ಹಿಜಾಬ್ : ರೂಢಿ, ಪರಂಪರೆ ಮತ್ತು ಅದರತ್ತ ನೋಡುವ ದೃಷ್ಟಿಕೋನ (ಹಿಜಾಬ್ ಅಂದರೆ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ಬಟ್ಟೆ)

ನಮ್ಮಲ್ಲಿ ಅನೇಕರಿಗೆ ತಮಗೆ ಇಷ್ಟವಾದ ವಿಷಯಗಳನ್ನು ಆಯ್ದುಕೊಳ್ಳಲು ಬರುತ್ತದೆ, ಆದರೆ ಕೆಲವೊಂದು ಜನರಿಗೆ ಇಷ್ಟವಾದ ವಿಷಯಗಳನ್ನು ಆಯ್ದುಕೊಳ್ಳಲು ಬರುವುದಿಲ್ಲ. ಸದ್ಯ ಈ ದೃಷ್ಟಿಯಿಂದ ‘ಹಿಜಾಬ್’ ಇದು ವಾದಗ್ರಸ್ತವಾಗಿದೆ. ಕೆಲವು ಮಹಿಳೆಯರಿಗೆ ಹಿಜಾಬ್ ಧರಿಸುವ ಬಗ್ಗೆ ಒತ್ತಾಯಿಸಲಾಗುತ್ತದೆ. ಕೆಲವು ಮಹಿಳೆಯರು ತಾವಾಗಿಯೇ ಹಿಜಾಬ್ ಧರಿಸುತ್ತಾರೆ, ಕೆಲವು ಮಹಿಳೆಯರು ಯಾವಾಗಲೂ ಹಿಜಾಬ್‌ನ್ನು ಬಳಸುತ್ತಿರುತ್ತಾರೆ ಮತ್ತು ಇನ್ನು ಕೆಲವರು ಕೇವಲ ಪ್ರಾರ್ಥನೆಯ ಸಮಯದಲ್ಲಿ ಹಿಜಾಬ್ ಧರಿಸುತ್ತಾರೆ. ಕೆಲವು ಮಹಿಳೆಯರು ತಮ್ಮ ಪಂಥದ ‘ಸಾಂಸ್ಕೃತಿಕ ಗುರುತು’ ಎಂದು ಹಿಜಾಬ್ ಧರಿಸುತ್ತಾರೆ ಮತ್ತು ಕೆಲವು ಮಹಿಳೆಯರು ತಮ್ಮ ಕುಟುಂಬದಲ್ಲಿ ಈ ಪದ್ಧತಿಯಿದೆ ಎಂದು ಹಿಜಾಬ್ ಬಳಸುತ್ತಾರೆ. ಇಸ್ಲಾಮ್‌ನಲ್ಲಿ ‘ಹಿಜಾಬ್ ಕಡ್ಡಾಯವೆಂದು ಹೇಳಲಾಗಿದೆಯೇ ? ಅಥವಾ ರಾಜಕೀಯ ಇಸ್ಲಾಮ್ ಅದನ್ನು ನಿರ್ಮಿಸಿದೆಯೇ ? ಅದು ಭಕ್ತಿಯ ಪ್ರತೀಕವಾಗಿದೆಯೇ ಅಥವಾ ದಬ್ಬಾಳಿಕೆ ಆಗಿದೆಯೇ ?’ ಎಂದು ಕೆಲವು ವಾದಗ್ರಸ್ತರು ಪುನಃ ಪುನಃ ಕೇಳುವ ಪ್ರಶ್ನೆಗಳಾಗಿವೆ. ಆದುದರಿಂದ ಈ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಬೇಕಾಗುವುದು. ಅದಕ್ಕಾಗಿ ಈ ಲೇಖನ…

ಪಲ್ಕೀ ಶರ್ಮಾ ಉಪಾಧ್ಯಾಯ

೧. ಹಿಜಾಬ್ ಎಂದರೇನು ?

‘ಹಿಜಾಬ್’ ಈ ಶಬ್ದದ ಉಲ್ಲೇಖ ಕುರಾನ್‌ನಲ್ಲಿ ೮ ಬಾರಿ ಬಂದಿದೆ. ಪ್ರತಿಬಾರಿಯೂ ಅದರ ಸಂಬಂಧ ‘ಎರಡು ವಸ್ತುಗಳ ನಡುವಿನ ಪರದೆ’ ಎಂದಾಗಿದೆ ಮತ್ತು ಇದರ ಹಿಂದಿನ ತತ್ತ್ವವು ಆಧ್ಯಾತ್ಮಿಕವಾಗಿದೆ, ಅದು ಬಟ್ಟೆಗಳನ್ನು ಹೊಲಿಸುವ ಸಂಬಂಧದಲ್ಲಿ ಇಲ್ಲ. ಹಿಜಾಬ್ ಧರಿಸುವುದು ವಿರುದ್ಧ ಲಿಂಗದ ವ್ಯಕ್ತಿಯೊಂದಿಗೆ (ಸ್ತ್ರೀ ಅಥವಾ ಪುರುಷ) ನಡೆದುಕೊಳ್ಳುವಾಗ ಸಭ್ಯತೆ ಮತ್ತು ನಮ್ರತೆಯ ಪ್ರತೀಕವಾಗಿದೆ. ಈ ತತ್ತ್ವವು ಮಹಿಳೆಯರಿಗೆ ಮತ್ತು ಪುರುಷರಿಗೆ ಇಬ್ಬರಿಗೂ ಅನ್ವಯಿಸುತ್ತದೆ ಇದರ ಹಿಂದಿನ ಸರ್ವಸಾಮಾನ್ಯ ಕಾರಣ ‘ಎಲ್ಲ ಮುಸಲ್ಮಾನರು ನಮ್ರತೆಯಿಂದ ನಡೆದುಕೊಳ್ಳಬೇಕು, ಹಾಗೆಯೇ ಅವರ ಉಡುಪು ಸಭ್ಯತೆಯನ್ನು ತೋರ್ಪಡಿಸುವುದಾಗಿರಬೇಕು ಮತ್ತು ಮಹಿಳೆಯರು ಅಥವಾ ಪುರುಷರು ಲೈಂಗಿಕತೆಯ ಪ್ರದರ್ಶನವನ್ನು ಮಾಡಬಾರದು’, ಎಂದಾಗಿದೆ.

೨. ಹಿಜಾಬ್‌ನ ನಿಯಮಗಳ ವಿಷಯದಲ್ಲಿ ಪುರುಷರ ಏಕಾಧಿಕಾರ ಕಂಡು ಬರುತ್ತದೆ

ಹೆಚ್ಚಿನ ಮುಸಲ್ಮಾನರು ಹಿಜಾಬ್‌ನ ನಿಯಮ ಕೇವಲ ಮಹಿಳೆಯರಿಗಷ್ಟೇ ಇದೆ ಎಂದು ತಿಳಿಯುತ್ತಾರೆ. ಧಾರ್ಮಿಕ ಮತ್ತು ಇತಿಹಾಸದ ಪುಸ್ತಕಗಳನ್ನು ನೋಡಿದರೆ ಅವುಗಳಲ್ಲಿ ಯಾವ ಅರ್ಥವನ್ನು ನೀಡಲಾಗಿದೆಯೋ ಅಥವಾ ನಿಯಮ ಅಥವಾ ಕಾಯಿದೆಗಳನ್ನು ನೀಡಲಾಗಿದೆಯೋ, ಅವುಗಳಿಂದ ಮಹಿಳೆಯರ ಮೇಲೆ ಪುರುಷರ ವರ್ಚಸ್ಸು ಕಾಣಿಸುತ್ತದೆ. ಇದರಲ್ಲಿ ವಿದ್ವಾನರು, ಬುದ್ಧಿವಂತರು ಮತ್ತು ಮೌಲ್ವಿ (ಇಸ್ಲಾಮ್‌ನ ಧಾರ್ಮಿಕ ಮುಖಂಡರ)ಗಳಿದ್ದಾರೆ. ಇವರೆಲ್ಲ ತಮ್ಮನ್ನು ಇಸ್ಲಾಮ್‌ನ ರಕ್ಷಕರು ಮತ್ತು ಮಹಿಳೆಯರ ಪೋಷಕರು ಎಂದು ತಿಳಿಯುತ್ತಾರೆ. ಹೆಚ್ಚಿನ ಜನರು ಅವರಿಗೆ ಅನುಕೂಲವಾಗುವಂತೆ ಈ ಪದವನ್ನು ಅರ್ಥೈಸುತ್ತಾರೆ.

