ಭಾರತೀಯರು ಬಹಳ ಪ್ರತಿಭಾವಂತರಾಗಿರುತ್ತಾರೆ ! – ಪುತಿನ

ಮಾಸ್ಕೋ – ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮಿರ್ ಪುತಿನ ಇವರು ಮತ್ತೊಮ್ಮೆ ಭಾರತ ಮತ್ತು ಭಾರತೀಯರ ಪ್ರತಿಭೆಯನ್ನು ಹೊಗಳಿದ್ದಾರೆ. ಭಾರತದಲ್ಲಿ ಬಹಳ ಪ್ರತಿಭಾವಂತರಿದ್ದಾರೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತಕ್ಕೆ ವಿಕಾಸದ ಸಂದರ್ಭದಲ್ಲಿ ಉತ್ತಮ ಯಶಸ್ಸು ದೊರೆತಿದೆ, ಎಂದು ಪುತಿನ ಇವರು ರಷ್ಯಾದ ಏಕತಾ ದಿನ ಎಂದರೆ ನವಂಬರ್ ೪ ರಂದು ಹೇಳಿದರು.

ರೈಟರ್ಸ್ ವಾರ್ತಾ ಸಂಸ್ಥೆಗೆ ನೀಡಿರುವ ವಾರ್ತೆಯ ಪ್ರಕಾರ ಪುತನ ತಮ್ಮ ಮಾತು ಮುಂದುವರೆಸಿ, ವಿಕಾಸದ ದೃಷ್ಟಿಯಿಂದ ಭಾರತಕ್ಕೆ ಒಳ್ಳೆಯ ಪರಿಣಾಮ ಕಾಣುವುದು. ಹೆಚ್ಚುಕಡಿಮೆ ಒಂದುವರೆ ಅಬ್ಜ ನಾಗರೀಕರು ಅದರ ನಿಜವಾದ ಶಕ್ತಿಯಾಗಿದೆ. ಈ ಸಮಯದಲ್ಲಿ ಪುತಿನ್ ಇವರು ಆಫ್ರಿಕಾದಲ್ಲಿನ ವಸಾಹತಶಾಹಿ, ಭಾರತದ ಕ್ಷಮತೆ ಮತ್ತು ರಷ್ಯಾದ ಅಸಾಮಾನ್ಯ ಸಭ್ಯತೆ ಮತ್ತು ಸಂಸ್ಕೃತಿ ಇದರ ಬಗ್ಗೆ ಕೂಡ ಮಾತನಾಡಿದರು. ಪುತಿನ ಇವರು ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಇವರನ್ನು ಹೊಗಳಿದ್ದರು. ರಾಷ್ಟ್ರದ ಹಿತಕ್ಕಾಗಿ ಸ್ವತಂತ್ರ ವಿದೇಶಾಂಗ ನೀತಿ ರೂಪಿಸುವುದಕ್ಕಾಗಿ ಅವರು ಮೋದಿಯವರನ್ನು ಹೊಗಳಿದ್ದರು.