ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಹ ರಿಂಡಾ ಇವನು ಪಾಕಿಸ್ತಾನದಲ್ಲಿ ಮೃತಪಟ್ಟನು

ಇಸ್ಲಾಮಾಬಾದ (ಪಾಕಿಸ್ತಾನ) – ಖಲಿಸ್ತಾನಿ ಭಯೋತ್ಪಾದಕ ಹರವಿಂದರ ಸಿಂಹ ರಿಂಡಾ ಇವನು ಪಾಕಿಸ್ತಾನದಲ್ಲಿ ಮೃತಪಟ್ಟಿದ್ದಾನೆ. ಡ್ರಕ್ಸನ ಅತಿಯಾದ ಸೇವನೆಯಿಂದ ಅವನ ಸಾವಾಗಿದೆ ಎಂದು ಹೇಳಲಾಗುತ್ತಿದೆ. ಅವನು ಮೂಲತಃ ಮಹಾರಾಷ್ಟ್ರದ ನಾಂದೇಡದ ನಿವಾಸಿಯಾಗಿದ್ದನು.

ನಾಂದೇಡದಲ್ಲಿ ಉದ್ಯಮಿ ಸಂಜಯ ಬಿಯಾಣಿ ಇವರ ಹತ್ಯೆಯ ಹಿಂದೆ ರಿಂಡಾ ಇವನ ಕೈವಾಡವಿತ್ತು. ಪಂಜಾಬದ ಗಾಯಕ ಸಿದ್ದು ಮುಸೇವಾಲಾ ಇವರ ಹತ್ಯೆ ಮಾಡುವವರ ಹಿಂದೆ ರಿಂಡಾ ಇವನ ಸಂಪರ್ಕದಲ್ಲಿರುವ ಕೆಲವು ಜನರ ಕೈವಾಡ ಇತ್ತು. ಇದರ ಜೊತೆಗೆ ‘ಪಂಜಾಬ್ ಇಂಟೆಲಿಜೆನ್ಸ್ ಹೆಡ್ ಕ್ವಾರ್ಟರ್’ ಮೇಲಿನ ದಾಳಿಯ ಜೊತೆಗೆ, ಪಂಜಾಬದಲ್ಲಿನ ಅನೇಕ ದಾಳಿಯ ಹಿಂದೆ ಇವನ ಕೈವಾಡ ಇತ್ತು. ರೀಂಡಾ ಇವನು ೨೦೨೦ ರಲ್ಲಿ ಪಾಕಿಸ್ತಾನಿ ಗೂಢಚಾರ ಸಂಘಟನೆ ಐ.ಎಸ್.ಐ.ನ ಸಹಾಯದಿಂದ ಭಾರತ ತೊರೆದಿದ್ದನು. ಅಂದಿನಿಂದ ಅವನು ಪಾಕಿಸ್ತಾನದಲ್ಲೇ ವಾಸವಾಗಿದ್ದು ಭಾರತದಲ್ಲಿನ ಭಯೋತ್ಪಾದಕ ದಾಳಿಯ ಯೋಜನೆ ಮಾಡುತ್ತಿದ್ದನು. ಅವನು ಭಯೋತ್ಪಾದಕರ ಮೂಲಕ ಪಂಜಾಬ್, ಹರಿಯಾಣಾ, ತೆಲಂಗಾಣ ಮತ್ತು ಮಹಾರಾಷ್ಟ್ರ ಇಲ್ಲಿ ಸ್ಪೋಟಕ ವಸ್ತುಗಳನ್ನು ಪೂರೈಸುತ್ತಿರುವುದು ಗೂಡಾಚಾರ ಇಲಾಖೆಯಿಂದ ಕೆಲವು ದಿನಗಳ ಹಿಂದೆ ಸ್ಪಷ್ಟಪಡಿಸಿತ್ತು. ಅವನ ವಿರುದ್ಧ ಇಲ್ಲಿಯವರೆಗೆ ೩೭ ದೂರುಗಳು ದಾಖಲಾಗಿದ್ದು ಅದರಲ್ಲಿ ನಾಂದೇಡದಲ್ಲಿ ೧೪ ಹಾಗೂ ಪಂಜಾಬದಲ್ಲಿ ೨೩ ದೂರುಗಳ ಸಮಾವೇಶವಿದೆ.