ಮುಸ್ಲಿಂ ಮಹಿಳೆ ಯಾವುದೇ ಉನ್ನತ ಹುದ್ದೆಯಲ್ಲಿದ್ದರೂ, ಹಿಜಾಬ್ ಧರಿಸಲೇಬೇಕು !

ಅಸ್ಸಾಂನ ಸಂಸದ ಬದ್ರುದ್ದೀನ್ ಅಜ್ಮಲ್ ಅವರ ಹೇಳಿಕೆ

ಕರೀಂಗಂಜ (ಬಿಹಾರ) – ಮುಸ್ಲಿಂ ಮಹಿಳಾ ವೈದ್ಯೆ, ಐ.ಎ.ಎಸ್., ಐ.ಪಿ.ಎಸ್. ಇಂತಹ ಯಾವುದೇ ಉನ್ನತ ಹುದ್ದೆಯಲ್ಲಿರಲಿ, ಆಕೆ ತನ್ನ ಕೂದಲನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಅಥವಾ ಹಿಜಾಬ ಧರಿಸದಿದ್ದರೆ, ಅವರನ್ನು ಮುಸ್ಲಿಂ ಎಂದು ಹೇಗೆ ಪರಿಗಣಿಸುವುದು ? ಎಂದು ಸಂಸದ ಬದ್ರುದ್ದೀನ್ ಅಜ್ಮಲ್ ಇಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಹೇಳಿದರು.

‘ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್’ ಪಕ್ಷದ ಸದಸ್ಯ ಅಜಮಲ ಮಾತನಾಡಿ, ಹುಡುಗಿಯರು ಕೂದಲನ್ನು ಬಿಚ್ಚಿ ಕೊಂಡಿರುವುದು, ಸೈತಾನನ ಕೈಯಲ್ಲಿನ ಹಗ್ಗದಂತೆ. ಮಾರುಕಟ್ಟೆಗೆ ಹೋಗುತ್ತಿದ್ದರೆ, ಸಮಾಜದಲ್ಲಿ ಓಡಾಡುತ್ತಿದ್ದರೆ, ನೀವು ಹಿಜಾಬ್ ಧರಿಸಲೇಬೇಕು. ಅಲ್ಲದೆ, ಹುಡುಗಿ ಅಥವಾ ಮಹಿಳೆಯರ ದೃಷ್ಟಿ ಯಾವಾಗಲೂ ಕೆಳಗೆ ಬಾಗಿರಬೇಕು ಎಂದು ಹೇಳಿದರು.

ಸಂಪಾದಕೀಯ ನಿಲುವು

ಮಹಿಳಾ ಸಬಲೀಕರಣದ ಬಗ್ಗೆ ದೊಡ್ಡದಾಗಿ ಮಾತನಾಡುವವರು ಮತ್ತು ಹಿಂದೂ ಸಂಪ್ರದಾಯಗಳನ್ನು ಸ್ತ್ರೀ ವಿರೋಧಿ ಎಂದು ಲೇವಡಿ ಮಾಡುವ ಪ್ರಗತಿ(ಅಧೋ)ಪರರು ಈಗ ಯಾವ ಬಿಲದಲ್ಲಿ ಅಡಗಿ ಕುಳಿತಿದ್ದಾರೆ ?