೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿದ ಸಾಧನೆಯಿಂದ ಒಂದೇ ಸಮಯದಲ್ಲಿ ‘ವ್ಯಷ್ಟಿ ಮತ್ತು ಸಮಷ್ಟಿ, ಅಂದರೆ ಏಕದಿಂದ ಅನೇಕಕ್ಕೆ ಹೋಗುವುದು ಮತ್ತು ಅನೇಕದಿಂದ ಏಕಕ್ಕೆ ಬರುವುದು’, ಈ ಎರಡೂ ಪ್ರವಾಸಗಳಿಗೆ ಪೂರ್ಣವಾಗಿ ಪೂರ್ಣತ್ವ ಪ್ರಾಪ್ತವಾಗುವುದು
‘ಸಾಧನೆಯ ಸಿದ್ಧಾಂತವು, ‘ಏಕದಿಂದ ಅನೇಕಕ್ಕೆ ಹೋಗಬೇಕು ಮತ್ತು ಅನೇಕದಿಂದ ಏಕಕ್ಕೆ ಬರಬೇಕು’, ಎಂದು ಹೇಳುತ್ತದೆ. ಸಾಧನೆಯ ಈ ಎರಡೂ ಪ್ರವಾಸಗಳು ಪೂರ್ಣವಾದ ನಂತರ ಪೂರ್ಣತ್ವ ಪ್ರಾಪ್ತವಾಗುತ್ತದೆ, ಅಂದರೆ ‘ಪಿಂಡದಿಂದ ಬ್ರಹ್ಮಾಂಡ’, ಎಂಬ ವ್ಯಾಪಕ ಪ್ರಯಾಣವನ್ನು ಮಾಡುವಾಗ ನಾವು ಸಮಷ್ಟಿಯೊಂದಿಗೆ ಏಕರೂಪವಾಗುತ್ತೇವೆ, ಇದಕ್ಕೇ ‘ಸ್ಥೂಲದಿಂದ ಸೂಕ್ಷ್ಮದೆಡೆಗೆ ಹೋಗುವುದು’, ಎಂದೂ ಹೇಳುತ್ತಾರೆ. ಬ್ರಹ್ಮಾಂಡದಿಂದ ಪಿಂಡದ ಕಡೆಗೆ ಹೋಗುವಾಗ ಆಗುವ ಪ್ರಯಾಣವು ಸೂಕ್ಷ್ಮದಿಂದ ಸ್ಥೂಲದ ಕಡೆಗೆ ಆಗುತ್ತಿರುತ್ತದೆ. ಇದಕ್ಕೆ ‘ಅನೇಕದಿಂದ ಏಕಕ್ಕೆ ಬರುವುದು’, ಎಂದು ಹೇಳುತ್ತಾರೆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಒಂದೇ ಸಮಯದಲ್ಲಿ ‘ವ್ಯಷ್ಟಿ ಮತ್ತು ಸಮಷ್ಟಿಯನ್ನು ಮಾಡಲು ಹೇಳಿದ್ದರಿಂದ ಸಾಧನೆಯ ಎರಡೂ ಪ್ರವಾಸಗಳು ಪೂರ್ಣವಾಗುತ್ತವೆ ಮತ್ತು ಸಾಧಕನಿಗೆ ಪೂರ್ಣತ್ವ ಪ್ರಾಪ್ತವಾಗುತ್ತದೆ’, ಅಂದರೆ ಈಶ್ವರನೊಂದಿಗೆ ಏಕರೂಪನಾಗುತ್ತಾನೆ.
೨. ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ಸಂಪೂರ್ಣ ಸಮರ್ಪಿಸಿಕೊಂಡು ಯಾವುದೇ ಬಂಧನಗಳಿಲ್ಲದೇ ಮಾಡಲು ಸಾಧ್ಯವಾಗಬೇಕೆಂದು ದೇವರು ಒಬ್ಬ ಮಗಳನ್ನು ಕೊಟ್ಟಿದ್ದರಿಂದ ಮಕ್ಕಳು-ಮೊಮ್ಮಕ್ಕಳಲ್ಲಿ ಸಿಲುಕದೇ ಸಾಧನೆಗಾಗಿ ಸರ್ವಸ್ವವನ್ನು ಕೊಡಲು ಸಾಧ್ಯವಾಗುವುದು
ನನ್ನಲ್ಲಿ ಜನ್ಮದಿಂದಲೇ ಸಮಷ್ಟಿ ಸಾಧನೆಯ ಬೀಜವಿದೆ. ನನಗೆ ಇತರರಿಗೆ ಆನಂದ ಕೊಡಲು ಹೆಚ್ಚು ಇಷ್ಟವಾಗುತ್ತದೆ. ಸಾಧನೆಯಲ್ಲಿ ಬರುವ ಮೊದಲು ನನಗೆ ಯಾವಾಗಲೂ, ರಾಷ್ಟ್ರ ಮತ್ತು ಧರ್ಮದ ಕಾರ್ಯವನ್ನು ಸಂಪೂರ್ಣ ಸಮರ್ಪಿಸಿಕೊಂಡು ಮುಕ್ತವಾಗಿ ಮಾಡಲು ಸಾಧ್ಯವಾಗಬೇಕೆಂದು ದೇವರು ನನಗೆ ಮಗಳನ್ನು ಕೊಟ್ಟಿದ್ದಾನೆ ಎಂದು