ವಿದೇಶಾಂಗ ಸಚಿವಾಲಯದಲ್ಲಿನ ವಾಹನ ಚಾಲಕನ ಬಂಧನ : ‘ಹನಿಟ್ರ್ಯಾಪ’ನಲ್ಲಿ ಸಿಲುಕಿರುವ ಅನುಮಾನ

ಪಾಕಿಸ್ತಾನಕ್ಕೆ ಗೌಪ್ಯ ಮಾಹಿತಿ ನೀಡಿದ ಪ್ರಕರಣ

(ಹನಿಟ್ರಾಪ ಎಂದರೆ ಪುರುಷರನ್ನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಅವರಿಂದ ಬೇಕಿರುವುದನ್ನು ಮಾಡಿಸಿಕೊಳ್ಳುವುದು. ಬಹಳಷ್ಟು ಸಾರಿ ರಾಷ್ಟ್ರ ವಿರೋಧಿ ಚಟುವಟಿಕೆಗಾಗಿ ಇದರ ಉಪಯೋಗ ಮಾಡಲಾಗುತ್ತದೆ.)

ನವ ದೆಹಲಿ – ಪಾಕಿಸ್ತಾನದಲ್ಲಿನ ಒಬ್ಬ ವ್ಯಕ್ತಿಗೆ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಪೂರೈಸಿರುವ ಪ್ರಕರಣದಲ್ಲಿ ವಿದೇಶಾಂಗ ಸಚಿವಾಲಯದಲ್ಲಿನ ವಾಹನ ಚಾಲಕನನ್ನು ದೆಹಲಿ ಪೊಲೀಸರು ಇಲ್ಲಿನ ಜವಾಹರಲಾಲ ನೆಹರು ಭವನದಿಂದ ಇತ್ತಿಚೆಗೆ ಬಂದಿಸಿದ್ದಾರೆ. ಯಾವ ವ್ಯಕ್ತಿಗೆ ಅವನು ಮಾಹಿತಿ ಪೂರೈಸುತ್ತಿದ್ದನು, ಆ ವ್ಯಕ್ತಿ ಅವನಿಗೆ ಪೂನಂ ಶರ್ಮ ಅಥವಾ ಪೂಜಾ ಎಂದು ಹೇಳಿ ಮೋಸ ಮಾಡುತ್ತಿದ್ದನು. ಇದರ ಹಿಂದೆ ಪಾಕಿಸ್ತಾನದ ‘ಐ.ಎಸ್.ಐ.’ ಈ ಬೆಹುಗಾರಿಕೆ ಸಂಸ್ಥೆಯ ಕೈವಾಡವಿರುವುದು ತಿಳಿದು ಬಂದಿದೆ.

(ಸೌಜನ್ಯ : Zee News)

ದೆಹಲಿ ಪೋಲಿಸರ ಅಪರಾಧ ಶಾಖೆಯ ಸೂತ್ರಗಳ ಪ್ರಕಾರ, ಈ ವಾಹನ ಚಾಲಕನು ‘ಹನಿಟ್ರಾಪ್’ನಲ್ಲಿ ಸಿಲುಕಿದ್ದನು. ವಾಹನ ಚಾಲಕ ಹಣದ ಬದಲು ಪಾಕಿಸ್ತಾನದಲ್ಲಿನ ಒಬ್ಬ ಅಧಿಕಾರಿಗೆ ರಾಷ್ಟ್ರೀಯ ಭದ್ರತೆಯ ಸಂಬಂಧಿತ ರಹಸ್ಯ (ಕಾಗದಪತ್ರಗಳನ್ನು) ದಾಖಲೆ ಕಳುಹಿಸುತ್ತಿದ್ದನು, ಎಂದು ಹೇಳಿದರು.