ಆರೋಪಿ ಶಾರಿಕ ಇಸ್ಲಾಮಿಕ್ ಸ್ಟೇಟ್‌ನೊಂದಿಗೆ ಸಂಪರ್ಕ !

ಮಂಗಳೂರಿನ ಬಾಂಬ್ ಸ್ಫೋಟ ಪ್ರಕರಣ

ಮಂಗಳೂರು – ಇಲ್ಲಿ ರಿಕ್ಷಾದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲಾಗಿರುವ ಆರೋಪಿ ಶಾರಿಕ ಸ್ವತಃ ಶೇ. ೪೫ ರಷ್ಟು ಬೆಂದಿದ್ದಾನೆ. ಪೊಲಿಸರ ವಿಚಾರಣೆಯಿಂದ ಶಾರಿಕ ಇಸ್ಲಾಮಿಕ ಸ್ಟೇಟನ ವಿದೇಶದ ‘ಹ್ಯಾಂಡಲರ’(ಆದೇಶ ನೀಡುವವರ) ಸಂಪರ್ಕದಲ್ಲಿದ್ದನು’, ಎಂದು ಹೆಚ್ಚುವರಿ ಪೊಲೀಸ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆಲೋಕ ಕುಮಾರ ಇವರು ಮಾಹಿತಿ ನೀಡಿದ್ದಾರೆ.

೧. ಅಲೋಕ ಕುಮಾರ ಇವರು, ಶಾರಿಕ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಿವಾಸಿಯಾಗಿದ್ದಾನೆ. ಮೈಸೂರಿನ ಅವನ ಬಾಡಿಗೆ ಮನೆಯಿಂದ ಬಾಂಬ್ ತಯಾರಿಸುವ ಸಾಮಗ್ರಿಗಳು ಸಿಕ್ಕಿವೆ. ಒಂದು ನಕಲಿ ಆಧಾರಕಾರ್ಡನ ಸಹಾಯದಿಂದ ಇಲ್ಲಿ ಬಡಿಗೆ ಮನೆಯನ್ನು ಪಡೆದುಕೊಂಡು ವಾಸಿಸುತ್ತಿದ್ದನು. ಶಾರಿಕ ಇಸ್ಲಾಮಿಕ ಸ್ಟೇಟನ ಸೈದ್ಧಾಂತಿಕದಿಂದ ಪ್ರಭಾವಿತನಾಗಿದ್ದ. ಆತ ಇಸ್ಲಾಮಿಕ್ ಸ್ಟೆಟ್‌ನ ಸಂಪರ್ಕದಲ್ಲಿದ್ದನು. ಸಪ್ಟೆಂಬರ ೧೯ ರಂದು ಶಾರಿಕ ತನ್ನ ಇಬ್ಬರು ಸ್ನೇಹಿತರೊಂದಿಗೆ ತುಂಗಭದ್ರಾ ನದಿಯ ದಡದಲ್ಲಿರುವ ಒಂದು ಅರಣ್ಯಕ್ಕೆ ಹೋಗಿ ಬಾಂಬ್ ಸ್ಫೋಟದ ಪರೀಕ್ಷಣೆ ನಡೆಸಿದ್ದನು. ಸಪ್ಟೆಂಬರ ೨೦ ರಂದು ಪೊಲೀಸರು ಅವನ ಇಬ್ಬರು ಸ್ನೇಹಿತರಾದ ಮಾಜ ಮುನೀರ ಮತ್ತು ಸಯ್ಯದ ಯಾಸಿನ ಇವರನ್ನು ಬಂಧಿಸಿದ್ದರು; ಆದರೆ ಶಾರಿಕ ಪರಾರಿಯಾಗಿದ್ದನು. ತದನಂತರ ಅವನು ಮೈಸೂರಿನಲ್ಲಿ ವಾಸಿಸುತ್ತಿದ್ದನು. ಇಲ್ಲಿಯೇ ಅವನು ಬಾಂಬ ತಯಾರಿಸುವ ಅಭ್ಯಾಸ ಮಾಡಿದನು.

೨. ನವೆಂಬರ ೧೯ ರಂದು ಸಾಯಂಕಾಲ ಅವನು ಕುಕ್ಕರನಲ್ಲಿ ಬಾಂಬ್ ಇಟ್ಟುಕೊಂಡು ರಿಕ್ಷಾದ ಮೂಲಕ ಪಂಪವೆಲ್ ಕಡೆಗೆ ಹೋಗುತ್ತಿದ್ದನು; ಆದರೆ ರಿಕ್ಷಾ ಕಂಕನಾಡಿ ಪ್ರದೇಶದಿಂದ ಹೋಗುತ್ತಿರುವಾಗ ಕುಕ್ಕರನಲ್ಲಿರುವ ಬಾಂಬ ಸ್ಫೋಟಗೊಂಡು ರಿಕ್ಷಾಕ್ಕೆ ಬೆಂಕಿ ತಗುಲಿತು. ಇದರಲ್ಲಿ ಅವನು ಸ್ವತಃ ಮತ್ತು ಚಾಲಕ ಪುರುಷೋತ್ತಮ ಗಾಯಗೊಂಡರು.

೩. ಶಾರಿಕನಿಗೆ ೨೦೨೨ ರಲ್ಲಿ ಗೋಡೆಯ ಮೇಲೆ ದೇಶವಿರೋಧಿ ಘೋಷಣೆ ಬರೆದಿದ್ದ ಪ್ರಕರಣದಲ್ಲಿ ದೂರು ದಾಖಲಿಸಿ ಅವನನ್ನು ಬಂಧಿಸಲಾಗಿತ್ತು. ಕೆಲವು ದಿನಗಳ ಬಳಿಕ ಅವನನ್ನು ಜಾಮೀನಿನ ಮೇಲೆ ಬಿಡಲಾಗಿತ್ತು.

ಸಂಪಾದಕೀಯ ನಿಲುವು

ಈ ರೀತಿಯ ಜಿಹಾದಿ ಚಟುವಟಿಕೆಗಾಗಿ ಜಿಹಾದಿ ಮಾನಸಿಕತೆ ನಿರ್ಮಾಣ ಮಾಡುವ ಎಲ್ಲ ರೀತಿಯ ವಿಷಯಗಳನ್ನು ಈಗ ನಿರ್ಬಂಧಿಸುವುದು ಆವಶ್ಯಕವಾಗಿದೆ. ಸರಕಾರವು ಈಗ ಇಂತಹ ಮಾನಸಿಕತೆ ಯಾವ ವಿಷಯದಿಂದ ನಿರ್ಮಾಣವಾಗುತ್ತಿದೆ ಎನ್ನುವುದನ್ನು ಹುಡುಕಿ ಅದನ್ನು ಬಹಿರಂಗ ಪಡಿಸಬೇಕು !