ಅನಾಸಕ್ತ, ತಲ್ಲೀನರಾಗಿ ಮೂರ್ತಿ ಕೆತ್ತನೆಯ ಸೇವೆ ಮಾಡುವ ಮತ್ತು ಪರಾತ್ಪರ ಗುರು ಡಾ. ಆಠವಲೆ ಇವರ ಕುರಿತು ಭಾವವಿರುವ ಕಾರವಾರದ ಶಿಲ್ಪಕಾರ ಪೂ. ನಂದಾ ಆಚಾರಿ (ಗುರೂಜಿ) (೮೨ ವರ್ಷ)

ಪೂ. ನಂದಾ ಆಚಾರಿ (ಗುರೂಜಿ)

ಸನಾತನ ಸಂಸ್ಥೆಯು ಕಾರವಾರದ ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ (ಗುರೂಜಿ) (ವಯಸ್ಸು ೮೨ ವರ್ಷ) ಇವರಿಂದ ಶ್ರೀ ಸಿದ್ಧಿವಿನಾಯಕನ ಮೂರ್ತಿ ಕೆತ್ತಿಸಿದೆ. ಸನಾತನ ಸಂಸ್ಥೆಯ ಸಾಧಕ ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ ಇವರು ಶಿಲ್ಪಕಲೆ ಕಲಿಯಲು ಅವರಲ್ಲಿಗೆ ಹೋಗಿದ್ದರು. ಆ ಸಮಯದಲ್ಲಿ ಅವರಿಗೆ ಗುರೂಜಿಯಿಂದ ಕಲಿಯಲು ಸಿಕ್ಕಿರುವ ಅಂಶಗಳು ಮತ್ತು ಗಮನಕ್ಕೆ ಬಂದಿರುವ ಅವರ ಗುಣವೈಶಿಷ್ಟ್ಯಗಳನ್ನು ಮುಂದೆ ನೀಡಲಾಗಿದೆ. ಕಳೆದ ವಾರದ ಸಂಚಿಕೆಯಲ್ಲಿ ಈ ಲೇಖನದ ಕೆಲವು ಭಾಗ ನೋಡಿದೆವು. ಇಂದು ಉಳಿದಿರುವ ಭಾಗ ನೋಡೋಣ. (ಈ ಲೇಖನವನ್ನು ಪೂ. ನಂದಾ ಆಚಾರಿ ಇವರು ಸಂತರಾಗುವ ಮೊದಲಿನದ್ದಾಗಿದ್ದರಿಂದ ಅವರ ಹೆಸರಿನ ಮುಂದೆ ‘ಶ್ರೀ’ ಎಂದು ಬರೆಯಲಾಗಿದೆ.)

ಹಿಂದಿನ ಕಾಲದಲ್ಲಿ ಶಿಷ್ಯರು ಗುರುಗಳಿಂದ ಶಿಕ್ಷಣ ಪಡೆಯಲು ಅವರ ಆಶ್ರಮಕ್ಕೆ (ಗುರುಕುಲಕ್ಕೆ) ಹೋಗುತ್ತಿದ್ದರು. ಆಗ ಅವರು ತಮ್ಮ ಗುರುಗಳಿಗೆ ‘ಗುರೂಜಿ’ ಎಂದು ಕರೆಯುತ್ತಿದ್ದರು. ಅದೇ ರೀತಿ ಸಾಧಕರಾದ ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ ಇವರು ಶಿಲ್ಪ ಕಲೆ ಕಲಿಯಲು ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ ಇವರಲ್ಲಿಗೆ ಹೋಗಿದ್ದರು. ಆದ್ದರಿಂದ ಅವರ ಬಗ್ಗೆ ಮುಂದಿನ ಲೇಖನದಲ್ಲಿ ಶಿಲ್ಪಕಾರರಾದ ಶ್ರೀ. ನಂದಾ ಆಚಾರಿ ಇವರನ್ನು ಸಾಧಕರು ‘ಗುರೂಜಿ’ ಎಂದು ಸಂಬೋಧಿಸಿದ್ದಾರೆ.

ಶ್ರೀ. ರಾಮಾನಂದ ಪರಬ
ಶ್ರೀ. ರಾಜು ಸುತಾರ

೧೫. ಭಾವ

೧೫ ಆ ೩. ಶ್ರೀ ಪದ್ಮಾವತಿ ದೇವಿಯ ಮೂರ್ತಿಯನ್ನು ಭಟ್ಕಳಕ್ಕೆ ತೆಗೆದುಕೊಂಡು ಹೋದ ನಂತರ ಗ್ರಾಮಸ್ಥರು ಅದು ಅವರಿಗೆ ಇಷ್ಟವಾಗದ ಕಾರಣ ಆ ಮೂರ್ತಿಯನ್ನು ಒಡೆಯುವ ಸಿದ್ಧತೆಯಲ್ಲಿದ್ದರು ಮತ್ತು ಸ್ವಾಮೀಜಿಯೊಬ್ಬರು ‘ಈ ಮೂರ್ತಿಯಲ್ಲಿ ಸೂರ್ಯನಂತಹ ತೇಜವಿದೆ. ಇದರ ಪ್ರತಿಷ್ಠಾಪನೆ ಮಾಡಿ’, ಎಂದು ಹೇಳಿದ ನಂತರ ಗ್ರಾಮಸ್ಥರು ಮೂರ್ತಿಯನ್ನು ಪ್ರತಿಷ್ಠಾಪಿಸಿದರು : ಭಟ್ಕಳದಲ್ಲಿ ಶ್ರೀ ಪದ್ಮಾವತಿದೇವಿಯ ಮೂರ್ತಿ ತೆಗೆದುಕೊಂಡು ಹೋದ ನಂತರ ಅಲ್ಲಿಯ ಗ್ರಾಮಸ್ಥರಿಗೆ ‘ಆ ಮೂರ್ತಿ ಇಷ್ಟವಾಗಲಿಲ್ಲ’, ಎಂದು ಆ ಮೂರ್ತಿಯನ್ನು ಅಲ್ಲಿಯೇ ಹತ್ತಿರದ ನದಿಯ ತೀರದಲ್ಲಿಟ್ಟು ಬಂದರು. ಅವರು ಆ ಮೂರ್ತಿಯನ್ನು ಒಡೆಯುವ ಸಿದ್ಧತೆಯಲ್ಲಿದ್ದರು. ಆಗ ಒಬ್ಬ ಸ್ವಾಮೀಜಿಯವರು ಅಲ್ಲಿಗೆ ಬಂದು, “ಈ ಮೂರ್ತಿಯಲ್ಲಿ ಸೂರ್ಯನಂತೆ ತೇಜವಿದೆ. ಅದರ ಪ್ರತಿಷ್ಠಾಪನೆ ಮಾಡಿ”, ಎಂದರು. ಇದನ್ನು ಕೇಳಿ ಗ್ರಾಮಸ್ಥರು ಅಲ್ಲಿಂದ ಮೂರ್ತಿ ತಂದು ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರು.