೩. ಹಿಜಾಬ್ ಬಗ್ಗೆ ಇಸ್ಲಾಮಿ ದೇಶಗಳಲ್ಲಿ ಭಿನ್ನಾಭಿಪ್ರಾಯಗಳಿರುವುದು

ಹಿಜಾಬ್‌ನ ಮೇಲಿನ ಸಾಹಿತ್ಯಗಳಲ್ಲಿ ಬಹಳಷ್ಟು ವಿವಿಧತೆ ಇದೆ. ಕೆಲವು ವಿದ್ವಾನರು, ಹಿಜಾಬ್ ಇದು ಇಸ್ಲಾಮ್ ಧರ್ಮದ ಮಹತ್ವದ ಭಾಗವಾಗಿಲ್ಲ ಎಂದು ಹೇಳುತ್ತಾರೆ. ಕೆಲವರು ಹಿಜಾಬ್ ಧರಿಸುವುದು ಇಸ್ಲಾಮ್‌ನ ೫ ಮಹತ್ವದ ಅಂಗಗಳಲ್ಲಿನ ಒಂದು ಅಂಗವಲ್ಲ ಎಂದು ಹೇಳುತ್ತಾರೆ. ಹಿಜಾಬ್ ಬಳಸುವುದು ಪ್ರತಿಯೊಬ್ಬರ ವೈಯಕ್ತಿಕ ವಿಷಯವಾಗಿದೆ. ಒಂದು ವೇಳೆ ಮಹಿಳೆಯರಿಗೆ ಹಿಜಾಬ್ ಧರಿಸುವುದು ಕಡ್ಡಾಯವಾಗಿದ್ದರೆ, ಅದರ ಬಗ್ಗೆ ಕುರಾನ್‌ನಲ್ಲಿ ಆ ರೀತಿಯ ಸ್ಪಷ್ಟ ಉಲ್ಲೇಖ ಇರುತ್ತಿತ್ತು. ೧೯೩೬ ರಲ್ಲಿ ಇರಾನ್ ರಾಜ ರೆಝಾ ಶಹಾ ಪಹಲವಿ ಇವನು ‘ಮಹಿಳೆಯರು ಬುರಖಾ ಧರಿಸಬಾರದು’, ಎಂಬ ಫತ್ವಾ ಹೊರಡಿಸಿದ್ದನು. ಯಾರಾದರೂ ಮಹಿಳೆಯರು ಬುರಖಾವನ್ನು ಧರಿಸಿದರೆ ಅವರನ್ನು ಥಳಿಸಲಾಗುತ್ತಿತ್ತು. ೧೯೭೯ ರಲ್ಲಿ ಇರಾನ್‌ನಲ್ಲಿ ಇಸ್ಲಾಮಿಕ್ ಕ್ರಾಂತಿಯಾಯಿತು ಮತ್ತು ಮಹಿಳೆಯರಿಗೆ ಹಿಜಾಬ್ ಧರಿಸುವುದನ್ನು ಕಡ್ಡಾಯ ಮಾಡಲಾಯಿತು. ಆಗ ಹಿಜಾಬ್ ಧರಿಸದ ಮಹಿಳೆಯರನ್ನು ಥಳಿಸಿ ಸೆರೆಮನೆಗೆ ನೂಕಲಾಗುತ್ತಿತ್ತು. ೧೯೨೪ ರಲ್ಲಿ ತುರ್ಕಿಯೇ ದೇಶದ ಮುಖಂಡ ಮುಸ್ತಫಾ ಕೆಮಲ್ ಆತಾತೂರ ಇವರು ಸಾರ್ವಜನಿಕ ಸಂಸ್ಥೆಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿರ್ಬಂಧಿಸಿದರು; ಆದರೆ ಅನಂತರ ರೆಸೆಪ್ ತಯ್ಯಪ್ ಎರ್ದಾಗಾನ್ ಇವರು ಈ ನಿಷೇಧವನ್ನು ಹಿಂಪಡೆದರು. ಈ ರೀತಿ ಹಿಜಾಬ್‌ನ್ನು ನಿಷೇಧಿಸುವುದು ಮತ್ತು ಆ ಮೇಲೆ ನಿಷೇಧವನ್ನು ಹಿಂಪಡೆಯುವುದು, ಇದು ಜಗತ್ತಿನ ವಿವಿಧ ಸ್ಥಳಗಳಲ್ಲಿ ನಡೆಯಿತು.

೪. ಇಸ್ಲಾಮ್‌ನಲ್ಲಿ ಮಹಿಳೆಯರು ಶರೀರವನ್ನು ಮುಚ್ಚಿಕೊಳ್ಳುವ ಪದ್ಧತಿಗಳು

ಇಸ್ಲಾಮ್‌ನಲ್ಲಿ ಮಹಿಳೆಯರು ಬಟ್ಟೆಯಿಂದ ಶರೀರವನ್ನು ಮುಚ್ಚಿಕೊಳ್ಳುವ ವಿವಿಧ ವಿಧಾನಗಳನ್ನು ಹೇಳಲಾಗಿದೆ.

ಅ. ‘ಖಿಮಾರ್’ ಇದರಲ್ಲಿ ತಲೆ, ಕುತ್ತಿಗೆ ಮತ್ತು ಭುಜಗಳ ಮೇಲೆ ಬಟ್ಟೆಯನ್ನು ಹಾಕಿಕೊಳ್ಳಲಾಗುತ್ತದೆ.

ಆ. ‘ಬುರಖಾ’ ಇದರಲ್ಲಿ ಸಂಪೂರ್ಣ ಶರೀರವನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ.

ಇ. ‘ನಕಾಬ್’ ಇದರಲ್ಲಿ ಕೇವಲ ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲಾಗುತ್ತದೆ.

