ಉತ್ತರಾಖಂಡದಲ್ಲಿ ಅಪ್ರಾಪ್ತ ಹುಡುಗಿಯ ಅತ್ಯಾಚಾರಗೈದ ಮತಾಂಧನ ಬಂಧನ

ಕಾಮುಕ ಮತಾಂಧ !

ಕರ್ಣಪ್ರಯಾಗ (ಉತ್ತರಖಂಡ) – ಉತ್ತರಖಂಡದ ಚಮೋಲಿ ಜಿಲ್ಲೆಯ ಕರ್ಣಪ್ರಯಾಗದಲ್ಲಿನ ಅಪ್ರಾಪ್ತ ಹುಡುಗಿಯನ್ನು ಅತ್ಯಾಚಾರಗೈದ ಆದಿಲ್ ಎಂಬ ಮತಾಂಧನನ್ನು ಪೊಲೀಸರು ಇತ್ತಿಚೆಗೆ ಬಂಧಿಸಿದ್ದಾರೆ. ನವಂಬರ್ ೩, ೨೦೨೨ ರಂದು ಓರ್ವ ಅಪ್ರಾಪ್ತ ಹುಡುಗಿ ಆಕೆಯ ಕುಟುಂಬದವರ ಸಹಾಯದಿಂದ ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ದೂರಿನಲ್ಲಿ ‘ಸಂತ್ರಸ್ತ ಹುಡುಗಿ ಪಾಠಕ್ಕಾಗಿ ತರಗತಿಗೆ ಹೋಗುತ್ತಿರುವಾಗ ಆದಿಲ್ ಎಂಬ ಮತಾಂಧನು ಆಕೆಯ ಅತ್ಯಾಚಾರ ಮಾಡಿದನು’, ಎಂದು ತಿಳಿಸಲಾಗಿದೆ.

ಪೊಲೀಸರು ಆದಿಲನ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ‘ಪೋಕ್ಸೋ’ ಕಾನೂನಿನ ೫೦೯ ಕಲಂನ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಉತ್ತರಖಂಡದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ ! – ಸಂತ ಸ್ವಾಮಿ ದರ್ಶನ ಭಾರತಿ

ಸಂತ ಸ್ವಾಮಿ ದರ್ಶನ ಭಾರತಿ

ಉತ್ತರಖಂಡದ ಪ್ರಸಿದ್ಧ ಸಂತ ಸ್ವಾಮಿ ದರ್ಶನ ಭಾರತಿ ಇವರು ಒಂದು ಸಂದರ್ಶನದಲ್ಲಿ ದೇವಭೂಮಿಯಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಭಯೋತ್ಪಾದನೆಯ ಬಗ್ಗೆ ಹೇಳಿಕೆ ನೀಡಿದ್ದರು. ಆಗ ಅವರು, “ಸಂಪೂರ್ಣ ಉತ್ತರಖಂಡದಲ್ಲಿ ಕೇವಲ ‘ಲವ್ ಜಿಹಾದ್’ ಅಷ್ಟೇ ಅಲ್ಲದೆ, ‘ಲ್ಯಾಂಡ್ ಜಿಹಾದ್’ ಮತ್ತು ಇತರ ಭಯೋತ್ಪಾದಕ ಚಟುವಟಿಕೆ ನಡೆಯುತ್ತಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇವರ ಭಯದಿಂದ ಉತ್ತರ ಪ್ರದೇಶದಲ್ಲಿನ ಎಲ್ಲಾ ಸಮಾಜಘಾತಕರು ಉತ್ತರಾಖಂಡದಲ್ಲಿ ಆಶ್ರಯ ಪಡೆಯುತ್ತಿದ್ದಾರೆ.” ಎಂದು ಹೇಳಿದರು.