೧೫ ಆ ೪. ಜಲಾಧಿವಾಸದ ವಿಧಿಗಾಗಿ ರಾತ್ರಿ ದೇವಿಯ ಮೂರ್ತಿಯನ್ನು ಕುಂಡದಲ್ಲಿಟ್ಟು ಪಕ್ಕಕ್ಕೆ ಹೂವಿನ ಬೀಜ ಹಾಕಿದಾಗ ಬೆಳಗ್ಗೆಯೇ ಆ ಬೀಜದಿಂದ ಸಸಿ ತಯಾರಾಗಿ ಅದಕ್ಕೆ ಹೂವು ಬಂದಿದ್ದವು : ಅಲ್ಲಿ ಇಟ್ಟಿಗೆ ಮತ್ತು ಮಣ್ಣಿನಿಂದ ಒಂದು ನೀರಿನ ಕುಂಡ ತಯಾರಿಸಿ ಜಲಾಧಿವಾಸ ವಿಧಿಗಾಗಿ ರಾತ್ರಿ ಆ ಮೂರ್ತಿಯನ್ನು ಕುಂಡದಲ್ಲಿ ಇಡಲಾಯಿತು ಮತ್ತು ಪಕ್ಕದಲ್ಲಿ ಹೂವಿನ ಬೀಜ ಹಾಕಲಾಯಿತು. ಬೆಳಗ್ಗೆ ನೋಡಿದಾಗ ಅಂದರೆ ೮ ತಾಸುಗಳಲ್ಲಿ ಆ ಬೀಜದಿಂದ ಸಸಿಯಾಗಿ ಅದಕ್ಕೆ ಹೂವುಗಳು ಬಂದಿದ್ದವು. – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೧.೨.೨೦೨೦)

೧೫ ಇ. ಗುರೂಜಿಯವರು ಅನುಭವಿಸಿರುವ ಸ್ಥಿರತೆ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆಯವರ ಬಗ್ಗೆ ಭಾವ

೧೫ ಇ ೧. ಗೋವಾದ  ಒಬ್ಬ ವ್ಯಕ್ತಿಯು ಗುರೂಜಿಯವರಿಗೆ ಒಂದು ದೇವಸ್ಥಾನದಲ್ಲಿ ಹಿತ್ತಾಳೆಯ ಚೌಕಟ್ಟನ್ನು ತಯಾರಿಸಲು ಹೇಳಿದರು, ಗುರೂಜಿಯವರು ಅದನ್ನು ಕ್ಲಪ್ತಸಮಯಕ್ಕೆ ಪೂರ್ಣಗೊಳಿಸಿದರೂ ‘ತಡವಾಗಿದೆ’, ಎಂದು ಹೇಳಿ ಆ ವ್ಯಕ್ತಿಯು ಕೆಲವು ಮಹಿಳೆಯರ ಜೊತೆಗೆ ಬಂದು ಗುರೂಜಿಯವರಿಗೆ ಅವಾಚ್ಯವಾಗಿ ನಿಂದಿಸಿದರು :

‘ಗೋವಾದ ಒಬ್ಬ ವ್ಯಕ್ತಿಯು ಗುರೂಜಿಯವರಿಗೆ ಒಂದು ದೇವಸ್ಥಾನಕ್ಕಾಗಿ ಹಿತ್ತಾಳೆಯ ಚೌಕಟ್ಟು ತಯಾರಿಸುವ ಕೆಲಸ ನೀಡಿದರು. ಗುರೂಜಿಯವರು ಆ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿದ್ದರು. ಆದರೆ ಸಂಬಂಧಿತ ವ್ಯಕ್ತಿಯು ಆ ಚೌಕಟ್ಟು ತೆಗೆದುಕೊಳ್ಳಲು ಸಮಯಕ್ಕೆ ಸರಿಯಾಗಿ ಬರಲಿಲ್ಲ. ಆ ವ್ಯಕ್ತಿ ಬಂದು ಬಹಳ ಸಿಟ್ಟಿನಿಂದ ಮತ್ತು ಗೌರವ ನೀಡದೆ ಗುರೂಜಿಯವರೊಂದಿಗೆ ಮಾತನಾಡುತ್ತಿದ್ದನು. ಆ ವ್ಯಕ್ತಿಯು ಗುರೂಜಿಯವರು ಮೂರ್ತಿ ತಯಾರಿಸುವಾಗಲೇ ಅವರನ್ನು ಅಯೋಗ್ಯ ಪದ್ಧತಿಯಿಂದ ಕೈ ಹಿಡಿದು ಎಳೆದು ಎಬ್ಬಿಸಿ, “ನೀವು ಚೌಕಟ್ಟನ್ನು ನೀಡಲು ತಡ ಮಾಡಿದ್ದೀರಿ ಮತ್ತು ಅದರ ಕೆಲವು ಭಾಗ ವ್ಯವಸ್ಥಿತವಾಗಿಯೂ ಮಾಡಿಲ್ಲ, ಎಂದು ಹೇಳತೊಡಗಿದನು. ಆ ವ್ಯಕ್ತಿ ಗುರೂಜಿಯವರಿಗೆ ಬಾಯಿಗೆ ಬಂದಂತೆ ಮಾತನಾಡುತ್ತಿದ್ದನು. ಆ ವ್ಯಕ್ತಿಯ ಜೊತೆಗೆ ಬಂದಿರುವ ಮಹಿಳೆಯರು ಗುರೂಜಿಯವರಿಗೆ ಅವಾಚ್ಯವಾಗಿ ಬೈಯ್ಯುತ್ತಾ “ನಮ್ಮನ್ನು ಮುಟ್ಟಿದ್ದಿ ಎಂದು ನಾವು ನಿನ್ನ ವಿರುದ್ಧ ಪೊಲೀಸರಿಗೆ ದೂರು ನೀಡಿ ನಿನ್ನನ್ನು ಜೈಲಿಗೆ ಹಾಕುತ್ತೇವೆ, ಆಗ ನಿನಗೆ ತಿಳಿಯುವುದು”, ಎಂದರು. ಆದರೂ ಗುರೂಜಿಯವರು ಶಾಂತ ಮತ್ತು ಸ್ಥಿರವಾಗಿದ್ದರು. “ನಾನು ಆ ಮಹಿಳೆಯರ ತಂದೆಯ ವಯಸ್ಸಿನವನಾಗಿದ್ದೇನೆ, ಆದರೂ ಅವರು ಹೇಗೆ ಮಾತನಾಡುತ್ತಿದ್ದಾರೆ ? ನೋಡಿ”, ಎಂದು ಗುರೂಜಿಯವರು ನನಗೆ ಹೇಳಿದರು.

