಗಿದ್ದರು. ಈ ಬಗ್ಗೆ ವಿಡಿಯೋ ಪ್ರಸಾರವಾದ ನಂತರ ಆ ಮಂತ್ರಿಗಳಿಗೆ ತ್ಯಾಗಪತ್ರ ನೀಡಬೇಕಾಯಿತು.

ಸಂಪಾದಕೀಯ ನಿಲುವು

ಕಾಂಗ್ರೆಸ್ಸಿನ ರಾಜ್ಯದಲ್ಲಿ ಹೀಗೆ ನಡೆಯುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿದೆ ?