ಶ್ರದ್ಧೆ ಮತ್ತು ವಿಶ್ವಾಸ ಇವುಗಳಲ್ಲಿ ಭೇದ (ವ್ಯತ್ಯಾಸ) ವಿದೆ. ವಿಶ್ವಾಸವು ಕುರುಡಾಗಿರಬಹುದು; ಆದರೆ ಶ್ರದ್ಧೆ ಕುರುಡಾಗಿರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಶ್ರದ್ಧೆ ಅನುಭೂತಿಗಳನ್ನು ಆಧರಿಸಿರುತ್ತದೆ. ಧರ್ಮವೆಂದರೇನೆ ಈಶ್ವರ, ಇದರ ಮೇಲಿನ ಶ್ರದ್ಧೆಯ ಬಲದ ಮೇಲೆಯೇ ಲಕ್ಷಾ ವಧಿ ಹಿಂದೂಗಳು ಅಧ್ಯಾತ್ಮದಲ್ಲಿ ಪ್ರಗತಿ ಮಾಡಿಕೊಂಡು ಈಶ್ವರ ಪ್ರಾಪ್ತಿಯನ್ನು ಮಾಡಿಕೊಂಡಿದ್ದಾರೆ ಮತ್ತು ಈಗಲೂ ಮಾಡಿಕೊಳ್ಳುತ್ತಿದ್ದಾರೆ. ‘ಸತ್ಯವನ್ನು ಧರಿಸುವ ಕ್ಷಮತೆ ಎಂದರೆ ‘ಶ್ರದ್ಧೆ’ ಹೀಗೂ ಶ್ರದ್ಧೆಯ ಒಂದು ವ್ಯಾಖ್ಯೆಯನ್ನು ಮಾಡಬಹುದು. ಪ್ರಸ್ತುತ ಲೇಖನದಲ್ಲಿ ವಿವಿಧ ದೇಶಗಳಲ್ಲಿನ ಮೂಢನಂಬಿಕೆಗಳ ಕೆಲವು ಉದಾಹರಣೆಗಳನ್ನು ನೀಡಲಾಗಿದೆ. ಈ ಲೇಖನವನ್ನು ‘ಶ್ರೀಮತ್ ಪೂರ್ಣಾನಂದಾಯ ನಮಃ’ ಈ ಮಾಸಿಕದಿಂದ ನಮ್ಮ ವಾಚಕರಿಗಾಗಿ ಸಾಭಾರ ಪ್ರಕಾಶಿಸುತ್ತಿದ್ದೇವೆ.
೧. ತುರ್ಕಸ್ತಾನ್
‘ರಾತ್ರಿ ಹೊತ್ತಿನಲ್ಲಿ ‘ಚ್ಯುಯಿಂಗ್ ಗಮ್’ ತಿನ್ನುವುದೆಂದರೆ ಶವದ ಮಾಂಸ ತಿಂದಂತೆ’, ಎಂದು ತುರ್ಕಿ ಜನರಿಗೆ ಅನಿಸುತ್ತದೆ.
೨. ಸ್ಪೇನ್
ಅ. ಹೊಸವರ್ಷದ ಹಿಂದಿನ ದಿನ ರಾತ್ರಿ ಗಡಿಯಾರದ ಎರಡೂ ಮುಳ್ಳುಗಳು ೧೨ ರ ಮೇಲೆ ಬಂದಾಗ (ರಾತ್ರಿ ೧೨ ಗಂಟೆಗೆ) ಸ್ಪೇನನ ಮೂಢನಂಬಿಕೆಯ ಜನರು ಶುಭೇಚ್ಛೆಗಳನ್ನು ನೀಡಲು ಹನ್ನೆರಡು ದ್ರಾಕ್ಷಿಗಳನ್ನು ತಿನ್ನುತ್ತಾರೆ.
