ವಿಶ್ವಸಂಸ್ಥೆಯು ಕರಡು ಪರಿಸರ ಒಪ್ಪಂದದಲ್ಲಿ ಭಾರತದ ಪ್ರಸ್ತಾವನೆಯನ್ನು ಸಮಾವೇಶಗೊಳಿಸಿಲ್ಲ !

ನವದೆಹಲಿ – ಕರಡು ಪರಿಸರ ಒಪ್ಪಂದದಲ್ಲಿ ಭಾರತದ ಪ್ರಸ್ತಾವನೆಯನ್ನು ಸಮಾವೇಶಗೊಳಿಸಿಲ್ಲ. ಎಲ್ಲ ಜೈವಿಕ ಇಂಧನ ಹಂತಹಂತವಾಗಿ ಕಡಿಮೆಗೊಳಿಸುವ ವಿಷಯದಲ್ಲಿ ಭಾರತವು ಈ ಪ್ರಸ್ತಾವನೆಯಲ್ಲಿ ಮಂಡಿಸಿತ್ತು. ಭಾರತದ ಈ ಪ್ರಸ್ತಾವನೆಗೆ ಯುರೋಪ ಮಹಾಸಂಘ ಮತ್ತು ಅನೇಕ ದೇಶಗಳು ಬೆಂಬಲ ನೀಡಿತ್ತು. ಈ ಕರಡಿನಲ್ಲಿ ಭಾರತದ ಪ್ರಸ್ತಾವನೆಯ ಸಮಾವೇಶಗೊಳಿಸದೇ ಇರುವ ಬಗ್ಗೆ ಕೇಂದ್ರ ಪರಿಸರ ಸಚಿವಾಲಯದ ವಕ್ತಾರರು, ಈ ಕರಾರಿನ ವಿಷಯದಲ್ಲಿ ಇಂದಿಗೂ ಚರ್ಚೆ ಮತ್ತು ವಿಚಾರ ವಿನಿಮಯ ಮುಂದುವರೆದಿರುವುದರಿಂದ ಈ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಜಾಗತಿಕ ಪರಿಸರ ಹಿತಕ್ಕಾಗಿ ಕೇವಲ ಕಲ್ಲಿದ್ದಲು ಅಷ್ಟೇ ಅಲ್ಲ, ಎಲ್ಲ ರೀತಿಯ ಜೈವಿಕ ಇಂಧನಗಳ ಉಪಯೋಗವನ್ನು ಹಂತಹಂತವಾಗಿ ಕಡಿಮೆಗೊಳಿಸುವ ಆವಶ್ಯಕತೆಯಿದ್ದು, ಈ ಪ್ರಸ್ತಾವನೆಯ ಕರಾರಿಗೆ ಸಂಬಂಧಿಸಿದಂತೆ ಚರ್ಚಿಸದೇ ಪೂರ್ಣಗೊಳ್ಳುವುದಿಲ್ಲವೆಂದು ಭಾರತವು ಅಭಿಪ್ರಾಯವನ್ನು ಮಂಡಿಸಿತ್ತು. ‘ಭಾರತದ ಈ ಪ್ರಸ್ತಾವನೆಯನ್ನು ಚರ್ಚೆಗಾಗಿ ಮಂಡಿಸಿದಲ್ಲಿ ನಾವು ಅದಕ್ಕೆ ಬೆಂಬಲಿಸುತ್ತೇವೆ’, ಎಂದು ಯುರೋಪ ಮಹಾಸಂಘದ ಉಪಾಧ್ಯಕ್ಷ ಫ್ರಾನ್ಸ ಟಿಮರಮಾನ್ಸ ಹೇಳಿದ್ದರು. ಇತರೆ ಕೆಲವು ದೇಶಗಳೂ ಭಾರತದ ಈ ಪ್ರಸ್ತಾವನೆಯನ್ನು ಬೆಂಬಲಿಸಿದ್ದವು.