ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರವೆಂದು ಘೋಷಿಸುವ ಬೇಡಿಕೆಗೆ ಒತ್ತು !

  • ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆಗಳು

  • ಮತ್ತೆ ರಾಜಪ್ರಭುತ್ವ ಸ್ಥಾಪಿಸಲು ಆಗ್ರಹ !

ಕಠ್ಮಂಡು (ನೇಪಾಳ) – ನೇಪಾಳದಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಪ್ರಚಾರ ನಡೆಯುತ್ತಿದೆ. ಇದರಲ್ಲಿ ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರ ಎಂದು ಘೋಷಿಸುವ ಮತ್ತು ದೇಶದಲ್ಲಿ ಮತ್ತೊಮ್ಮೆ ರಾಜಪ್ರಭುತ್ವ ತರಬೇಕೆಂಬ ಆಗ್ರಹ ಬಲ ಪಡೆಯುತ್ತಿದೆ. ‘ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲಾಗುವುದು’ ಎಂದು ರಾಷ್ಟ್ರೀಯ ಪ್ರಜಾತಂತ್ರ ಪಕ್ಷವು ನೇರವಾಗಿ ಜನತೆಗೆ ಭರವಸೆ ನೀಡಿದೆ. ಇದರೊಂದಿಗೆ ಕಮ್ಯುನಿಸ್ಟ ನಾಯಕ ಕೆ.ಪಿ. ಶರ್ಮಾ ಓಲಿ ಅವರೂ ‘ನಾವು ಹಿಂದೂ ರಾಷ್ಟ್ರ ಮಾಡಲು ಬೆಂಬಲಿಸಬಹುದು’ ಎಂದು ಸುಳಿವು ನೀಡಿದ್ದಾರೆ. ರಾಷ್ಟ್ರೀಯ ಪ್ರಜಾತಂತ್ರ ಪಕ್ಷ ಮತ್ತು ಶರ್ಮಾ ಓಲಿಯ ಪಕ್ಷ ಸಿ.ಪಿ.ಎನ್.-ಯು.ಎಮ್.ಎಲ್. ಒಟ್ಟಾಗಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ನೇಪಾಳದಲ್ಲಿ ಶೇ. ೮೧.೩ ಹಿಂದೂಗಳಿದ್ದಾರೆ. ೨೦೦೭ ರ ತನಕ ನೇಪಾಳವು ಹಿಂದೂ ರಾಷ್ಟ್ರವಾಗಿತ್ತು. ಆನಂತರ ಮಾವೋವಾದಿಗಳು ಅಧಿಕಾರಕ್ಕೆ ಬಂದ ಬಳಿಕ ನೇಪಾಳವನ್ನು ಜಾತ್ಯತೀತ ರಾಷ್ಟ್ರವೆಂದು ಘೋಷಿಸಿತು.

೧. ರಾಷ್ಟ್ರೀಯ ಪ್ರಜಾತಂತ್ರ ಪಕ್ಷದ ಅಧ್ಯಕ್ಷ ರಾಜೇಂದ್ರ ಲಿಂಗಡೇನ್ ಇವರು ಮಾತನಾಡಿ, ನಮಗೆ ರಾಜಪ್ರಭುತ್ವವನ್ನು ದೇಶದ ರಕ್ಷಕನನ್ನಾಗಿ ಮಾಡಬೇಕು, ನೇಪಾಳವನ್ನು ಸನಾತನ ಧರ್ಮವನ್ನು ಆಧಾರಿಸಿರುವ ಹಾಗೂ ಇತರ ಧರ್ಮದವರಿಗೆ ಸ್ವಾತಂತ್ರ್ಯವಿರುವಂತಹ ಹಿಂದೂ ರಾಷ್ಟ್ರವನ್ನಾಗಿ ಮಾಡಬೇಕು ಹಾಗೂ ಪ್ರಧಾನಿಯನ್ನು ನೇರ ಚುನಾವಣೆಯ ಮೂಲಕ ಆಯ್ಕೆ ಮಾಡಬೇಕು ಎಂದು ತಮ್ಮ ಅನಿಸಿಕೆಯನ್ನು ಹೇಳಿದರು.

