ಉಜ್ಜೈನ್ ಇಲ್ಲಿಯ ಕಾನ್ವೆಂಟ್ ಶಾಲೆಯಲ್ಲಿನ ಕ್ರೈಸ್ತ ಶಿಕ್ಷಕ ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸುತಿದ್ದನು !

  • ಪೋಷಕರಿಂದ ದೂರು ನೀಡಿದ ನಂತರ ಬಂಧನ

  • ಶಾಲೆಯ ಆಡಳಿತ ಮಂಡಳಿಯಿಂದ ಪ್ರಕರಣ ಮುಚ್ಚು ಹಾಕಲು ನಡೆದಿತ್ತು ಪ್ರಯತ್ನ !

ಉಜ್ಜೈನ್ (ಮಧ್ಯಪ್ರದೇಶ) – ಇಲ್ಲಿಯ ತರಾನಾದಲ್ಲಿರುವ ‘ದಿನಾಹ ಕಾನ್ವೆಂಟ್ ಶಾಲೆಯಲ್ಲಿನ ಶಿಕ್ಷಕ ಲಿಜಾಯ ಇವನು ವಿದ್ಯಾರ್ಥಿನಿಯರಿಗೆ ಅಶ್ಲೀಲ ವಿಡಿಯೋ ತೋರಿಸುತ್ತಿದ್ದನು ಮತ್ತು ಅವರಿಗೆ ‘ಐ ಲವ್ ಯು’, ‘ಮುತ್ತು’, ಈ ರೀತಿಯ ಶಬ್ದ ಕಲಿಸಿರುವ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿನಿಯರು ಈ ವಿಷಯವಾಗಿ ಪೋಷಕರಿಗೆ ಮಾಹಿತಿ ನೀಡಿದ ನಂತರ ಪೋಷಕರು ಪೋಲೀಸರಲ್ಲಿ ನೀಡಿರುವ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಇದರ ಮೊದಲು ಪೋಷಕರು ಮತ್ತು ಹಿಂದೂ ಸಂಘಟನೆಯ ಕಾರ್ಯಕರ್ತರು ಶಾಲೆಯ ಹೊರಗೆ ಘೋಷಣೆ ಕೂಗಿದರು ಹಾಗೂ ಕಲ್ಲುತುರಾಟ ನಡೆಸಿದರು. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು.

೧. ವಿದ್ಯಾರ್ಥಿನಿಯರು, ‘ಈ ಪ್ರಕರಣದ ಬಗ್ಗೆ ಶಾಲೆಯ ಆಡಳಿತಕ್ಕೆ ಹೇಳಲಾಗಿತ್ತು; ಆದರೆ ಅವರು ಅದನ್ನು ನಿರ್ಲಕ್ಷಿಸಿ ಪ್ರಕರಣ ಮುಚ್ಚಿ ಹಾಕಿದರು.’ ಎಂದು ಹೇಳಿದರು. ಪೊಲೀಸರು ಈಗ ಶಾಲೆಯ ಆಡಳಿತದವರನ್ನು ಕೂಡ ವಿಚಾರಣೆ ಮಾಡುವವರಿದ್ದಾರೆ.

೨. ಓರ್ವ ವಿದ್ಯಾರ್ಥಿನಿಯ ಪೋಷಕರು, ಶಾಲೆಯ ಆಡಳಿತದಿಂದ ಶಾಲೆಯಲ್ಲಿನ ಘಟನೆಗಳನ್ನು ಮನೆಯಲ್ಲಿ ಹೇಳಿದರೆ ಶಾಲೆಯಿಂದ ತೆಗೆದು ಹಾಕುವ ಬೆದರಿಕೆ ನೀಡಿದ್ದರು, ಹಾಗೂ ಆಕೆಯ ಹಸ್ತಾಕ್ಷರದಲ್ಲಿ ಒಂದು ಪತ್ರ ಬರೆಸಿಕೊಂಡಿದ್ದರು ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಇಂತಹ ಶಾಲೆಗಳ ಅನುಮತಿ ರದ್ದುಪಡಿಸಿ ಅದಕ್ಕೆ ಸಂಬಂಧಪಟ್ಟ ಮುಖ್ಯಸ್ಥರನ್ನು ಬಂಧಿಸಬೇಕು !
  • ಯಾವ ರೀತಿ ಉತ್ತರ ಪ್ರದೇಶದಲ್ಲಿ ಮದರಸಾಗಳ ಸಮೀಕ್ಷೆ ಮಾಡಲಾಯಿತೋ ಅದೇ ರೀತಿ ಈಗ ದೇಶದಲ್ಲಿನ ಕಾನ್ವೆಂಟ್ ಶಾಲೆಗಳ ಸಮೀಕ್ಷೆ ನಡೆಸಿ ಅಲ್ಲಿ ಏನು ಕಲಿಸಲಾಗುತ್ತಿದೆ ? ಹಿಂದೂ ವಿದ್ಯಾರ್ಥಿಗಳ ಮೇಲೆ ಯಾವ ಬಂಧನ ಹೇರಲಾಗುತ್ತದೆ ? ಇದರ ಮಾಹಿತಿ ಪಡೆಯುವುದು ಈಗ ಅವಶ್ಯಕವಾಗಿದೆ !