೧೫ ಇ ೨. ಆ ವ್ಯಕ್ತಿಯು ಗುರೂಜಿಯವರನ್ನು ಕೆಲಸಗಾರರ ಹತ್ತಿರ ಕರೆದುಕೊಂಡು ಹೋಗುವುದು, ಗುರೂಜಿಯವರು ಸಾಧಕರನ್ನು ಜೊತೆಗೆ ಕರೆದುಕೊಂಡು ಹೋಗುವುದು, ಆ ವ್ಯಕ್ತಿಯು ಸಾರಾಯಿ ಕುಡಿದು ಗುರೂಜಿಯವರಿಗೆ ಬೈಗುಳ ಬೈಯ್ಯುತ್ತಿದ್ದು ಗದರಿಸುತ್ತಿದ್ದನು, ಆದರೂ ಗುರೂಜಿ ಸ್ಥಿರವಾಗಿದ್ದರು ಮತ್ತು ಅನಂತರ ‘ನಿಮ್ಮ ಮಾಧ್ಯಮದಿಂದ ಸ್ವಾಮೀಜಿ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ) ಅಲ್ಲಿ ಬಂದಿರುವುದರಿಂದ ಅವರಿಗೆ ನನಗೆ ಹೊಡೆಯಲು ಸಾಧ್ಯವಾಗಲಿಲ್ಲ’, ಎಂದು ಸಾಧಕರಿಗೆ ಹೇಳುವಾಗ ಗುರೂಜಿಯವರ ಭಾವಜಾಗೃತವಾಯಿತು : ಆ ವ್ಯಕ್ತಿ ತಮ್ಮ ಕೆಲಸಗಾರರಿಂದ ಕೆಲಸ ಮಾಡಿಸಿಕೊಳ್ಳುವ ಸ್ಥಳಕ್ಕೆ ಗುರೂಜಿಯವರನ್ನು ಕರೆದುಕೊಂಡು ಹೋಗುವವನಿದ್ದನು. ಆ ಸಮಯದಲ್ಲಿ ಗುರೂಜಿ ನನಗೆ, “ನೀವು ನನ್ನ ಜೊತೆಗೆ ಬನ್ನಿ, ಇದರಿಂದ ಅವರು ನನಗೆ ಹೊಡೆಯುವ ಅಥವಾ ಯಾವುದೇ ಅಪಾಯ ಮಾಡುವುದಿಲ್ಲ” ಎಂದು ಹೇಳಿದರು. ಅವರು ಹೇಳಿದಂತೆ ನಾನು ಅವರ ಜೊತೆಗೆ ಹೋದೆ. ಆ ವ್ಯಕ್ತಿ ನಮ್ಮನ್ನು ಗುರೂಜಿಯ ಕೆಲಸಗಾರನ ಮನೆಗೆ ಕರೆದುಕೊಂಡು ಹೋದರು. ಅಲ್ಲಿ ಆ ವ್ಯಕ್ತಿ ಸಾರಾಯಿ ಕುಡಿದು ಬಂದಿದ್ದನು ಮತ್ತು ಆತನ ಜೊತೆಗಿನ ಬೇರೆ ಜನರು ಗುರೂಜಿಯವರಿಗೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದರು. ಅವರು ಅವರ ಬಗ್ಗೆ ಸುಳ್ಳು ಆರೋಪ ಕೂಡ ಮಾಡಿದರು. ‘ನಿನ್ನನ್ನು ಕಾರಾಗೃಹಕ್ಕೆ ಕಳುಹಿಸುತ್ತೇವೆ’, ಎಂದು ಅವರು ಹೇಳತೊಡಗಿದರು. ಆದರೂ ಗುರೂಜಿ  ಸ್ಥಿರವಾಗಿದ್ದರು. ಈ ಪ್ರಸಂಗ ನಡೆದ ನಂತರ ಗುರೂಜಿ ನನಗೆ ಹೇಳಿದರು, “ನೀವು ನನ್ನ ಜೊತೆಗೆ ಇರುವುದರಿಂದ ಮತ್ತು ನಿಮ್ಮ ಮಾಧ್ಯಮದಿಂದ ಸ್ವಾಮೀಜಿ (ಸಚ್ಚಿದಾನಂದ ಪರಬ್ರಹ್ಮ ಡಾ. ಅಠವಲೆ) ಇಲ್ಲಿ ಬಂದಿದ್ದರು. ಆದ್ದರಿಂದ ಅವರಿಗೆ ನನಗೆ ಹೊಡೆಯಲು ಸಾಧ್ಯವಾಗಲಿಲ್ಲ”, ಇದನ್ನು ಹೇಳುವಾಗ ಅವರ ಭಾವ ಜಾಗೃತವಾಗಿತ್ತು.

೧೫ ಇ ೩. ‘ಈ ಪ್ರಸಂಗದ ಮಾಧ್ಯಮದಿಂದ ಸಾಡೇಸಾತಿ ನನ್ನ ಕೆಟ್ಟ ಪ್ರಾರಬ್ಧ ತೆಗೆದುಕೊಂಡು ಹೋಯಿತು, ಈಗ ನನಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಜೊತೆಗೆ ಭೇಟಿ ಆಗುವುದು’, ಎಂದು ಗುರೂಜಿಯವರು ಹೇಳುವುದು : ಈ ಪ್ರಸಂಗ ನಡೆದ ನಂತರ ಗುರೂಜಿ ನನಗೆ ಹೇಳಿದರು, “೨೫.೧.೨೦೨೦ ಕ್ಕೆ ನನ್ನ ಸಾಡೆಸಾತಿ ಮುಗಿಯಿತು. ‘ಸಾಡೆಸಾತಿ ಮುಗಿಯುವಾಗ ಏನಾದರೂ ತೆಗೆದುಕೊಂಡು ಹೋಗುತ್ತದೆ ಎಂದು ಹೇಳುತ್ತಾರೆ. ೨೬.೧.೨೦೨೦ ರಂದು ನಡೆದಿರುವ ಈ ಪ್ರಸಂಗದ ಮಾಧ್ಯಮದಿಂದ ಸಾಡೇಸಾತಿ ನನ್ನ ಕೆಟ್ಟ ಪ್ರಾರಬ್ಧ ತೆಗೆದುಕೊಂಡು ಹೋಯಿತು. ಈಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರ ಜೊತೆಗೆ ನನ್ನ ಭೇಟಿಯಾಗುವುದು. ನನ್ನ ರಾಶಿಯಲ್ಲಿ ಮಂಗಳ ಮತ್ತು ಗುರು ಉಚ್ಚಸ್ಥಾನದಲ್ಲಿದ್ದಾರೆ”, ಎಂದರು. – ಶ್ರೀ. ರಾಮಾನಂದ ಪರಬ