೨. ನೇಪಾಳದಲ್ಲಿ ಕಳೆದ ಕೆಲವು ವರ್ಷಗಳಿಂದ ಕಮ್ಯುನಿಸ್ಟ್ ಸರಕಾರವಿದೆ ಮತ್ತು ಅದು ಜನರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಆದ್ದರಿಂದಲೇ ಅಲ್ಲಿನ ರಾಜಕೀಯ ಪಕ್ಷಗಳು ಈಗ ಹಿಂದೂ ರಾಷ್ಟ್ರವನ್ನು ಆಗ್ರಹಿಸಲಾಗುತ್ತಿದೆ. ನೇಪಾಳದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿ ಸಚಿವ ಪ್ರೇಮ್ ಅಲೆ ಈ ಮೊದಲೇ ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸುವ ಬೇಡಿಕೆಯನ್ನು ಬೆಂಬಲಿಸಿದ್ದಾರೆ.

೩. ಕಳೆದ ವರ್ಷ ಆಗಸ್ಟ್‌ನಲ್ಲಿ ನೇಪಾಳದ ಮಾಜಿ ಸೇನಾ ಮುಖ್ಯಸ್ಥ ಜನರಲ ರುಕಮಾಂಗುಡ ಕಟವಾಲ ಅವರು ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರವಾಗಿಸುವುದಕ್ಕಾಗಿ ಒಂದು ಅಭಿಯಾನವನ್ನು ಪ್ರಾರಂಭಿಸಿದ್ದರು. ಅದಕ್ಕೆ ಅವರು ‘ಹಿಂದೂ ರಾಷ್ಟ್ರ ಸ್ವಾಭಿಮಾನ ಜಾಗರಣ ಅಭಿಯಾನ’ ಎಂದು ಹೆಸರಿಟ್ಟಿದ್ದರು. ಅದರಲ್ಲಿ ಅವರು, ಈ ಅಭಿಯಾನವು ಧರ್ಮದ ಆಧಾರದ ಮೇಲೆ ಅಸ್ಮಿತೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದು; ‘ಹಿಂದೂ ಅಸ್ಮಿತೆಯನ್ನು’ ಮರುಸ್ಥಾಪಿಸುವುದು ನನ್ನ ಗುರಿ, ಇದರಲ್ಲಿ ಯಾವುದೇ ಕಟ್ಟರತೆ ಇಲ್ಲ ಎಂದು ಹೇಳಿದ್ದರು.

೪. ನೇಪಾಳದಲ್ಲಿನ ೨೦ ಹಿಂದೂ ಧಾರ್ಮಿಕ ಸಂಘಟನೆಗಳು ನೇಪಾಳವನ್ನು ಮತ್ತೊಮ್ಮೆ ಹಿಂದೂ ರಾಷ್ಟ್ರವೆಂದು ಘೋಷಿಸಲು ಒಕ್ಕೂಟವನ್ನು ರಚಿಸಿವೆ.

ಸಂಪಾದಕೀಯ ನಿಲುವು

ಜಾತ್ಯಾತೀತವಾಗಿಸಲಾಗಿರುವ ನೇಪಾಳದಲ್ಲಿ ಚುನಾವಣೆಯ ಮೂಲಕ ಮತ್ತೊಮ್ಮೆ ಹಿಂದೂರಾಷ್ಟ್ರವನ್ನಾಗಿ ಘೋಷಿಸಬೇಕೆಂಬ ಬೇಡಿಕೆಯಾಗುತ್ತಿದ್ದರೇ ಭಾರತವನ್ನೂ ಹಿಂದೂರಾಷ್ಟ್ರವೆಂದು ಘೋಷಿಸಲು ಈಗ ರಾಜಕೀಯ ಪಕ್ಷಗಳು ಮುಂದಾಗುವುದು ಅತ್ಯಗತ್ಯ ಎಂದು ಹಿಂದೂಗಳಿಗೆ ಅನಿಸುತ್ತದೆ !