ಮಧ್ಯಪ್ರದೇಶದ ವಸತಿಗೃಹದಲ್ಲಿ ಕ್ರೈಸ್ತ ಮಿಷಿನರಿಗಳಿಂದ ಹಿಂದೂ ವಿದ್ಯಾರ್ಥಿಗಳ ಮತಾಂತರ !

  • ೧೦ ಜನರ ವಿರುದ್ಧ ದೂರು ದಾಖಲು !

  • ಈ ಹಿಂದೆ ೩ ಹಿಂದೂ ಹುಡುಗರು ಇಸ್ಲಾಂಗೆ ಮತಾಂತರಗೊಂಡಿದ್ದರು !

ಭೋಪಾಲ್ (ಮಧ್ಯಪ್ರದೇಶ) – ಮಧ್ಯಪ್ರದೇಶದಲ್ಲಿನ ಶಿಶುಮಂದಿರದಲ್ಲಿ ಹಿಂದೂ ಹುಡುಗರ ಇಸ್ಲಾಂಗೆ ಮತಾಂತರ ಮಾಡಿದ ನಂತರ ಈಗ ರಾಜ್ಯದ ಮಿಷಿನರಿ ನಡೆಸುವ ವಸತಿ ಗೃಹದಲ್ಲಿ ಕ್ರೈಸ್ತ ಮಿಷಿನರಿಗಳಿಂದ ಹಿಂದೂ ಹುಡುಗರ ಮತಾಂತರ ಮಾಡಲಾಗುತ್ತಿರುವ ಘಟನೆಗಳು ಬೆಳಕಿಗೆ ಬಂದಿದೆ. ‘ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್’ ಈ ಸಂಘಟನೆಯ ಅಧ್ಯಕ್ಷೆ ಪ್ರಿಯಾಂಕಾ ಕಾನೂನಗೋ ಇವರು ಇದಕ್ಕೆ ಸಂಬಂಧಪಟ್ಟ ಹಾಗೆ ದೊಮೋಹ ಪೊಲೀಸ ಠಾಣೆಯಲ್ಲಿ ೧೦ ಜನರ ವಿರುದ್ಧ ದೂರು ದಾಖಲಿಸಿದ್ದಾರೆ.

ಕಾನೂನಗೋ ಇವರ ನೇತೃತ್ವದಲ್ಲಿ ಒಂದು ಪಡೆಯು ಅನೇಕ ಕ್ರೈಸ್ತ ಮಿಷಿನಿರಿಗಳ ಮೇಲೆ ನಿಗಾ ಇಟ್ಟಿದ್ದರು. ಈ ಸಮಯದಲ್ಲಿ ಕ್ರೈಸ್ತ ಮಿಷಿನರಿಗಳ ಅನೇಕ ದುರ್ವ್ಯವಹಾರ ಬಹಿರಂಗವಾಗಿದೆ.
ಮೊಟ್ಟಮೊದಲು ಈ ಪಡೆಯು ಬೆಥಲಹೇಮ ಬೈಬಲ್ ಪರಿಸರದಲ್ಲಿನ ವಸತಿ ಗೃಹಕ್ಕೆ ಭೇಟಿ ನೀಡಿದರು. ಈ ಸ್ಥಳದಲ್ಲಿ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದ ನಂತರ ಇಲ್ಲಿಯ ಹಿಂದೂ ಹುಡುಗರ ಮತಾಂತರವಾಗಿರುವುದು ಬೆಳಕಿಗೆ ಬಂದಿದೆ. ಅಲ್ಲಿಂದ ಈ ಪಡೆ ಭೀದಾವರಿ ಗ್ರಾಮದಲ್ಲಿನ ಮಿಷೀನರಿ ನಡೆಸುತ್ತಿರುವ ವಸತಿಗೃಹಕ್ಕೆ ತಲುಪಿದರು. ಇಲ್ಲಿಯ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ವಿದ್ಯಾರ್ಥಿಗಳು ಇದ್ದರು. ಅಲ್ಲಿ ವಿದ್ಯಾರ್ಥಿಗಳಿಗೆ ಕ್ರೈಸ್ತ ಪಂಥದ ಶಿಕ್ಷಣ ನೀಡುತ್ತಿರುವುದು ಬಹಿರಂಗವಾಯಿತು.

ಈ ಮೊದಲು ರಾಜ್ಯದಲ್ಲಿನ ರಾಯಸೇನ ಜಿಲ್ಲೆಯಲ್ಲಿನ ಒಂದು ಬಾಲ ಮಂದಿರದಲ್ಲಿನ ೩ ಹಿಂದೂ ಹುಡುಗರನ್ನು ಇಸ್ಲಾಂಗೆ ಮತಾಂತರಗೊಳಿಸಿರುವುದು ಬೆಳಕಿಗೆ ಬಂದಿತ್ತು.

ಸಂಪಾದಕೀಯ ನಿಲುವು

ಮಧ್ಯಪ್ರದೇಶದಲ್ಲಿ ಭಾಜಪದ ಸರಕಾರ ಇರುವಾಗ ಅಲ್ಲಿ ಹಿಂದೂಗಳ ಮತಾಂತರ ಆಗಬಾರದೆಂದು ಅಪೇಕ್ಷೆಯಾಗಿದೆ ! ಇದರ ಜೊತೆಗೆ ಹಿಂದೂ ಹುಡುಗರನ್ನು ಬಲವಂತವಾಗಿ ಮತಾಂತರಗೊಳಿಸುವವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹಿಂದೂಗಳ ಆಗ್ರಹ !