೧೬ . ಸನಾತನದ ಸಾಧಕರ ಮೇಲೆ ಗುರೂಜಿಯವರ ಪ್ರೀತಿ

೧೬ ಅ. ಗುರೂಜಿಯವರಿಗೆ ಅವರ ಶ್ರೀ ಗುರುಗಳು ಅವರಿಗೆ ನೀಡಿದ ಆಶೀರ್ವಾದವನ್ನು ಅವರು ಸಾಧಕರಿಗೆ ನೀಡುವುದು : ಗುರೂಜಿಯವರಿಗೆ ಅವರ ಶ್ರೀ ಗುರುಗಳು (ಶ್ರೀ ಬಾಬಾ ಮಹಾರಾಜರು) ಆಶೀರ್ವಾದ ನೀಡಿದ್ದರು, “ನೀನು ಯಾವ ಕಲ್ಲನ್ನು ಮುಟ್ಟುತ್ತೀಯೋ ಆ ಕಲ್ಲಿನಿಂದ ನಿನಗೆ ಯಾವ ಮೂರ್ತಿ ತಯಾರಿಸುವುದಿದೆಯೋ ಅದು ತನ್ನಿಂದ ತಾನೇ ಪೂರ್ಣವಾಗುವುದು”. ಅದೇ ಆಶೀರ್ವಾದ ಅವರು ನಮಗೆ ನೀಡಿದರು. ಅವರು ಹೇಳಿದರು, “ನೀವು ಯಾವ ಕಲ್ಲನ್ನು ಮುಟ್ಟುವಿರಿ, ಯಾವ ಕಲ್ಲಿನಿಂದ ನಿಮಗೆ ಯಾವ ಮೂರ್ತಿ ಮಾಡುವುದಿದೆ, ಅದು ತನ್ನಿಂದ ತಾನೇ ಪೂರ್ಣವಾಗುವುದು. ಸ್ವಾಮೀಜಿ ಅವರು (ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು) ಕೇವಲ ನಿಮ್ಮಿಬ್ಬರನ್ನೇ ಇಲ್ಲಿಗೆ ಕಳುಹಿಸಿಲ್ಲ, ನೀವು ೨ ಕೋಟಿ ಜನರಿಗೆ ಸಮಾನರಾಗಿದ್ದೀರಿ”, ಎಂದರು. – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ (೧.೨.೨೦೨೦)

೧೭. ಶ್ರೀ. ನಂದಾ ಆಚಾರಿ ಇವರಿಗೆ ಬಂದಿರುವ ಅನುಭೂತಿ

೧೭ ಅ. ಬದರಿನಾಥದಿಂದ ಬಂದಿರುವ ಒಬ್ಬ ಸಾಧು ಗುರೂಜಿಯವರ ಬಳಿ ೫೦ ಸಾವಿರ ರೂಪಾಯಿ ಕೇಳಿದರು, ಅವರು ಆ ಹಣ ನೀಡಿದ ನಂತರ ಮರುದಿನ ಗುರೂಜಿಯವರಿಗೆ ೧ ಲಕ್ಷ ರೂಪಾಯಿ ದೊರೆಯಿತು ಮತ್ತು ‘ನಾವು ದೇವರಿಗೆ ಎಲ್ಲವನ್ನೂ ನೀಡಿದರೆ, ದೇವರು ನಮಗೆ ಎರಡುಪಟ್ಟು ನೀಡುತ್ತಾನೆ’, ಎಂದು ಗುರೂಜಿಯವರು ಹೇಳಿದರು : ‘ಒಮ್ಮೆ ಬದರಿನಾಥದಿಂದ ಸಾಧುವೊಬ್ಬರು ಗುರೂಜಿಯವರ ಬಳಿ ಬಂದಿದ್ದರು. ಅವರು ಗುರೂಜಿಯವರಿಗೆ, “ನನಗೆ ೫೦ ಸಾವಿರ ರೂಪಾಯಿ ಕೊಡು ಎಂದರು”, ಆಗ ಗುರೂಜಿಯವರು, “ನನ್ನ ಹತ್ತಿರ ೫೦ ಸಾವಿರ ರೂಪಾಯಿ ಇಲ್ಲ”, ಎಂದರು. ಆಗ ಆ ಸಾಧು ಅವರಿಗೆ, “ಇಲ್ಲ ಎಂದು ಹೇಗೆ ಹೇಳುತ್ತೀಯಾ ? ನಿನ್ನ ಕಪಾಟಿನಲ್ಲಿ ೫೦ ಸಾವಿರ ರೂಪಾಯಿ ಇದೆ, ಅದು ನನಗೆ ಬೇಕಿದೆ, ಅದು ನನಗೆ ತಂದು ಕೊಡು”, ಎಂದರು. ಗುರೂಜಿಯವರಿಗೆ ಒಂದು ಮೂರ್ತಿಯ ೫೦ ಸಾವಿರ ರೂಪಾಯಿ ಹಿಂದಿನ ದಿನವೇ ಸಿಕ್ಕಿತ್ತು. ಗುರೂಜಿಯವರು ಆ ಹಣವನ್ನು ಸಾಧುವಿಗೆ ನೀಡಿದರು. ಅವರು ಹಣ ತೆಗೆದುಕೊಂಡು ಸಾಧು ಹೊರಟು ಹೋದರು. ಮರುದಿನ ಗುರೂಜಿಯವರಿಗೆ ಒಂದು ಲಕ್ಷ ರೂಪಾಯಿ ಸಿಕ್ಕಿತು, ಆಗ ಅವರು ಹೇಳಿದರು, “ನಾವು ದೇವರಿಗೆ ಎಲ್ಲವೂ ನೀಡಿದರೆ, ದೇವರು ನಮಗೆ ಎರಡುಪಟ್ಟು ನೀಡುತ್ತಾರೆ”, ಎಂದರು. – ಶ್ರೀ. ರಾಮಾನಂದ ಪರಬ