ಈ. ‘ಚಾದರ್’ ಇದರಲ್ಲಿ ಕಣ್ಣುಗಳನ್ನು ಬಿಟ್ಟು ಉಳಿದ ಸಂಪೂರ್ಣ ಶರೀರವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲಾಗುತ್ತದೆ.

ಉ. ಇದರಲ್ಲಿ ತಲೆ ಮತ್ತು ಕುತ್ತಿಗೆಯನ್ನು ಬಟ್ಟೆಯಿಂದ ಮುಚ್ಚಿಕೊಳ್ಳಲಾಗುತ್ತದೆ.

ಇವುಗಳಲ್ಲಿ ತಲೆ ಮತ್ತು ಕುತ್ತಿಗೆಯ ಮೇಲೆ ಹಾಕಿಕೊಳ್ಳುವ ಬಟ್ಟೆಗೆ ಜಗತ್ತಿನಲ್ಲಿನ ಹೆಚ್ಚಿನ ಸ್ಥಳಗಳಲ್ಲಿ ಹಿಜಾಬ್ ಎಂದು ಕರೆಯುತ್ತಾರೆ. ಹೆಚ್ಚಿನ ಮುಸಲ್ಮಾನ ಮಹಿಳೆಯರು ರಾಷ್ಟ್ರೀಯತೆ, ಸಾಮಾಜಿಕ ಸ್ಥಾನ, ಆರ್ಥಿಕ ಮಟ್ಟ ಮತ್ತು ಧಾರ್ಮಿಕ ವಿಶ್ವಾಸ ಈ ದೃಷ್ಟಿಕೋನದಿಂದ ಹಿಜಾಬ್‌ನ್ನು ಬಳಸುತ್ತಾರೆ.

೫. ಇಸ್ಲಾಮಿ ರಾಷ್ಟ್ರಗಳ ಸಮೀಕ್ಷೆಯಿಂದ ಹಿಜಾಬ್‌ನ ಬಳಕೆ ಬಗ್ಗೆ ಸಮಾಜದ ಮಾನಸಿಕತೆ ಗಮನಕ್ಕೆ ಬರುವುದು

೨೦೧೪ ರಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯು ೬ ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಒಂದು ಸಮೀಕ್ಷೆಯನ್ನು ಮಾಡಿತು. ಮಹಿಳೆಯರು ಯಾವ ಉಡುಪುಗಳನ್ನು ಧರಿಸಬೇಕು ? ಇದರ ಬಗ್ಗೆ ಅವರಿಗೆ ಅನುಮತಿಯನ್ನು ಕೊಡಬಹುದೇ ?’ ಇದು ಈ ಸಮೀಕ್ಷೆಯ ವಿಷಯವಾಗಿತ್ತು. ಇದಕ್ಕೆ ಟ್ಯುನೇಶಿಯಾದಲ್ಲಿ ಶೇ. ೫೬, ತುರ್ಕಿಯೇದಲ್ಲಿ ಶೇ. ೫೩, ಲೆಬೆನಾನ್‌ನಲ್ಲಿ ಶೇ. ೪೯, ಸೌದಿ ಅರೇಬಿಯಾದಲ್ಲಿ ಶೇ. ೪೭, ಇರಾಕ್‌ನಲ್ಲಿ ಶೇ. ೨೭ ಮತ್ತು ಪಾಕಿಸ್ತಾನದಲ್ಲಿ ಶೇ. ೨೨ ರಷ್ಟು, ಈ ಪ್ರಮಾಣದಲ್ಲಿ ಅಲ್ಲಿನ ಜನರು ‘ಹೌದು’ ಎಂದು ಉತ್ತರ ನೀಡಿದರು. ಈ ಅಂಕಿಅಂಶಗಳಿಂದ ಆ ದೇಶಗಳಲ್ಲಿರುವ ಸಮಾಜದ ಬಗ್ಗೆ ಕಲ್ಪನೆ ಬರುತ್ತದೆ.

೬. ಹಿಜಾಬ್‌ದತ್ತ ನೋಡುವ ದೃಷ್ಟಿಕೋನವು ಶಿಕ್ಷಣ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಅವಲಂಬಿಸಿರುತ್ತದೆ

೨೦೧೫ ರಲ್ಲಿ ಇರಾನ್‌ನಲ್ಲಿ ‘ಹಿಜಾಬ್’ ಬಳಸುವುದು ಬಂಧನಕಾರಿ ಆಗಿದೆಯೋ, ಇಲ್ಲವೋ ಎಂಬುದರ ಬಗ್ಗೆ ಜನಾಭಿಪ್ರಾಯವನ್ನು ಸಂಗ್ರಹಿಸಲಾಯಿತು. ಇದಕ್ಕೆ ಪ್ರತಿಕ್ರಿಯಿಸುವವರು ಅವರ ಶೈಕ್ಷಣಿಕ ಅರ್ಹತೆಗನುಸಾರ ಮತ್ತು ಮಾನವೀ ವಿಕಾಸದ ದೃಷ್ಟಿಯಿಂದ ಅವರು ಎಲ್ಲಿದ್ದಾರೆ ? ಎಂಬ ದೃಷ್ಟಿಕೋನದಿಂದ ವರ್ಗೀಕರಣವನ್ನು ಮಾಡಲಾಯಿತು. ಉಚ್ಚ ಶಿಕ್ಷಣ ಪಡೆದ ಮಹಿಳೆಯರಲ್ಲಿ ಶೇ. ೫೧ ರಷ್ಟು ಮಹಿಳೆಯರು ‘ಹಿಜಾಬ್ ಧರಿಸುವುದು ಕಡ್ಡಾಯವಾಗಿಲ್ಲ’ ಎಂದು ಉತ್ತರಿಸಿದರೆ, ಉಚ್ಚ ಶಿಕ್ಷಣ ಪಡೆಯದಿರುವ ಶೇ. ೬೧ ರಷ್ಟು ಮಹಿಳೆಯರು ಹಿಜಾಬನ್ನು ಧರಿಸುವುದು ‘ಕಡ್ಡಾಯವಿರಬೇಕು’ ಎಂದು ಹೇಳಿದರು. ಮಾನವನ ವಿಕಾಸದ ದೃಷ್ಟಿಯಿಂದ ವಿಕಾಸವಾಗಿರುವ ಭಾಗದಲ್ಲಿ ‘ಹಿಜಾಬ್ ಕಡ್ಡಾಯವಾಗಿಲ್ಲ ಮತ್ತು ವಿಕಾಸವಾಗದ  ಭಾಗದಲ್ಲಿ ಹಿಜಾಬ್ ಕಡ್ಡಾಯವಾಗಿದೆ’ ಎಂದು ಹೇಳಲಾಯಿತು. ಆದುದರಿಂದ ಹಿಜಾಬ್‌ನ ಕಡೆಗೆ ನೋಡುವ ದೃಷ್ಟಿಕೋನ ಶಿಕ್ಷಣ ಮತ್ತು ಸುತ್ತಮುತ್ತಲಿನ ವಾತಾವರಣವನ್ನು ಅವಲಂಬಿಸಿರುತ್ತದೆ ಎಂಬುದು ಕಂಡುಬಂದಿತು.

೭. ಹಿಜಾಬ್ ಧರಿಸಲು ಮುಸಲ್ಮಾನ ಮಹಿಳೆಯರ ಮೇಲೆ ಒತ್ತಡವಿರುವುದು

ಮುಸಲ್ಮಾನರ ಕೆಲವು ಸಮಾಜಗಳಲ್ಲಿ ಮಹಿಳೆಯರಿಗೆ ಹಿಜಾಬ್ ಧರಿಸಬೇಕಾಗುತ್ತದೆ; ಏಕೆಂದರೆ ಅವರ ಸುತ್ತಮುತ್ತಲಿನ ಜನರು ಹಿಜಾಬ್ ಧರಿಸುವ ಬಗ್ಗೆ ಆಗ್ರಹಿಸುತ್ತಾರೆ ಮತ್ತು ಹಿಜಾಬ್ ಧರಿಸದಿದ್ದರೆ ಅವರನ್ನು ದೂಷಿಸುತ್ತಾರೆ.  ‘ಹಿಜಾಬ್’ ಇಲ್ಲದ ಮಹಿಳೆಯರೆಂದರೆ ತೆರೆದಿಟ್ಟ ಮಾಂಸ, ತೆರೆದಿಟ್ಟ ಕ್ಯಾಂಡಿ ಮತ್ತು ಆವರಣವಿಲ್ಲದ ಮುತ್ತು ಎಂದೆಲ್ಲ ಈ ಸಮಾಜದಲ್ಲಿ ಹೇಳಲಾಗುತ್ತದೆ. ‘ಧಾರ್ಮಿಕತೆಯ ಪ್ರದರ್ಶನಕ್ಕಾಗಿ ಹಿಜಾಬ್ ಬಳಸಲಾಗುತ್ತದೆ’, ಎನ್ನಲಾಗುತ್ತದೆ.

