ಆರ್ಥಿಕ ಹಿಂಜರಿಕೆಯಿರುವುದರಿಂದ ಚತುಷ್ಚಕ್ರ ವಾಹನ, ಫ್ರಿಜ್ ಖರೀದಿಸ ಬೇಡಿ ! – ಅಮೇಝಾನ ಸಂಸ್ಥಾಪಕ ಜೆಫ್ ಬೆಜೋಸ್ ಇವರ ಎಚ್ಚರಿಕೆ

ನ್ಯೂಯಾರ್ಕ – ಆರ್ಥಿಕ ಹಿಂಜರಿಕೆ ಬರುತ್ತಿದೆ. ಚತುಷ್ಚಕ್ರ, ಫ್ರಿಜ್ ಖರೀದಿ ಬೇಡಿ, ಎಂದು ಅಮೇಝಾನ ಸಂಸ್ಥಾಪಕ ಜೆಫ್ ಬೆಜೋಸ ಇವರು ಸೂಚಿಸಿದ್ದಾರೆ. ಅಬ್ಜಾಧೀಶ ಜೆಫ್ ಬೆಜೋಸ ಇವರು ಗ್ರಾಹಕರಿಗೆ ಅವರ ಹಣವನ್ನು ಸುರಕ್ಷಿತವಾಗಿಡುವ ಮತ್ತು ರಜೆಯ ಕಾಲದಲ್ಲಿ ಅನಾವಶ್ಯಕ ವೆಚ್ಚವನ್ನು ದೂರಗೊಳಿಸುವ ಸಲಹೆಯನ್ನು ನೀಡಿದ್ದಾರೆ. ಅಮೇರಿಕಾದ ವಾರ್ತಾವಾಹಿನಿ ‘ಸಿ.ಎನ್.ಎನ್.’ಗೆ ನೀಡಿರುವ ಸಂದರ್ಶನದಲ್ಲಿ ಬೆಜೋಸ ಇವರು, ಮುಂಬರುವ ಆರ್ಥಿಕ ಹಿಂಜರಿಕೆಯ ಸ್ಥಿತಿಯನ್ನು ಗಮನಿಸುತ್ತಾ, ಅಮೇರಿಕನ್ ಕುಟುಂಬದವರು ಚತುಷ್ಚಕ್ರ, ಫ್ರಿಜಗಳಂತಹ ದೊಡ್ಡ ಮೊತ್ತಗಳ ವಸ್ತುಗಳನ್ನು ಖರೀದಿಸುವುದನ್ನು ಆದಷ್ಟು ಕಡಿಮೆ ಮಾಡಬೇಕು. ‘ಒಂದು ವೇಳೆ ನೀವು ಅವಿವಾಹಿತರಾಗಿದ್ದರೆ ಮತ್ತು ನೀವು ದೊಡ್ಡ ‘ಟಿವಿ ಸ್ಕ್ರೀನ’ ಖರೀದಿಸುವ ವಿಚಾರ ಮಾಡುತ್ತಿದ್ದರೆ, ಈಗ ಅದನ್ನು ನಿಲ್ಲಿಸಿರಿ ಮತ್ತು ಆ ಹಣವನ್ನು ತಮ್ಮ ಬಳಿ ಇಟ್ಟುಕೊಳ್ಳಿರಿ ಮತ್ತು ಏನಾಗುತ್ತದೆಯೆಂದು ನೋಡಿರಿ’, ಎಂದೂ ಅವರು ಹೇಳಿದ್ದಾರೆ.

ಬೆಜೋಸ ಇವರು ತಮ್ಮ ಮಾತನ್ನು ಮುಂದುವರಿಸುತ್ತಾ, “ನಾನು ನನ್ನ ೧೨೪ ಅಬ್ಜ ಡಾಲರ್‌ನ ಒಟ್ಟು ಸಂಪತ್ತಿನಲ್ಲಿ ದೊಡ್ಡ ಪಾಲನ್ನು ದಾನ ಮಾಡುವವನಿದ್ದೇನೆ. ನನ್ನ ಸಂಪತ್ತಿನ ಕೆಲವು ಭಾಗ ಹವಾಮಾನ ಬದಲಾವಣೆಯೊಂದಿಗೆ ಹೋರಾಡಲು ನಾನು ದಾನ ಮಾಡುವವನಿದ್ದೇನೆ. ಹಾಗೆಯೇ ಅದರ ಕೆಲವು ಪಾಲನ್ನು ಮಾನವೀಯತೆಯನ್ನು ಒಂದುಗೂಡಿಸಲು ಪ್ರಯತ್ನಿಸುತ್ತಿರುವ ಜನರನ್ನು ಬೆಂಬಲಿಸಲು ವೆಚ್ಚ ಮಾಡುವವನಿದ್ದೇನೆ’. ಎಂದು ಹೇಳಿದರು.