ಮಳಲಿ ಮಸೀದಿ ಇದು ಮೊದಲು ಹಿಂದೂ ದೇವಸ್ಥಾನ ಇತ್ತು ಎಂದು ವಿಶ್ವ ಹಿಂದೂ ಪರಿಷತ್ತಿನ ದಾವೆ !
ಮಂಗಳೂರು – ಮಂಗಳೂರಿನಲ್ಲಿಯ ಮಳಲಿ ಮಸೀದಿ ವಿವಾದದ ವಿಚಾರಣೆ ನಡೆಸುವಂತೆ ಕರ್ನಾಟಕ ನ್ಯಾಯಾಲಯ ನಿರ್ಧರಿಸಿದೆ. ವಿಶ್ವ ಹಿಂದೂ ಪರಿಷತ್ತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಈ ಮಸೀದಿ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿತ್ತು. ಉತ್ತರ ಪ್ರದೇಶದಲ್ಲಿನ ಜ್ಞಾನವಾಪಿ ಮಸೀದಿಯಂತೆ ಸಮೀಕ್ಷೆಯ ಹಾಗೆ ಇಲ್ಲಿಯ ಮಸೀದಿಯ ಸಮೀಕ್ಷೆ ಕೂಡ ನಡೆಸಬೇಕೆಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ. ಮಸೀದಿಯ ಜೀರ್ಣೋದ್ಧಾರದ ಸಮಯದಲ್ಲಿ ಅದರ ರಚನೆ ಹಿಂದೂ ದೇವಸ್ಥಾನದ ಹಾಗೆ ಇರುವುದು ಬೆಳಕಿಗೆ ಬಂದಿದೆ.
ಮಳಲಿ ಮಸೀದಿ ವಿವಾದ – ವಿಹೆಚ್ಪಿ ಅರ್ಜಿ ವಿಚಾರಣೆಗೆ ಕೋರ್ಟ್ ಅಸ್ತು https://t.co/VIUqsE2kHL#Court #DakshinaKannada #Malali #Mangaluru #Mosque #VHP
— PublicTV (@publictvnews) November 9, 2022
‘ನ್ಯಾಯಾಲಯಕ್ಕೆ ಈ ಪ್ರಕರಣದ ಬಗ್ಗೆ ಗಮನ ನೀಡುವ ಅಧಿಕಾರವಿಲ್ಲ !’ (ಅಂತೆ) – ಮಸೀದಿಯ ವ್ಯವಸ್ಥಾಪಕರು ಮತ್ತು ಮುಸಲ್ಮಾನ ಸಂಘಟನೆ
ಮಸೀದಿಯ ವ್ಯವಸ್ಥಾಪಕರು ಮತ್ತು ಮುಸಲ್ಮಾನ ಸಂಘಟನೆ ಇವರು ನ್ಯಾಯಾಲಯಕ್ಕೆ ಈ ಪ್ರಕರಣದಲ್ಲಿ ಗಮನಹರಿಸುವ ಅಧಿಕಾರ ಇಲ್ಲವೆಂದು ಹೇಳಿದೆ. ಈ ಭೂಮಿ ವಕ್ಫ್ ಬೋರ್ಡ್‌ಗೆ ಸೇರಿದ್ದು ಇಲ್ಲಿ ಯಾವುದೇ ದೇವಸ್ಥಾನ ಇರಲಿಲ್ಲ, ಎಂದು ಯುಕ್ತಿವಾದ ಮಾಡಿದೆ. ಆದರೂ ನ್ಯಾಯಾಲಯವು ಮಳಲಿ ಮಸೀದಿಯ ವಿವಾದದ ಬಗ್ಗೆ ವಿಚಾರಣೆ ನಡೆಸುವುದಾಗಿ ಹೇಳುತ್ತಾ ತೀರ್ಪು ಬರೋವರೆಗೂ ಮಸೀದಿಯ ಪ್ರದೇಶದಲ್ಲಿ ಯಥಾವತ್ತಾಗಿ ಇರಿಸುವ ಆದೇಶ ನೀಡಿದೆ. ಅರ್ಜಿದಾರರಲ್ಲಿ ಒಬ್ಬರಾದ ವಿಶ್ವ ಹಿಂದೂ ಪರಿಷತ್ತಿನ ಮಳಲಿ ಮಸೀದಿಯ ಸಮೀಕ್ಷೆ ನಡೆಸುವುದಕ್ಕಾಗಿ ನ್ಯಾಯಾಲಯದ ಆಯೋಗ ನೇಮಕಗೊಳಿಸಲು ಒತ್ತಾಯಿಸಿದೆ.