೮. ಪಾಶ್ಚಾತ್ಯ ದೇಶಗಳು ಹಿಜಾಬ್‌ನ್ನು ಬಹಿಷ್ಕರಿಸುವುದು

ಕೆಲವು ದೇಶಗಳಲ್ಲಿ ದೇಶದ ಐಕ್ಯತೆಯ ದೃಷ್ಟಿಯಿಂದ ವಿಚಾರ ಮಾಡಲಾಗುತ್ತದೆ. ಹೆಚ್ಚಿನ ಪಾಶ್ಚಾತ್ಯ ದೇಶಗಳಲ್ಲಿ ಹಿಜಾಬ್‌ನ ಕಡೆಗೆ ‘ಸಮಾಂತರ ಸಮಾಜ ಅಥವಾ ಸಂಸ್ಕೃತಿಯಲ್ಲಿ ನಿರ್ಮಾಣವಾಗುವ ಅಡಚಣೆ ಈ ದೃಷ್ಟಿಯಿಂದ ನೋಡಲಾಗುತ್ತದೆ. ಮುಸಲ್ಮಾನರು ನಮ್ಮ ದೇಶದಲ್ಲಿ ವಾಸಿಸುತ್ತಿದ್ದರೆ, ಅವರು ನಮ್ಮಂತೆ ವರ್ತಿಸಬೇಕು ಮತ್ತು ನಮ್ಮಂತೆ ಕಾಣಿಸಬೇಕು ಎಂದು ಪಾಶ್ಚಾತ್ಯ ದೇಶದ ಜನರ ಅಭಿಪ್ರಾಯವಾಗಿದೆ. ಮುಸಲ್ಮಾನರು ತಮ್ಮ ದೇಶಕ್ಕನುಸಾರ ಉಡುಪು ಮತ್ತು ಅಲ್ಲಿನ ಸಂಸ್ಕೃತಿಯನ್ನು ಪಾಲಿಸಬೇಕು ಎಂಬುದು ಅವರ ಅಪೇಕ್ಷೆಯಾಗಿರುತ್ತದೆ. ಸುರಕ್ಷತೆಯ ದೃಷ್ಟಿಯಿಂದಲೂ ಹಿಜಾಬ್‌ದಿಂದ ಅಡಚಣೆ ನಿರ್ಮಾಣವಾಗುತ್ತದೆ. ಮುಖವನ್ನು ಮುಚ್ಚಿಕೊಂಡಿರುವ ವ್ಯಕ್ತಿಯನ್ನು ಗುರುತಿಸುವುದು ಕಠಿಣವಾಗುತ್ತದೆ. ಆದುದರಿಂದ ಅನೇಕ ಪಾಶ್ಚಾತ್ಯ ದೇಶಗಳಲ್ಲಿ ಹಿಜಾಬ್ ಬಳಸುವುದು ಅಪಾಯಕಾರಿಯಾಗಿದೆ ಎಂದು ತಿಳಿಯಲಾಗುತ್ತದೆ. ಇದರ ಪರಿಣಾಮವೆಂದು ೧೨ ಯುರೋಪಿಯನ್ ದೇಶಗಳಲ್ಲಿ ಒಂದಲ್ಲ ಒಂದು ರೂಪದಲ್ಲಿ ಹಿಜಾಬ್‌ಅನ್ನು ಬಹಿಷ್ಕರಿಸಲಾಗಿದೆ.

ಫ್ರಾನ್ಸ್, ಬೆಲ್ಜಿಯಮ್, ಆಸ್ಟ್ರಿಯಾ, ನೆದರಲ್ಯಾಂಡ್ ಮತ್ತು ಸ್ವಿಡ್ಝರಲ್ಯಾಂಡ್ ಈ ದೇಶಗಳಲ್ಲಿ ಎಲ್ಲ ಪ್ರಕಾರದ ಹಿಜಾಬ್‌ಗಳ ಮೇಲೆ ಸಂಪೂರ್ಣ ನಿರ್ಬಂಧವಿದೆ. ಜರ್ಮನಿ, ಸ್ಪೇನ್, ಇಟಲಿ, ಡೆನ್ಮಾರ್ಕ್, ಲ್ಯಟವಿಯಾ, ಬೊಸ್ನಿಯಾ ಮತ್ತು ಹೆಜೆಗೋವಿನಾ ಈ ದೇಶಗಳಲ್ಲಿ ಈ ನಿರ್ಬಂಧವು ಸೀಮಿತ ಪ್ರಮಾಣದಲ್ಲಿದೆ. ಈ ಎಲ್ಲ ದೇಶಗಳು ಹಿಜಾಬ್‌ಗೆ ಜಗತ್ತಿನಲ್ಲಿ ಯಾವುದೇ ಸ್ಥಾನವಿಲ್ಲವೆಂದು ಹೇಳುತ್ತವೆ. ಇದರ ಬಗ್ಗೆ ಟೀಕೆಯನ್ನು ಮಾಡುವವರು ಇದಕ್ಕೆ ‘ಇಸ್ಲಾಮ್ ಬಗೆಗಿನ ಭಯ ಅಥವಾ ತಿರಸ್ಕಾರ’ ಎಂದು ಹೆಸರಿಡುತ್ತಾರೆ. ಲಂಡನ್, ವಿಯೆನ್ನಾ, ಪ್ಯಾರೀಸ್ ಮತ್ತು ಬರ್ಲಿನ್ ಈ ಸ್ಥಳಗಳಲ್ಲಿ ಹಿಜಾಬ್ ಧರಿಸಿದ ಮುಸಲ್ಮಾನ ಮಹಿಳೆಯರ ಮೇಲೆ ಹಲ್ಲೆ ಮಾಡಿ ಅವರ ಹಿಜಾಬ್‌ಗಳನ್ನು ಹರಿಯಲಾಯಿತು, ಅವರು ಇಂತಹ ಘಟನೆಗಳ ಉದಾಹರಣೆಗಳನ್ನು ಕೊಡುತ್ತಾರೆ.