೧೭ ಆ. ಮನೆಯ ಹತ್ತಿರದ ಶಾಪಗ್ರಸ್ತ ಸ್ಥಳವನ್ನು ಮೂರ್ತಿ ತಯಾರಿಕೆಗಾಗಿ ತೆಗೆದುಕೊಳ್ಳುವುದು ಮತ್ತು ಅಲ್ಲಿ ಮೂರ್ತಿ ತಯಾರಿಸಲು ಪ್ರಾರಂಭಿಸಿದ ನಂತರ ಆ ಸ್ಥಳ ಶಾಪಮುಕ್ತವಾಗುವುದು ಅಲ್ಲಿ ಯಾವುದೇ ರೀತಿಯ ತೊಂದರೆಯಾಗದಿರುವುದು : ಒಮ್ಮೆ ನಾವು ಅವರಿಗೆ , “ನೀವು ಮೊದಲಿನಿಂದಲೇ ಇದೇ ಸ್ಥಳದಲ್ಲಿ ಮೂರ್ತಿ ತಯಾರಿಸುತ್ತಿದ್ದೀರಾ ?”, ಎಂದು ಕೇಳಿದಾಗ, ‘ಇದರ ಪಕ್ಕದಲ್ಲಿ ನಮ್ಮ ಮನೆ ಇದೆ. ಆರಂಭದಲ್ಲಿ ನಾನು ಮೂರ್ತಿಯನ್ನು ಅಲ್ಲೇ ತಯಾರಿಸುತ್ತಿದ್ದೆ. ಈಗ ನಾವು ಮೂರ್ತಿ ತಯಾರಿಸುತ್ತಿರುವ ಸ್ಥಳವು ಮುಂಚೆ ಶಾಪಗ್ರಸ್ತವಾಗಿತ್ತು. ‘ಇಲ್ಲಿ ಯಾರೇ ಇರಲು ಬಂದರು ಅವರ ವಂಶ ನಾಶವಾಗುತ್ತಿತ್ತು’, ಹೀಗೆ ಅನೇಕರು ಅನುಭವಿಸಿದ್ದರು. ಈ ಜಾಗದ ಮಾಲೀಕನು ನನಗೆ, “ನೀನು ಈ ಜಾಗ ತೆಗೆದುಕೊಳ್ಳುವೆಯಾ ?”, ಎಂದು ಕೇಳಿದಾಗ ನಾನು ಅವರಿಗೆ ‘ಆಯಿತು’ ಎಂದೆನು ಮತ್ತು ನಾನು ಈ ಜಾಗ ತೆಗೆದುಕೊಂಡು ಅಂದಿನಿಂದ ನಾನು ಇಲ್ಲೇ ಮೂರ್ತಿಗಳನ್ನು ತಯಾರಿಸುತ್ತೇನೆ. ಇಲ್ಲಿ  ಮೂರ್ತಿ ತಯಾರಿಸಲು ಆರಂಭಿಸಿದ ನಂತರ ಈ ಸ್ಥಳವು ಶಾಪಮುಕ್ತವಾಗಿದೆ ಮತ್ತು ನನಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಇಲ್ಲಿಯವರೆಗೆ ನಾನು ಈ ಸ್ಥಳದಲ್ಲಿ ಅನೇಕ ರೀತಿಯ ಮೂರ್ತಿಗಳನ್ನು ತಯಾರಿಸಿದ್ದೇನೆ’, ಎಂದರು.

೧೭ ಇ. ಈ ಜಾಗದಲ್ಲಿನ ಒಂದು ವೃಕ್ಷದ ಮೇಲೆ ದೇವಿಯ ಸ್ಥಾನವಿದೆ, ಆ ದೇವಿಯು ಗುರೂಜಿಯವರಿಗೆ ಅನೇಕ ಬಾರಿ ದರ್ಶನ ನೀಡಿದ್ದಾಳೆ ಮತ್ತು ಮೂರ್ತಿಸೇವೆ ಮಾಡುವಾಗ ಋಷಿಮುನಿಗಳ ಆಶ್ರಮದಲ್ಲಿರುವ ಅನುಭವ ಸಾಧಕರಿಗೆ ಬರುತ್ತದೆ : ಈ ಸ್ಥಳದಲ್ಲಿರುವ ವೃಕ್ಷದ ಮೇಲೆ ದೇವಿಯ ಸ್ಥಾನವಿದೆ. ಅಲ್ಲಿ ನನಗೆ ದೇವಿ ಅನೇಕ ಬಾರಿ ದರ್ಶನ ನೀಡಿದ್ದಾಳೆ. ಅದು ಬಕುಲ ಪುಷ್ಪದ ವೃಕ್ಷವಾಗಿದೆ. ಆ ಪುಷ್ಪಗಳಿಗೆ ಬಹಳ ಸುಗಂಧವಿರುತ್ತದೆ. ಆ ಸ್ಥಳ ಬಹಳ ಶಾಂತವಾಗಿದೆ. ‘ಅಲ್ಲಿ ಸೇವೆ ಮಾಡುವಾಗ ನಾವು ಋಷಿಮುನಿಗಳ ಆಶ್ರಮದಲ್ಲಿದ್ದೇವೆ’, ಎಂದು ನಮಗನಿಸುತ್ತಿತ್ತು.

೧೭ಈ. ಸನಾತನ ಸಂಸ್ಥೆಗಾಗಿ ಶ್ರೀ ಸಿದ್ಧಿವಿನಾಯಕನ ಮೂರ್ತಿ ತಯಾರಿಸುವಾಗ ಬಂದಿರುವ ಅನುಭೂತಿ

೧೭ ಈ ೧. ಗುರೂಜಿಯವರಿಗೆ ಶ್ರೀ ಸಿದ್ಧಿವಿನಾಯಕ ಮೂರ್ತಿ ತಯಾರಿಸಲು ಇಬ್ಬರ ಸಹಾಯದ ಅವಶ್ಯಕತೆ ಅನಿಸುವುದು ಮತ್ತು ಅದೇ ಸಮಯಕ್ಕೆ ರಾಮನಾಥಿ ಆಶ್ರಮದಿಂದ ಇಬ್ಬರು ಸಾಧಕರು ಸಹಾಯಕ್ಕಾಗಿ ಅವರ ಬಳಿ ಬರುತ್ತಾರೆಂದು ತಿಳಿದಾಗ ಗುರೂಜಿಯವರ ಭಾವಜಾಗೃತಿ ಆಯಿತು : ‘ನಾವು ಸನಾತನ ಸಂಸ್ಥೆಗಾಗಿ ಶ್ರೀ ಸಿದ್ಧಿವಿನಾಯಕ ಮೂರ್ತಿ ತಯಾರಿಸಿಕೊಳ್ಳುವವರಿದ್ದೆವು. ಕಾರವಾರದ ಶಿಲ್ಪಕಾರ ಶ್ರೀ. ನಂದಾ ಆಚಾರಿ (ಗುರೂಜಿ) ಇವರಿಗೆ ಕಲ್ಲಿನಿಂದ ಶ್ರೀ ಸಿದ್ಧಿವಿನಾಯಕನ ಮೂರ್ತಿ ತಯಾರಿಸುವುದಕ್ಕೆ ಇಬ್ಬರ ಸಹಾಯದ ಅವಶ್ಯಕತೆ ಇತ್ತು. ಅದು ಅವರ ಜೊತೆ ಇರುವ ಸಾಧಕರಾದ ಶ್ರೀ. ಸಾಗರ ಕುರ್ಡೇಕರ ಇವರಿಗೆ, ‘ಇಬ್ಬರ ಮಂದಿಯ ಸಹಾಯ ಸಿಕ್ಕಿದರೆ ಒಳ್ಳೆಯದಾಗುತ್ತದೆ’, ಎಂದರು.

