ತಿಥಿ : ಮಾರ್ಗಶಿರ ಶುಕ್ಲ ಪಾಡ್ಯ
ಮಹತ್ವ : ಕುಲದೇವ, ಕುಲದೇವಿ, ಇಷ್ಟದೇವತೆ ಮುಂತಾದವರನ್ನು ಹೊರತು ಪಡಿಸಿ ಇತರ ದೇವ-ದೇವತೆಗಳನ್ನು ವರ್ಷದಲ್ಲಿ ಒಮ್ಮೆಯಾದರೂ ಪೂಜಿಸಿ ಅವರಿಗೆ ನೈವೇದ್ಯವನ್ನು ಅರ್ಪಿಸುವುದು ಆವಶ್ಯಕವಾಗಿರುತ್ತದೆ. ಅದನ್ನು ಈ ದಿನದಂದು ಮಾಡುತ್ತಾರೆ.
ಪೂಜೆ : ತಮ್ಮ ಕುಲದೇವತೆ ಹಾಗೂ ಇಷ್ಟದೇವತೆಯ ಜೊತೆಯಲ್ಲಿ ಸ್ಥಾನದೇವತೆ, ವಾಸ್ತುದೇವತೆ, ಗ್ರಾಮದೇವತೆ ಮತ್ತು ಊರಿನಲ್ಲಿನ ಇತರ ಮುಖ್ಯ ಹಾಗೂ ಉಪದೇವ-ದೇವತೆಗಳಿಗೆ, ಹಾಗೆಯೇ ಮಹಾಪುರುಷ, ಬೇತಾಳ ಇತ್ಯಾದಿ ಕನಿಷ್ಟ ದೇವತೆಗಳನ್ನು ಪೂಜಿಸಿ ಅವರಿಗೆ ಅವರ ಗೌರವವನ್ನು ತಲುಪಿಸುವ ಕರ್ತವ್ಯವನ್ನು ಈ ದಿನ ಮಾಡುತ್ತಾರೆ. ದೇವದೀಪಾವಳಿಯಂದು ಪಕ್ವಾನ್ನಗಳ ಮಹಾನೈವೇದ್ಯವನ್ನು ಮಾಡುತ್ತಾರೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ)