ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದಿಂದ ತುಮಕೂರಿನಲ್ಲಿ ಸಾಮಾಜಿಕ ಮಾಧ್ಯಮಗಳ ತರಬೇತಿ ಶಿಬಿರ

ಹಿಂದೂ ಜನಜಾಗೃತಿ ಸಮಿತಿಯಿಂದ ಮಾರ್ಗದರ್ಶನ

ಶ್ರೀ. ಮೋಹನ ಗೌಡ

ತುಮಕೂರು :  ನವೆಂಬರ್ ೧೦ ಬುಧವಾರದಂದು ವಿಶ್ವ ಹಿಂದೂ ಪರಿಷತ್, ಬಜರಂಗಳದ ಕಾರ್ಯಕರ್ತರಿಗಾಗಿ ಸಾಮಾಜಿಕ ಮಾಧ್ಯಮಗಳ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬಜರಂಗದಳದ ತುಮಕೂರು ಜಿಲ್ಲಾ ಸಂಯೋಜಕರಾದ ಶ್ರೀ. ಮಂಜು ಭಾರ್ಗವ, ವಿಶ್ವ ಹಿಂದೂ ಪರಿಷತ್ತಿನ ತುಮಕೂರು ಜಿಲ್ಲಾ ಕಾರ್ಯದರ್ಶಿ ಶ್ರೀ. ಉದಯ ಕುಮಾರ್, ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ, ಸಮಿತಿಯ ಶ್ರೀ. ಸುಜನ ಇವರು ದೀಪಪ್ರಜ್ವಲನೆ ಹಾಗೂ ಪ್ರಭು ಶ್ರೀ ರಾಮ, ಭಾರತಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಇವರು ‘ಧರ್ಮಜಾಗೃತಿಯ ಕಾರ್ಯದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ಪ್ರಭಾವಿಯಾಗಿ ಉಪಯೋಗಿಸುವುದು ಹೇಗೆ ?’ ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಿದರೆ ಶ್ರೀ. ಸುಜನ ಇವರು ವಿವಿಧ ಸಾಮಾಜಿಕ ಮಧ್ಯಮಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು. ಈ ಶಿಬಿರಕ್ಕಾಗಿ ತುಮಕೂರು, ಗುಬ್ಬಿ, ಪಾವಗಡ, ತಿಪಟೂರು ಹೀಗೆ ಇತರ ಸ್ಥಳಗಳಿಂದ   ೩೦ ಕ್ಕೂ ಹೆಚ್ಚು ಕಾರ್ಯಕರ್ತರು ಉಪಸ್ಥಿತರಿದ್ದರು.