ಅನಿಸುತ್ತಿತ್ತು. ಒಂದು ಸಲ ಅವಳ ಮದುವೆಯಾದರೆ, ನನಗೆ ಯಾವುದೇ ಕರ್ತವ್ಯಗಳು ಉಳಿಯುವುದಿಲ್ಲ. ಅವಳ ಮಕ್ಕಳ ಜವಾಬ್ದಾರಿಯು ನನ್ನ ಕಡೆಗೆ ಇರದಿರುವುದರಿಂದ ನಾನು ಶ್ರಮಪಟ್ಟು ಸಮಾಜಕ್ಕಾಗಿ ಸಮಯ ಕೊಡುವುದು ಅಥವಾ ಯಾವುದಾದರೊಂದು ಸಂಸ್ಥೆಯಲ್ಲಿ ಹೋಗಿ ಸಮಾಜಸೇವೆಯನ್ನು ಮಾಡಬಹುದು, ಎಂದೆನಿಸುತ್ತಿತ್ತು. ನನಗೆ ಗಂಡುಮಗು ಬೇಕೋ ಅಥವಾ ಹೆಣ್ಣುಮಗು ಬೇಕೋ ಎನ್ನುವುದಕ್ಕಿಂತ ದೇವರು ನನ್ನ ಅಂತರದಲ್ಲಿ ರಾಷ್ಟ್ರ ಮತ್ತು ಧರ್ಮದ ಕಾರ್ಯಕ್ಕಾಗಿ ಸಮಾಜಸೇವೆಯನ್ನು ಮಾಡುವ ಯಾವ ವಿಚಾರವನ್ನು ಜಾಗೃತಗೊಳಿಸಿದ್ದನೋ, ಅದು ಬಹಳ ಮಹತ್ವದ್ದಾಗಿತ್ತು. ಈಶ್ವರನು ನನ್ನ ವಿಚಾರ ಮತ್ತು ನನ್ನ ದೈವೀಕಾರ್ಯವನ್ನು ಮಾಡುವ ಕ್ಷಮತೆಯನ್ನು ತಿಳಿದುಕೊಂಡಿದ್ದನು. ಆದುದರಿಂದಲೇ ಅವನು ನನ್ನನ್ನು ಸಾಧನೆಯಲ್ಲಿ ತಂದನು. ಒಮ್ಮೆ ನಾವು ದೇವರ ಅಧೀನವಾದರೆ, ನಮ್ಮ ಒಂದೊಂದು ವಿಚಾರವೂ ಅವನದ್ದೇ ಆಗುತ್ತದೆ. ಈ ದೈವೀ ಏಣಿಯಿಂದ ನನಗೆ ಇಂದು ಗುರುಗಳ ಚರಣಗಳ ವರೆಗೆ ಬರಲು ಸಾಧ್ಯವಾಯಿತು.
೨೦-೨೫ ವರ್ಷಗಳ ಹಿಂದಿನ ಕಾಲವು ಬೇರೆಯಾಗಿತ್ತು. ಆಗ ‘ಮನೆ ಮತ್ತು ಸಂಸಾರ’ ಇಷ್ಟೇ ಗೊತ್ತಿತ್ತು. ನನ್ನ ಸಾಧನೆಯ ಜೀವನವು ಯಾವಾಗ ಪ್ರಾರಂಭವಾಯಿತೋ, ಆಗ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ತ್ಯಾಗದ ಮಹತ್ವವನ್ನು ನಮ್ಮ ಮನಸ್ಸಿನ ಮೇಲೆ ಬಿಂಬಿಸಿದರು ಮತ್ತು ನಮ್ಮೆಲ್ಲ ಸಾಧಕರಿಂದ ತನು, ಮನ ಮತ್ತು ಧನ ಇವುಗಳನ್ನು ಯಾವಾಗ ಅರ್ಪಣೆ ಮಾಡಿಸಿಕೊಂಡರೋ, ಅದು ಕೂಡ ನಮಗೆ ತಿಳಿಯಲೇ ಇಲ್ಲ. ‘ಗುರುಗಳು ತಮ್ಮ ಶಿಷ್ಯನನ್ನು ಅವನಿಗೆ ತಿಳಿಯದೇ ಮುಂದೆ ಕರೆದುಕೊಂಡು ಹೋಗುತ್ತಾರೆ’, ಇದು ಅದರ ಬಗೆಗಿನ ಒಂದು ಅನುಭೂತಿಯೇ ಆಗಿದೆ. ಸಾಧಕನು ಒಮ್ಮೆ ಗುರುಗಳ ಅಧೀನನಾದರೆ, ಅವನಿಗೆ ಆಯುಷ್ಯದಲ್ಲಿ (ಜೀವನದಲ್ಲಿ) ಏನೂ ಮಾಡಬೇಕಾಗುವುದಿಲ್ಲ. ಅವನ ಆಯುಷ್ಯವೇ ಗುರುಮಯವಾಗುತ್ತದೆ. ಅವನಿಗೆ ಆಯುಷ್ಯದಲ್ಲಿ ಉದ್ದೇಶಪೂರ್ವಕವಾಗಿ ಏನೂ ಮಾಡಬೇಕಾಗುವುದಿಲ್ಲ. ಎಲ್ಲವೂ ಅವನಿಗೆ ತಿಳಿಯದೇ ತಾನಾಗಿ ಆಗುತ್ತಿರುತ್ತದೆ.
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೪.೨೦೨೦)