ಪಾಶ್ಚಾತ್ಯ ದೇಶಗಳಲ್ಲಿರುವ ಮುಸಲ್ಮಾನ ಮಹಿಳೆಯರು ತಮ್ಮ ಧರ್ಮದ ಪರಿಚಯ ಮತ್ತು ಸಾಂಸ್ಕೃತಿಕ ಐಕ್ಯತೆಯೇ ಹಿಜಾಬ್‌ನ್ನು ಧರಿಸುವ ಕಾರಣವಾಗಿದೆ ಎಂದು ಹೇಳುತ್ತಾರೆ. ಇದರಿಂದ ಕೆಲವು ಕಂಪನಿಗಳು ತಮ್ಮ ಜಾಹೀರಾತುಗಳಲ್ಲಿ ಹಿಜಾಬ್‌ಗೆ ಪ್ರಸಿದ್ದಿಯನ್ನು ನೀಡುತ್ತಿವೆ. ‘ಗ್ಯಾಪ್ಸ ೨೦೧೮ ಈ ಕಂಪನಿಯ ಮೂಲಕ ಮಾಡಿದ ‘ಬ್ಯಾಕ್ ಟು ಸ್ಕೂಲ್’ (ಪುನಃ ಶಾಲೆಗೆ ಹೋಗಿರಿ !) ಈ ಅಭಿಯಾನದಲ್ಲಿ ಹಿಜಾಬ್ ಧರಿಸಿದ ಓರ್ವ ಹುಡುಗಿಯ ಛಾಯಾಚಿತ್ರವನ್ನು ಪ್ರಕಟಿಸಲಾಗಿದೆ. ಆನ್‌ಲೈನ್ ಬಟ್ಟೆಗಳನ್ನು ಮಾರಾಟ ಮಾಡುವ ‘ನೈಕ್’ ಕಂಪನಿಯು ಹಿಜಾಬ್‌ಗಳ ಮಾರಾಟ ಮಾಡುತ್ತದೆ.

೯. ಮುಸಲ್ಮಾನ ಮಹಿಳೆಯರ ಮೇಲೆ ಅನ್ಯಾಯ

ಇನ್ನೊಂದು ಬದಿಯಿಂದ ನಾವು ಸಾವಿರಾರು ಮುಸಲ್ಮಾನ ಮಹಿಳೆಯರ ವಿಚಾರವನ್ನು ಮಾಡಿದರೆ ಹಿಜಾಬ್ ಅವರಿಗೆ ಪರ್ಯಾಯವಾಗಿರದೇ, ಅದನ್ನು ಧರಿಸಲು ಅವರ ಮೇಲೆ ಕಡ್ಡಾಯವನ್ನು ಮಾಡಲಾಗುತ್ತದೆ. ಹಿಜಾಬ್ ಧರಿಸದಿದ್ದರೆ ಮಹಿಳೆಯರಿಗೆ ಶಿಕ್ಷಿಸುವ ಭಯವನ್ನೂ ತೋರಿಸಲಾಗುತ್ತದೆ.

