Pressure To Remove Hijab Ban: ಹಿಜಾಬ್ ಮತ್ತು ಬುರ್ಖಾ ಮೇಲಿನ ನಿಷೇಧವನ್ನು ತೆಗೆದುಹಾಕಲು ಮುಸ್ಲಿಮರಿಂದ ಒತ್ತಡ !

ನಿಷೇಧವನ್ನು ಹಿಂತೆಗೆದುಕೊಳ್ಳದಿರಲು ಆಚಾರ್ಯ ಮರಾಠೆ ಕಾಲೇಜಿನ ನಿರ್ಧಾರ !

ಮುಂಬಯಿ – ಚೆಂಬೂರಿನ ಆಚಾರ್ಯ ಮರಾಠೆ ಕಾಲೇಜಿನ ಆಡಳಿತವು 2023 ರಲ್ಲಿ ಹಿಜಾಬ್ ಮತ್ತು ಬುರ್ಖಾ ನಿಷೇಧಿಸಿತ್ತು. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಈ ನಿಷೇಧವನ್ನು ಹಿಂತೆಗೆದುಕೊಳ್ಳಬೇಕು, ಎಂದು ಕೆಲವು ದಿನಗಳಿಂದ ಮುಸ್ಲಿಮರು ಕಾಲೇಜು ಆಡಳಿತದ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದ್ದಾರೆ. ಈ ವಿಷಯದಲ್ಲಿ ಕೆಲವು ಮುಸ್ಲಿಂ ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ಕಾಲೇಜಿನ ಆಡಳಿತ ಮಂಡಳಿಯು ಮಾತ್ರ ಈ ಒತ್ತಡಕ್ಕೆ ಮಣಿಯದಿರಲು ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಹಿಜಾಬ್ ಮತ್ತು ಬುರ್ಖಾ ನಿಷೇಧವನ್ನು ಮುಂದುವರೆಸಲು ನಿರ್ಧರಿಸಿದೆ.

ಆಗಸ್ಟ್ 2023 ರಲ್ಲಿ, ಆಚಾರ್ಯ ಮರಾಠೆ ಕಾಲೇಜಿನ ಪರಿಸರದಲ್ಲಿ ಹಿಜಾಬ್ ಮತ್ತು ಬುರ್ಖಾ ಧರಿಸುವ ಬಗ್ಗೆ ನಿಷೇಧವನ್ನು ಹೇರಲಾಗಿತ್ತು. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಆಘಾತವಾಗಿದೆಯೆಂದು ಸದ್ದು ಮಾಡಿ, ಮುಸಲ್ಮಾನ ಸಮಾಜದ ಕೆಲವು ಗುಂಪಿನ ಜನರು ಇದನ್ನು ವಿರೋಧಿಸಿದ್ದರು. ಈ ವರ್ಷ ಪೋಷಾಕಿನ ವಿರುದ್ದ ಪ್ರಸಾರ ಮಾಡಿರುವ ಸೂಚನೆಯಲ್ಲಿಯೂ ಕಾಲೇಜಿನ ಆಡಳಿತ ಮಂಡಳಿಯು ಬುರ್ಖಾ, ನಿಕಾಬ್, ಹಿಜಾಬ್ ಬಿಲ್ಲಾ, ಟೊಪ್ಪಿಗೆ ಮುಂತಾದ ಧರ್ಮಕ್ಕೆ ಸಂಬಂಧಿಸಿದ ಉಡುಪನ್ನು ಧರಿಸಿ ಕಾಲೇಜಿಗೆ ಬರುವುದನ್ನು ನಿಷೇಧಿಸಿರುವುದಾಗಿ  ಉಲ್ಲೇಖಿಸಿದೆ. ಈ ಕುರಿತು ಮೇ 13 ರಂದು 30 ವಿದ್ಯಾರ್ಥಿಗಳು ಕಾಲೇಜು ಆಡಳಿತಕ್ಕೆ ಮನವಿ ಸಲ್ಲಿಸಿ ಉಡುಪಿನ ಕುರಿತು ಕೈಕೊಂಡಿರುವ ನಿಯಮಾವಳಿಗಳನ್ನು ರದ್ದುಗೊಳಿಸಲು ವಿನಂತಿಸಿದೆ.

ಸಂಪಾದಕೀಯ ನಿಲುವು

ಶಿಕ್ಷಣವನ್ನು ತೆಗೆದುಕೊಳ್ಳುವಾಗ ಧಾರ್ಮಿಕ ಗುರುತನ್ನು ರಕ್ಷಿಸುವ  ವಿಷಯದಲ್ಲಿ ತಥಾಕಥಿತ ನಿಧರ್ಮಿಗಳ ಗುಂಪು ಏಕೆ ಸುಮ್ಮನಿದೆ ?