ಲಕ್ಷ್ಮಣಪುರಿ(ಉತ್ತರಪ್ರದೇಶ) ಯಲ್ಲಿ ‘ಲವ್ ಜಿಹಾದ’
ಲಕ್ಷ್ಮಣಪುರಿ(ಉತ್ತರಪ್ರದೇಶ) – ಇಲ್ಲಿಯ ದುಬಗ್ಗಾ ಪ್ರದೇಶದಲ್ಲಿ ಇಸ್ಲಾಂ ಸ್ವೀಕರಿಸಲು ನಿರಾಕರಿಸಿದಳೆಂದು ಮುಸಲ್ಮಾನ ಯುವಕನು ಹಿಂದೂ ಯುವತಿಯನ್ನು ೪ನೇ ಮಹಡಿಯ ಕಟ್ಟಡದ ಟೆರೇಸ ಮೇಲಿನಿಂದ ಕೆಳಗೆ ದೂಡಿದುದರಿಂದ ಅವಳು ಮೃತಪಟ್ಟಳು. ನಿಧಿ ಗುಪ್ತಾ(೧೯ ವರ್ಷ) ಎಂದು ಈ ಯುವತಿಯ ಹೆಸರಾಗಿದ್ದು, ಮುಸಲ್ಮಾನ ಯುವಕನ ಹೆಸರು ಸುಫಿಯಾನ ಎಂದಾಗಿದೆ. ಇವರಿಬ್ಬರೂ ನೆರೆಹೊರೆಯವರಾಗಿದ್ದರು.
Sufiyan pushes girlfriend #NidhiGupta to death from fourth floor, case of “love jihad” suspected in #Lucknow#UttarPradesh
via @eOrganiser https://t.co/yE1vIAVdr4
— prafulla ketkar 🇮🇳 (@prafullaketkar) November 16, 2022
೧. ಪೊಲೀಸರು ನೀಡಿರುವ ಮಾಹಿತಿಯನುಸಾರ ಸುಫಿಯಾನ ನಿಧಿಯನ್ನು ಪ್ರೀತಿಯ ಜಾಲದಲ್ಲಿ ಸೆಳೆದುಕೊಂಡಿದ್ದನು. ಅವನು ಅವಳಿಗೆ ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಡ ಹಾಕುತ್ತಿದ್ದನು. ಅವನು ನಿಧಿಗೆ ಸಂಚಾರವಾಣಿಯನ್ನು(ಮೊಬೈಲ) ಕೊಟ್ಟಿದ್ದನು. ಈ ವಿಷಯ ನಿಧಿಯ ಕುಟುಂಬದವರಿಗೆ ತಿಳಿದಾಗ ಅವರು ಸುಫಿಯಾನ ಇವನ ಮನೆಗೆ ಹೋಗಿ ವಿಚಾರಿಸಿದಾಗ ಅವರಲ್ಲಿ ಬಹಳ ದೊಡ್ಡ ಗಲಾಟೆ ಆಯಿತು. ಆಗ ನಿಧಿ ಟೆರೇಸ ಮೇಲೆ ಹೋದಳು. ಸುಫಿಯಾನನು ಅವಳ ಹಿಂದೆಯೇ ಟೆರೇಸ ಮೇಲೆ ಹೋದನು. ಸುಫಿಯಾನನು ನಿಧಿಯನ್ನು ಕಟ್ಟಡದ ಮೇಲಿನಿಂದ ಕೆಳಗೆ ದೂಡಿದನು. ತದನಂತರ ಸುಫಿಯಾನ ಮತ್ತು ಅವನ ಕುಟುಂಬದವರು ಪರಾರಿಯಾಗಿದ್ದಾರೆ. ಪೊಲೀಸರು ಸುಫಿಯಾನ ಹಾಗೂ ಅವನ ಕುಟುಂಬದವರ ಮೇಲೆ ದೂರು ದಾಖಲಿಸಿದ್ದಾರೆ. ಈ ಪ್ರಕರಣದಿಂದ ಹಿಂದುತ್ವನಿಷ್ಠರು ಆಕ್ರೋಶಗೊಂಡಿದ್ದಾರೆ.
೨. ನಿಧಿಯ ತಾಯಿ ‘ಸುಫಿಯಾನ ನಮ್ಮೊಂದಿಗೆ ಜಗಳವಾಡುತ್ತಿದ್ದನು ಮತ್ತು ಕೊಲ್ಲುವ ಬೆದರಿಕೆಯನ್ನು ಕೂಡ ನೀಡುತ್ತಿದ್ದನು’, ಎಂದು ಹೇಳಿದರು. ಈ ಪ್ರಕರಣದಿಂದ ಎರಡೂ ಕುಟುಂಬದವರ ನಡುವೆ ಈ ಹಿಂದೆಯೂ ಜಗಳ ನಡೆದಿತ್ತು. ಆಗ ಆ ಪ್ರಕರಣವು ಪೊಲೀಸ ಠಾಣೆಗೆ ತಲುಪಿತ್ತು. ಆಗ ಪೊಲೀಸರು ಪ್ರಕರಣವನ್ನು ಶಾಂತಗೊಳಿಸಿದ್ದರು. ಆ ಸಮಯದಲ್ಲಿ ಸುಫಿಯಾನನ ಮೇಲೆ ಯಾವುದೇ ಕ್ರಮವನ್ನು ಕೈಕೊಂಡಿರಲಿಲ್ಲ. (ಸುಫಿಯಾನ ಮೇಲೆ ಕ್ರಮ ಜರುಗಿಸದಿದ್ದ ಪೊಲೀಸರ ಮೇಲೆ ಈಗ ಕ್ರಮ ಕೈಕೊಳ್ಳಬೇಕು. – ಸಂಪಾದಕರು)
ಸಂಪಾದಕೀಯ ನಿಲುವುದೇಶದಲ್ಲಿ ಹೆಚ್ಚುತ್ತಿರುವ ‘ಲವ್ ಜಿಹಾದ್’ ಪ್ರಕರಣವನ್ನು ನೋಡುತ್ತಾ ಹಿಂದೂ ಯುವತಿಯರ ರಕ್ಷಣೆಗಾಗಿ ಕೇಂದ್ರ ಸರಕಾರವು ಶೀಘ್ರದಲ್ಲಿ ಕ್ರಮ ಕೈಕೊಳ್ಳುವುದು ಆವಶ್ಯಕವಾಗಿದೆ ಎಂದು ಹಿಂದೂಗಳಿಗೆ ಅನಿಸುತ್ತದೆ. |