ಕೆಲವೊಮ್ಮೆ ಹಿಜಾಬ್ ಧರಿಸಿಲ್ಲವೆಂದು ಮಹಿಳೆಯರ ಹತ್ಯೆಯನ್ನು ಮಾಡಲಾಗುತ್ತದೆ. ಕೆಲವೊಂದು ಘಟನೆಗಳಲ್ಲಿ ಅಜ್ಞಾತ ವ್ಯಕ್ತಿಗಳಿಂದ ಹಿಜಾಬ್ ಧರಿಸದ ಮಹಿಳೆಯರ ಹತ್ಯೆಯಾಗುತ್ತದೆ, ಕೆಲವೆಡೆ ಅವರ ಪಾಲಕರಿಂದ ಹತ್ಯೆಯಾಗುತ್ತದೆ ಮತ್ತು ಕೆಲವೆಡೆ ಭಯೋತ್ಪಾದಕರಿಂದ ಅವರ ಹತ್ಯೆಯಾಗುತ್ತದೆ. ಜಗತ್ತಿನಲ್ಲಿ ದೊಡ್ಡ ಪ್ರಮಾಣದಲ್ಲಿ ಇಸ್ಲಾಮ್ ಸಮೂಹದ ಒತ್ತಡವನ್ನು ಹೆಚ್ಚಿಸಲು ಮತ್ತು ಮಹಿಳೆಯರ ಮೇಲೆ ನಿರ್ಬಂಧಗಳನ್ನು ಹೇರಲು ಹಿಜಾಬ್‌ನ್ನು ಬಳಸಲಾಗುತ್ತದೆ. ೨೦೧೭ ರಲ್ಲಿ ಇರಾನ್‌ನಲ್ಲಿ ಕೆಲವು ಮಹಿಳೆಯರು ತಾವು ಹಿಜಾಬ್ ಧರಿಸುವುದಿಲ್ಲವೆಂದು ನಿರ್ಣಯವನ್ನು ತೆಗೆದುಕೊಂಡರು. ಅವರು ಇದರ ಬಗ್ಗೆ ಪ್ರತಿಭಟನೆ ಮಾಡಿದರು. ಇರಾನ್ ಸರಕಾರವು ಇದರ ಬಗ್ಗೆ ಕಠಿಣ ಕ್ರಮವನ್ನು ಕೈಗೊಳ್ಳುತ್ತಾ ೪೦ ಕ್ಕಿಂತ ಹೆಚ್ಚು ಮಹಿಳೆಯರನ್ನು ಬಂಧಿಸಿತು ಮತ್ತು ಹೆಚ್ಚಿನ ಮಹಿಳೆಯರಿಗೆ ದಂಡ ವಿಧಿಸಿತು. ಇದರಿಂದಾಗಿ ಈ ಆಂದೋಲನ ನಿಂತಿತು. ಇರಾನ್‌ನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯವು ನಡೆಯುತ್ತಲೇ ಇದೆ.

ಹಿಜಾಬ್‌ನಿಂದಾದ ಧಾರ್ಮಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಯುದ್ಧಗಳ ಪರಿಣಾಮವನ್ನು ಮುಸಲ್ಮಾನ ಮಹಿಳೆಯರು ಭೋಗಿಸಬೇಕಾಗುತ್ತಿದೆ. ಹಿಜಾಬ್ ಮೇಲಿನ ಧಾರ್ಮಿಕ ಬಂಧನವನ್ನು ತೆಗೆದರೆ ಅದೊಂದು ಬಟ್ಟೆಯ ತುಂಡಾಗುವುದು. ಒಂದು ವೇಳೆ ಓರ್ವ ಮಹಿಳೆಗೆ ಹಿಜಾಬ್‌ನಿಂದಾಗಿ ತನ್ನ ಗುರುತಿದೆ ಎಂದು ಅನಿಸಿದರೆ ಅವಳು ಅದನ್ನು ಧರಿಸಬೇಕು ಮತ್ತು ಒಂದು ವೇಳೆ ಓರ್ವ ಮಹಿಳೆಗೆ ಅದು ಬೇಡವಾಗಿದ್ದರೆ ಅವಳು ಅದನ್ನು ಧರಿಸಬಾರದು. ವಾಸ್ತವದಲ್ಲಿ ಹೀಗಿರಬೇಕು. ಇದು ಸಾಧ್ಯವಿದೆ; ಆದರೆ ಅದು ಹಾಗಾಗುವುದಿಲ್ಲ; ಏಕೆಂದರೆ ಧಾರ್ಮಿಕ ಬಟ್ಟೆಗಳು, ಗರ್ಭಪಾತ, ಒಂಟಿಯಾಗಿರುವುದು, ಪುರುಷರೊಂದಿಗೆ ಗೆಳೆತನ ಮಾಡುವುದು, ತಮ್ಮ ಜೊತೆಗಾರರನ್ನು ತಾವೇ ಆಯ್ದುಕೊಳ್ಳುವುದು ಮುಂತಾದ ವಿಷಯಗಳಲ್ಲಿ ಮಹಿಳೆಯರಿಗೆ ಏನು ಮಾಡಬೇಕು ? ಎಂಬುದನ್ನು ನಾವೇ ನಿರ್ಧರಿಸುವವರಿದ್ದೇವೆ ಎಂದು ಮುಸಲ್ಮಾನ ಪುರುಷರಿಗೆ ಅನಿಸುತ್ತದೆ.

– ಪಲ್ಕಿ ಶರ್ಮಾ ಉಪಾಧ್ಯಾಯ, ಪತ್ರಕರ್ತೆ (ಆಧಾರ : ‘WIONews‘ನ ಜಾಲತಾಣ)