ಆ. ಹೊಸ ವರ್ಷದಲ್ಲಿ ತಮ್ಮ ಮೇಲೆ ಗ್ರಹಗಳ ಕೃಪೆಯಾಗಬೇಕೆಂದು ಕೆಲವು ಸ್ಪ್ಯಾನಿಶ್ ಜನರು ಬಕೇಟ್ ತುಂಬ ನೀರನ್ನು ಕಿಟಕಿಯ ಹೊರಗೆ ಚೆಲ್ಲುತ್ತಾರೆ.
೩. ಐರ್ಲ್ಯಾಂಡ್
ಚಳಿಗಾಲದ ಕೊನೆಯಲ್ಲಿ ಬಾಗಿಲ ಎದುರಿಗೆ ಹಾಕುವ ಡೋರ್ ಮ್ಯಾಟ್‌ಅನ್ನು ಹೆಣೆದರೆ (ತಯಾರಿಸಿದರೆ), ‘ಚಳಿಗಾಲದ ಅವಧಿ ಹೆಚ್ಚಾಗುತ್ತದೆ ಎಂಬ ಮೂಢನಂಬಿಕೆ ಐರ್ಲ್ಯಾಂಡ್‌ನಲ್ಲಿದೆ.
೪. ರಷ್ಯಾ
ಅ. ರಷ್ಯಾದಲ್ಲಿ ಯಾವುದಾದರೊಂದು ಪಕ್ಷಿಯು ಶರೀರದ ಮೇಲೆ, ‘ಕಾರ್’ ಮೇಲೆ ಅಥವಾ ಅವರ ಸ್ಥಿರ ಆಸ್ತಿಪಾಸ್ತಿಗಳ ಮೇಲೆ ಮಲ ವಿಸರ್ಜನೆ ಮಾಡಿದರೆ, ಅದು ಒಳ್ಳೆಯ ಲಕ್ಷಣವಾಗಿದೆ ಎಂದು ನಂಬುತ್ತಾರೆ ಮತ್ತು ಅದು ಅವನು ಶ್ರೀಮಂತನಾಗುವುದರ ಲಕ್ಷಣ ವಾಗಿದೆ ಎಂದು ತಿಳಿಯುತ್ತಾರೆ.
ಆ. ಸಮಾನ ಸಂಖ್ಯೆಯ ಹೂವುಗಳು ಮೃತ ವ್ಯಕ್ತಿಗಳಿಗಾಗಿರುತ್ತವೆ ಮತ್ತು ಸ್ತ್ರೀಯರಿಗೆ ಹಳದಿ ಹೂವು ಅಥವಾ ಹಳದಿ ಗುಲಾಬಿ ಹೂವನ್ನು ಕೊಡುವುದು ವ್ಯಭಿಚಾರದ ಲಕ್ಷಣ ಎಂದು ನಂಬಲಾಗುತ್ತದೆ.
೫. ಅರ್ಜೆಂಟಿನಾ
ಅ. ೨೦೦೧ ರಲ್ಲಿ ನಿರ್ಮಾಣವಾದ ಆರ್ಥಿಕ ಕುಸಿತಕ್ಕೆ ಕಾರಣ ರಾಗಿರುವ ಅರ್ಜೆಂಟಿನಾದ ಮಾಜಿ ಅಧ್ಯಕ್ಷ ಕಾರ್ಲೋಸ್ ಮೆನೆಮ್ ಅವರ ಹೆಸರನ್ನು ಅಲ್ಲಿಯ ಜನರು ಉಚ್ಚರಿಸುವುದಿಲ್ಲ, ಅಲ್ಲಿಯ ಜನರು ಅವರ ಹೆಸರನ್ನು ಉಚ್ಚರಿಸುವುದನ್ನು ತಡೆಗಟ್ಟುತ್ತಾರೆ. ಮೆನೆಮ್ ಎಂದರೆ ಜೀವಂತ ಶಾಪ ಎಂದು ಅವರಿಗೆ ಅನಿಸುತ್ತದೆ.