ಅದೇ ಸಮಯಕ್ಕೆ ನಾವು ಅವರ ಸಹಾಯಕ್ಕಾಗಿ ಮತ್ತು ‘ಮೂರ್ತಿ ಹೇಗೆ ತಯಾರಿಸುವುದು ?’ ಇದನ್ನು ಕಲಿಯುವುದಕ್ಕೆ ತಕ್ಷಣ ರಾಮನಾಥಿ ಆಶ್ರಮದಿಂದ ಹೊರಟೆವು. ‘ನಾವಿಬ್ಬರು ಅವರ ಬಳಿ ಬರಲು ಹೊರಟಿದ್ದೇವೆ’, ಇದು ತಿಳಿದ ನಂತರ ಗುರೂಜಿಯವರಿಗೆ ಭಾವಜಾಗೃತಿಯಾಯಿತು ಮತ್ತು “ನನ್ನ ಮನಸ್ಸಿನಲ್ಲಿನ ಎಲ್ಲಾ ವಿಚಾರಗಳು ಶ್ರೀ ಗುರುಗಳಿಗೆ ತಿಳಿಯುತ್ತದೆ. ಅವರು ನನ್ನ ಕರೆಯನ್ನು ತಕ್ಷಣ ಕೇಳಿಸಿಕೊಂಡರು”, ಎಂದರು. ನಿಜವೆಂದರೆ ಅವರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರನ್ನು ಎಂದು ನೋಡಿರಲಿಲ್ಲ. ಆದರೂ ಅವರಿಗೆ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ಬಗ್ಗೆ ಬಹಳ ಭಾವ ಮತ್ತು ಶ್ರದ್ಧೆ ಇದೆ.

೧೭ ಈ ೨. ಒಬ್ಬ ಮೂರ್ತಿಕಾರನ ಹತ್ತಿರವಿದ್ದ ಒಂದು ಶಿಲೆ ಗುರೂಜಿ ಅವರಿಗೆ ಮೂರ್ತಿಗಾಗಿ ಯೋಗ್ಯ ಎನಿಸಿತು, ಆ ಶಿಲೆ ಬಹಳ ಗಟ್ಟಿ ಇರುವುದರಿಂದ ಮೂರ್ತಿಕಾರರು ಅದನ್ನು ಒಡೆಯಲಿಕ್ಕಿದ್ದರು, ಆದರೆ ‘ನನಗೆ ಇದೇ ಶಿಲೆ ಬೇಕು’, ಎಂದು ಹೇಳಿ ಗುರೂಜಿಯವರು ಆ ಶಿಲೆ ತಂದರು : ನಾವು ಗುರೂಜಿಯವರಿಗೆ ಶಿಲೆಯಿಂದ ಶ್ರೀ ಸಿದ್ಧಿವಿನಾಯಕನ ಮೂರ್ತಿ ತಯಾರಿಸಲು ಹೇಳಿದ್ದೆವು. ಗುರೂಜಿಯವರು ಆ ಮೂರ್ತಿಗಾಗಿ ಕಾರವಾರದ ಸದಾಶಿವಗಡದ ಒಬ್ಬ ಮೂರ್ತಿಗಾರರ ಬಳಿ ಶಿಲೆ ತರಲು ಹೋಗಿದ್ದರು. ಅಲ್ಲಿ ಅನೇಕ ರೀತಿಯ ಶಿಲೆಗಳಿದ್ದವು. ಅವರು ಅಲ್ಲಿಯ ಒಂದು ಶಿಲೆಗೆ ಮುಟ್ಟಿದಾಗ ಆ ಶಿಲೆಯಿಂದ ಶ್ರೀ ಸಿದ್ಧಿವಿನಾಯಕನ ಮೂರ್ತಿಗೆ ಯೋಗ್ಯ ಇರುವ ಸ್ಪಂದನಗಳು ಬಂದವು. ಆ ಶಿಲೆ ಗಟ್ಟಿ ಇರುವುದರಿಂದ ಅದರಲ್ಲಿ ಮೂರ್ತಿ ತಯಾರಿಸಲು ಸಾಧ್ಯವಿಲ್ಲವೆಂದು ಮೂರ್ತಿಕಾರರು ಅದನ್ನು ಒಡೆಯುವವರಿದ್ದರು. ಅಲ್ಲೇ ಇರುವ ಇತರ ಶಿಲೆಗಳು ಮೂರ್ತಿಗಾಗಿ ಯೋಗ್ಯವಾಗಿದೆ, ಅದರಲ್ಲಿನ ಯಾವುದಾದರೂ ಒಂದು ಶಿಲೆ ತೆಗೆದುಕೊಳ್ಳಬಹುದು, ಎಂದು ಆ ಮೂರ್ತಿಕಾರರು ಗುರೂಜಿಯವರಿಗೆ ಹೇಳಿದರು; ಆದರೆ ಗುರೂಜಿಯವರು, ‘ನನಗೆ ಇದೇ ಶಿಲೆ ಬೇಕು’, ಎಂದು ಹೇಳಿ ಅವರಿಂದ ಆ  ಶಿಲೆಯನ್ನು ತೆಗೆದುಕೊಂಡು ಬಂದರು.

