ಜಿಹಾದ್ ಬಗ್ಗೆ ಪುಸ್ತಕ ಬರೆದಿದ್ದರು
ಮೈಸೂರು (ಕರ್ನಾಟಕ) – ಕರ್ನಾಟಕದಲ್ಲಿನ ಮೈಸೂರಿನಲ್ಲಿ ಇತ್ತೀಚೆಗೆ ಮೃತ್ಯು ಹೊಂದಿದ ತನಿಖಾ ಇಲಾಖೆಯ ಮಾಜಿ ಅಧಿಕಾರಿ ಆರ್. ಎನ್. ಕುಲಕರ್ಣಿ ಇವರ ಬಗ್ಗೆ ನಿಜವಾದ ಮಾಹಿತಿ ಬೆಳಕಿಗೆ ಬಂದಿದೆ. ವಾಸ್ತವದಲ್ಲಿ ಇದು ಅಪಘಾತ ಅಲ್ಲದೆ ಹತ್ಯೆ ಆಗಿದೆ. ಚತುಷ್ಚಕ್ರವಾಹನದಿಂದ ಉದ್ದೇಶಪೂರಿತವಾಗಿ ಗುದ್ದಿರುವುದು ಪೊಲೀಸರಿಗೆ ಕಂಡು ಬಂದಿದೆ. ಅವರು ಶುಕ್ರವಾರ, ನವೆಂಬರ್, ೪.೨೦೨೨ ರಂದು ಸಾಯಂಕಾಲ ಮೈಸೂರು ವಿದ್ಯಾ ಪೀಠ (ಗಂಗೋತ್ರಿ) ಇಲ್ಲಿಯ ಸಂಗಣಕ ವಿಜ್ಞಾನ ವಿಭಾಗದ ಹತ್ತಿರ ವಾಯು ವಿಹಾರಕ್ಕಾಗಿ ಹೋಗಿರುವಾಗ ಒಬ್ಬ ದುಷ್ಕರ್ಮಿಯ ವಾಹನ ಅವರಿಗೆ ಹಿಂದಿನಿಂದ ಗುದ್ದಿದೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಅವರನ್ನು ಮೃತ ಎಂದು ಘೋಷಿಸಲಾಯಿತು.
ಕುಲಕರ್ಣಿ ಇವರಿಗೆ ನಾಲ್ಕು ಚಕ್ರದ ವಾಹನ ಗುದ್ದಿದ ನಂತರ ಅಪರಾಧಿಯು ಘಟನಾ ಸ್ಥಳದಿಂದ ಪಲಾಯನ ಮಾಡಿದ್ದಾನೆ. ಈ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕವಾಗಿ ಅಪಘಾತದ ದೂರು ದಾಖಲಿಸಿದ್ದರು, ಆದರೆ ಪೊಲೀಸರು ಸಿಸಿಟಿವಿ ಫೋಟೋಸ್ ನೋಡಿದ ನಂತರ ಇದು ಉದ್ದೇಶಪೂರ್ವಕವಾಗಿ ಮಾಡಿರುವ ಕೃತ್ಯ ಎಂದು ತಿಳಿದು ಬಂದಿದೆ. ಇದರ ನಂತರ ಜಯಲಕ್ಷ್ಮಿಪುರಂ ಪೋಲಿಸ್ ಠಾಣೆಯಲ್ಲಿ ಹತ್ಯೆಯ ದೂರು ದಾಖಲಿಸಲಾಗಿದೆ. ಹತ್ಯೆಯ ಸಮಯದಲ್ಲಿ ಅವರು ನಡೆದು ಕೊಂಡು ಹೋಗುತ್ತಿರಲಿಲ್ಲ, ಆದರೆ ರಸ್ತೆಯ ಬದಿಯಲ್ಲಿ ನಿಂತಿದ್ದರು. ಅವರಿಗೆ ಗುದ್ದಿರುವ ವಾಹನಕ್ಕೆ ಗಾಡಿಯ ನಂಬರ್ ಪ್ಲೇಟ್ ಇರಲಿಲ್ಲ.
ಮೈಸೂರ ನಗರದ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ, ಇವರು ಪೊಲೀಸರು ಅಪರಾಧಿಯನ್ನು ಬಂಧಿಸಲು ಅನ್ವೇಷಣೆಯನ್ನು ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ತನಿಖೆಗಾಗಿ ಮೂವ್ವರು ವರಿಷ್ಟ ಅಧಿಕಾರಿಗಳ ಪಥಕ ಸಿದ್ಧಗೊಳಿಸಲಾಗಿದೆ. ಈ ಹತ್ಯೆ ವೈಯಕ್ತಿಕ ವೈಮನಸ್ಯದಿಂದ ನಡೆದಿದೆಯೋ ಅಥವಾ ವ್ಯಾವಸಾಯಿಕ ಜೀವನಕ್ಕೆ ಸಂಬಂಧಪಟಿದೆ ? ಎದು ಇಲ್ಲಿಯವರೆಗೂ ತಿಳಿದು ಬಂದಿಲ್ಲ, ಎಂದು ಹೇಳಿದರು. ಕುಲಕರ್ಣಿ ಇವರು ಜಿಹಾದಿಗಳ ಬಂಡವಾಳ ತೆರೆದಿಟ್ಟಿರುವ, ‘ಫಸೆಟ್ಸ್ ಆಫ್ ಟೆರೇರಿಸಂ ಇನ್ ಇಂಡಿಯಾ ಎಂಬ ಪುಸ್ತಕ ಬರೆದಿದ್ದು ಕೇಂದ್ರೀಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರ ಹಸ್ತದಿಂದ ಈ ಪುಸ್ತಕದ ಬಿಡುಗಡೆ ಮಾಡಲಾಗಿತ್ತು. ಇದರ ಜೊತೆಗೆ ಅವರು ಅನ್ಯ ಮೂರು ಪುಸ್ತಕಗಳನ್ನು ಬರೆದಿದ್ದಾರೆ.
ಸಂಪಾದಕೀಯ ನಿಲುವುಸರಕಾರವು ಈ ವಿಷಯದ ಬಗ್ಗೆ ವಿಚಾರಣೆ ನಡೆಸಿ ಸತ್ಯ ಜನರೆದರು ಮಂಡಿಸಬೇಕು ! |