ಆ. ಮೆನೆಮ್‌ರ ಹೆಸರು ಕಿವಿಯ ಮೇಲೆ ಬಿದ್ದರೆ, ಕೂಡಲೇ ಸ್ತ್ರೀಯರು ತಮ್ಮ ಎಡ ಸ್ತನವನ್ನು ಸ್ಪರ್ಶಿಸುತ್ತಾರೆ ಮತ್ತು ಪುರುಷರು ಎಡ ವೃಷಣವನ್ನು (ಅಂಡಕೋಶವನ್ನು) ಸ್ಪರ್ಶಿಸುತ್ತಾರೆ.
೬. ಜರ್ಮನಿ
ಜರ್ಮನಿಯಲ್ಲಿ ಮೃತ್ಯು ಬರುವಾಗ ಯಾರಿಗಾದರೂ ತೊಂದರೆ ಯಾಗುತ್ತಿದ್ದರೆ ಮೇಲ್ಛಾವಣಿಯ ಮೂರು ಹಂಚುಗಳನ್ನು ತೆಗೆದರೆ ಮರಣ ಸುಲಭವಾಗುತ್ತದೆ ಎಂಬ ಮೂಢನಂಬಿಕೆ ಇದೆ.
೭. ಫ್ರಾನ್ಸ್
ಪಾವ್ (ಬ್ರೆಡ್) ನ್ನು ಕೊಡುವಾಗ ಅಥವಾ ಟೇಬಲ್ ಮೇಲೆ ಇಡುವಾಗ ಅದರ ಮೇಲಿನ ಬದಿಯನ್ನು ಕೆಳಗೆ ಮಾಡಿಟ್ಟರೆ ಹಸಿವು ಚೆನ್ನಾಗಿ ಆಗುತ್ತದೆ ಎಂಬ ಮೂಢನಂಬಿಕೆ ಫ್ರಾನ್ಸ್‌ನಲ್ಲಿದೆ
೮. ಗ್ರೀಸ್
ಒಂದು ವೇಳೆ ಅವಿವಾಹಿತ ತರುಣಿ ಮಲಗುವಾಗ ತಲೆದಿಂಬಿನ ಹತ್ತಿರ ಪವಿತ್ರ ಬಾದಾಮಿಗಳ ಚಿಕ್ಕ ಚೀಲವನ್ನು ಇಟ್ಟುಕೊಂಡು ಮಲಗಿದರೆ ಅವಳಿಗೆ ತನ್ನ ಭಾವಿ ಜೊತೆಗಾರನ ಕನಸುಗಳು ಬೀಳುತ್ತವೆ ಎಂಬ ಪ್ರಾಚೀನ ವಿಶ್ವಾಸ ಗ್ರೀಸ್ ಜನರಲ್ಲಿದೆ.
೯. ಚೀನಾ
ಚೀನಾದ ನಂಬಿಕೆಗನುಸಾರ ಕೂದಲುಗಳಿಂದ ಹಣೆಯನ್ನು ಮುಚ್ಚಿಕೊಂಡರೆ, ಆ ವ್ಯಕ್ತಿಯ ಸಂಪತ್ತಿನಲ್ಲಿ ಗಂಭೀರ ಅಡಚಣೆಗಳು ನಿರ್ಮಾಣವಾಗುತ್ತವೆ ಮತ್ತು ‘ಪುರುಷರ ಹಣೆಯ ಕಡೆಗೆ ಯಶಸ್ಸು ಆಕರ್ಷಿತವಾಗುತ್ತದೆ ಎಂಬ ನಂಬಿಕೆ ಚೀನಾದಲ್ಲಿದೆ. (ಆಧಾರ : ಮಾಸಿಕ ‘ಶ್ರೀಮತ್ ಪೂರ್ಣಾನಂದಾಯ ನಮಃ’, ದೀಪಾವಳಿ ವಿಶೇಷಾಂಕ ೨೦೧೪)