೧೭ ಈ ೩. ಶಿಲೆಯ ತೂಕ ಹೆಚ್ಚಾಗಿರುವುದರಿಂದ ಆ  ಶಿಲೆಯನ್ನು ಯಾರು  ತೆಗೆದುಕೊಂಡು ಹೋಗಲು ಸಿದ್ದವಿರದಿದ್ದಾಗ ಒಬ್ಬನು ‘ದೇವರ ಸೇವೆ’ ಎಂಬ ಭಾವದಿಂದ ಆ ಶಿಲೆ ಅವನ ‘ಟೆಂಪೋ’ದಿಂದ ಅವರ ಮೂರ್ತಿ ತಯಾರಿಸುವ ಸ್ಥಳಕ್ಕೆ ತಲುಪಿಸುವುದು : ಗುರೂಜಿಯವರಿಗೆ ಬೇಕಾಗಿರುವ ಶಿಲೆ ಸಿಕ್ಕಿತು; ಆದರೆ ಅಲ್ಲಿಂದ ಅದನ್ನು ಮೂರ್ತಿ ತಯಾರಿಸುವ ಸ್ಥಳಕ್ಕೆ ತರಲು ಯಾವುದೇ ‘ಟೆಂಪೋ’ದವರು ಸಿದ್ದರಿರಲಿಲ್ಲ. ಏಕೆಂದರೆ ಆ ಶಿಲೆಯ ತೂಕ ೭೦೦ ಕಿಲೊ ಇತ್ತು. ‘ನಮ್ಮ ವಾಹನ ಹಾಳಾಗುವುದು’, ಎಂದು ಹೇಳಿ ಅನೇಕ ‘ಟೆಂಪೋ’ದವರು ಆ ಶಿಲೆ ತರಲು ನಿರಾಕರಿಸಿದರು. ಆದರೆ ನಂತರ ಗುರೂಜಿಯವರ ಪರಿಚಯವಿರುವ ‘ಟೆಂಪೋ’ದವರೊಬ್ಬರು ಈ ಶಿಲೆ ತಂದುಕೊಡಲು ತಯಾರಾದರು ಮತ್ತು ಅವರು ಯಾವುದೇ ವಿಚಾರ ಮಾಡದೆ ‘ದೇವರ ಸೇವೆಯಾಗಿದೆ’, ಈ ವಿಚಾರದಿಂದ ಆ ಶಿಲೆಯನ್ನು ವಾಹನದಲ್ಲಿಟ್ಟು ಮೂರ್ತಿ ತಯಾರಿಸುವ ಸ್ಥಳಕ್ಕೆ ತಂದುಕೊಟ್ಟರು. – ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ

೧೭ ಈ ೪. ಗುರೂಜಿಯವರ ಶ್ರೀ ಗುರುಗಳು (ಶ್ರೀ ಬಾಬಾ ಮಹಾರಾಜರು) ಅವರಿಗೆ ಕನಸಿನಲ್ಲಿ ಬಂದು ಮೂರ್ತಿಯಲ್ಲಿನ ಸುಧಾರಣೆ ಮಾಡಲು ತಿಳಿಸುತ್ತಿದ್ದರು, ಆಗ ಒಬ್ಬ ಸಂತರು ಕೂಡ ಮೂರ್ತಿಯಲ್ಲಿ ಅವಶ್ಯಕತೆ ಇರುವ ಎಲ್ಲಾ ಸುಧಾರಣೆ ಮಾಡಲು ತಿಳಿಸಿದರು ಮತ್ತು ಇದರಿಂದ ಗುರುತತ್ತ್ವ ಒಂದೆ ಎಂಬ ಅನುಭೂತಿ ಬಂದಿತು : ‘ಶ್ರೀ ಸಿದ್ಧಿವಿನಾಯಕನ ಮೂರ್ತಿ ತಯಾರಿಸುವ ಸೇವೆ ಮಾಡುವಾಗ ಒಂದು ರಾತ್ರಿ  ಗುರೂಜಿಯವರ ಗುರುಗಳು (ಶ್ರೀ ಬಾಬಾ ಮಹಾರಾಜರು) ರಾತ್ರಿ ೧೨.೩೦ ಕ್ಕೆ ಅವರ ಕನಸಿನಲ್ಲಿ ಬಂದು, ‘ನೀನು ಯಾವ ಮೂರ್ತಿ ತಯಾರಿಸುತ್ತಿದ್ದೀಯ, ಆ ಮೂರ್ತಿಯ ಕಿವಿ ಚಿಕ್ಕದು-ದೊಡ್ಡದು ಆಗಿದೆ’, ಎಂದು ಹೇಳಿದರು. ಅವರು ಇತರ ಕೆಲವು ಸುಧಾರಣೆ ಮಾಡಲು ಹೇಳಿದರು. ಗುರೂಜಿಯವರು ತಕ್ಷಣ ಎದ್ದು ದೀಪ ಹಚ್ಚಿದರು, ತಲೆಯ ಹತ್ತಿರ ಇಟ್ಟಿರುವ ಶ್ರೀ ಸಿದ್ಧಿವಿನಾಯಕನ ಸಂಬಂಧಿತ ಚಿತ್ರ ಕೈಗೆ ಎತ್ತಿಕೊಂಡು ನೋಡಿದಾಗ ‘ಶ್ರೀ ಗುರುಗಳಿಗೆ ಅವರು ಹೇಳಿರುವ ಎಲ್ಲಾ ಸುಧಾರಣೆ ಮಾಡಬೇಕಾಗುವುದು’, ಎಂದು ಅವರ ಗಮನಕ್ಕೆ ಬಂದಿತು.

ಶ್ರೀ. ರಾಮಾನಂದ ಪರಬ ಇವರಿಗೆ ಆ ಮೂರ್ತಿಯನ್ನು ನೋಡಿದಾಗ ಅದರಲ್ಲಿ ಕೆಲವು ಸುಧಾರಣೆಗಳನ್ನು ಮಾಡಬೇಕಾಗುವುದು ಎಂದು ಅನಿಸುತ್ತಿತ್ತು. ‘ಆ ಸುಧಾರಣೆ ಮೂರ್ತಿ ತಯಾರಿಸುವಾಗ ಮಾಡಬೇಕೇ ?’, ಎಂದು ನಾನು ಸಂತರಲ್ಲಿ ವಿಚಾರಿಸಿದೆ. ಮರುದಿನ ನಾವು ಗುರೂಜಿಯವರ ಬಳಿ ಸೇವೆಗಾಗಿ ಹೋಗಿರುವಾಗ ಅವರು ನಮಗೆ ಅವರ ಗುರುಗಳು ಕನಸಿನಲ್ಲಿ ಬಂದು ಮೂರ್ತಿಯಲ್ಲಿ ಕೆಲವು ಸುಧಾರಣೆ ಮಾಡಲು ಹೇಳಿರುವ ಬಗ್ಗೆ ಹೇಳಿದರು ಮತ್ತು ಅದೇ ಸಮಯಕ್ಕೆ ಮುಂದಿನಂತೆ ಸಂತರ ಸಂದೇಶ ಬಂದಿತು, “ಮೂರ್ತಿಯಲ್ಲಿ ಯಾವ ಸುಧಾರಣೆ ಮಾಡುವುದು ಅವಶ್ಯಕವಾಗಿದೆ ಆ ಎಲ್ಲ ಸುಧಾರಣೆ ಮಾಡುವುದಿದೆ. ನಾವು ಆ ಸುಧಾರಣೆ ಮಾಡಿದರೆ ಆಗ ಗಣೇಶಮೂರ್ತಿಯಲ್ಲಿನ ತತ್ತ್ವ ಇನ್ನೂ ಹೆಚ್ಚಾಗಲು ಸಾಧ್ಯವಾಗುತ್ತದೆ. ಆಗ ಗುರೂಜಿಯವರು, “ನನ್ನ ಶ್ರೀ ಗುರುಗಳು ಏನು ಹೇಳಿದ್ದಾರೆ, ಅದನ್ನೇ ಈ ಸಂತರು ಹೇಳಿದ್ದಾರೆ. ಗುರುತತ್ತ್ವ ಹೇಗೆ ಒಂದೇ ಆಗಿರುತ್ತದೆ ಅಲ್ಲವೇ ?”, ಎಂದರು.

೧೮. ಗುರೂಜಿಯವರ ಬಗ್ಗೆ ಬಂದ ಅನುಭೂತಿ

೧೮ ಅ. ಗುರೂಜಿಯವರ  ಜಾಗದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ದರ್ಶನವಾಗುವುದು ಮತ್ತು ಅವರ ಪೂರ್ಣಹೆಸರು ‘ವಿವೇಕಾನಂದ’ ಎಂದು ಹೇಳುವುದು : ನಾವು ಮೊದಲ ದಿನ ಅವರ ಜೊತೆ ಸೇವೆಗಾಗಿ ಕುಳಿತಿದ್ದೆವು. ಆ ಸಮಯದಲ್ಲಿ ನನಗೆ ಅವರ ಜಾಗದಲ್ಲಿ ಶ್ರೀ ರಾಮಕೃಷ್ಣ ಪರಮಹಂಸರ ದರ್ಶನವಾಯಿತು. ಈ ವಿಷಯದ ಬಗ್ಗೆ ನಾನು ಸಹಸಾಧಕ ಶ್ರೀ. ರಾಜು ಸುತಾರ ಇವರಿಗೆ ಹೇಳಿದೆ. ಅನಂತರ ೧-೨ ನಿಮಿಷದಲ್ಲಿ ಅವರು ನಮಗೆ, “ನನ್ನ ನಿಜವಾದ ಹೆಸರು ‘ವಿವೇಕಾನಂದ’ ಎಂದಿದೆ. ಎಲ್ಲರೂ ನನ್ನನ್ನು ‘ನಂದಾ’ ಎಂದು ಕರೆಯುತ್ತಾರೆ”, ಎಂದರು.

ಒಮ್ಮೆ ಗುರೂಜಿ ಸಹಜವಾಗಿ ಹೇಳಿದರು, ‘ನನ್ನ ಶರೀರ ಶ್ರೀ ರಾಮಕೃಷ್ಣ ಪರಮಹಂಸರ ಹಾಗೆ ಇದೆ. ಅವರ ಒಂದು ಭುಜ ಚಿಕ್ಕದು ಮತ್ತು ಒಂದು ಭುಜ ದೊಡ್ಡದಾಗಿತ್ತು. ನನ್ನದು ಹಾಗೆ ಇದೆ ಮತ್ತು ಅವರ ಯಾವ ಭುಜ ದೊಡ್ಡದಿತ್ತೋ ನನ್ನದು ಅದೇ ಭುಜ ದೊಡ್ಡದಿದೆ’, ಎಂದರು. ಇದು ಕೇಳಿದ ನಂತರ ನನಗೆ ಮೇಲಿನ ಅಂಶಗಳ ಬಗ್ಗೆ ಅನುಭೂತಿಯ ಅನಾವರಣವಾಯಿತು. – ಶ್ರೀ. ರಾಮಾನಂದ ಪರಬ (ಆಧ್ಯಾತ್ಮಿಕ ಮಟ್ಟ ಶೇ. ೬೮), ಸನಾತನ ಆಶ್ರಮ, ರಾಮನಾಥಿ, ಗೋವಾ (೧.೨.೨೦೨೦)

ಶ್ರೀ ಗುರುಗಳ ಆಶೀರ್ವಾದದಿಂದ ಜನನವಾಗಿರುವುದು : ಶ್ರೀ. ನಂದಾ ಆಚಾರಿ ಗುರೂಜಿಯವರು ಹೇಳಿದರು, ‘ನನ್ನ ತಾಯಿ ಗರ್ಭಿಣಿಯಾಗಿದ್ದಾಗ ಒಂದು ಸಾರಿ ಆಕೆಗೆ ಸಂತ ಗಾಡ್ಗೆ ಬಾಬಾ ಭೇಟಿ ಆಗಿದ್ದರು ಮತ್ತು ಅವರು ಆಕೆಗೆ, “ನಿನಗೆ ಗಂಡು ಮಗು ಆಗುವುದು, ಅವನನ್ನು ಚೆನ್ನಾಗಿ ಪಾಲನೆ ಮಾಡು, ಅವನಿಗೆ ‘ವಿವೇಕಾನಂದ’ ಎಂದು ನಾಮಕರಣ ಮಾಡು. ಅವನು ಇತಿಹಾಸದಲ್ಲಿ ಹೆಸರು ಗಳಿಸುವನು ಎಂದು ಆಶೀರ್ವಾದ ನೀಡಿದ್ದರು. ಅದರ ನಂತರ ಅವರು ನನ್ನ ತಾಯಿಗೆ ತಿನ್ನಲು ಒಂದು ಹಣ್ಣು ನೀಡಿದರು. ನನ್ನ ಜನನ ಗುರುಗಳ ಆಶೀರ್ವಾದದಿಂದ ಆಗಿದೆ. ಅವರು ನನಗೆ ಜನ್ಮ ನೀಡಿದ್ದರಿಂದ ಅವರು ಹೇಗೆ ಹೇಳುವರು ಹಾಗೆ ಮಾಡೋಣ. ದತ್ತ ಸಂಪ್ರದಾಯದ ಪದ್ಮನಾಭಸ್ವಾಮಿ ಇವರು ನನ್ನ ತಾಯಿಯ ಗುರುಗಳಾಗಿದ್ದರು”, ಎಂದರು.

– ಶ್ರೀ. ರಾಮಾನಂದ ಪರಬ ಮತ್ತು ಶ್ರೀ. ರಾಜು ಸುತಾರ (೧೧.೨.೨೦೨೦)